RCB ಜೊತೆಗಿನ ಪಂದ್ಯಕ್ಕೆ 1ದಿನದ ಮುನ್ನ ಉಲ್ಟಾ ಹೊಡೆದ ಸನ್ ರೈಸರ್ಸ್ ನಾಯಕ ವಾರ್ನರ್
ಐಪಿಎಲ್ 2020ನ ಹದಿನಾಲ್ಕನೇ ಆವೃತ್ತಿ ಎರಡು ದಿನದ ಹಿಂದೆ ಆರಂಭಗೊಂಡಿದೆ. ಕ್ರೀಡಾವಳಿ ಆರಂಭವಾದ ಎರಡನೇ ಪಂದ್ಯವೇ ಟೈ ಆಗಿ ಸೂಪರ್ ಓವರ್ ನಲ್ಲಿ ಶ್ರೇಯಸ್ ಅಯ್ಯರ್ ಪಡೆ ಜಯ ಸಾಧಿಸಿತ್ತು.
ಕ್ರೀಡಾವಳಿಯ ಮೂರನೇ ಪಂದ್ಯ ಸೋಮವಾರ (ಸೆ 21) ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೇವಿಡ್ ವಾರ್ನರ್ ನೇತೃತ್ವದ ಸರ್ ರೈಸರ್ಸ್ ಹೈದರಾಬಾದ್ ನಡುವೆ ದುಬೈನಲ್ಲಿ ನಡೆಯಲಿದೆ
ಪ್ರೇಕ್ಷಕರಿಲ್ಲದೇ ಖಾಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಈ ವಾತಾವರಣಕ್ಕೆ ಆಟಗಾರರು ಹೊಂದಿಕೊಳ್ಳಬೇಕಿದೆ. ಹಲವು ಮಾಜಿ/ಹಾಲೀ ಕ್ರಿಕೆಟಿಗರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಅಂತರಾಷ್ಟ್ರೀಯ ಪಂದ್ಯವೊಂದು ಮುಗಿದ ನಂತರ, ಖಾಲಿ ಮೈದಾನವೇ ಬೆಸ್ಟ್ ಎಂದಿದ್ದ ವಾರ್ನರ್, ಈಗ, ಉಲ್ಟಾ ಹೊಡೆದಿದ್ದಾರೆ. ವಾರ್ನರ್ ಹೇಳಿದ್ದು ಹೀಗೆ:

ಆಸ್ಟ್ರೇಲಿಯಾ ಆಟಗಾರರಾದ ವಾರ್ನರ್ ಮತ್ತು ಸ್ಟೀವ್ ಸ್ಮಿತ್
"ಇಂಗ್ಲೆಂಡ್‌ನಲ್ಲಿ ವೀಕ್ಷಕರು ನಿಂದಿಸುವ ಕಾರಣಕ್ಕಾಗಿಯೇ ಇಂಗ್ಲೆಂಡ್‌ನಲ್ಲಿ ಆಡುವಾಗ ವೀಕ್ಷಕರಿಲ್ಲದ ಮೈದಾನವೇ ಚಂದ" ಎಂದು ವಾರ್ನರ್ ಹೇಳಿದ್ದರು. ಆಸ್ಟ್ರೇಲಿಯಾ vs ಇಂಗ್ಲೆಂಡ್ ಮೊದಲ ಟಿ20ಐ ಪಂದ್ಯ ಖಾಲಿ ಮೈದಾನದಲ್ಲಿ ನಡೆದಿತ್ತು. ಇಂಗ್ಲೆಂಡ್ ಪ್ರೇಕ್ಷಕರರು, ಆಸ್ಟ್ರೇಲಿಯಾ ಆಟಗಾರರಾದ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಗೆ ಪ್ರೋತ್ಸಾಹ ನೀಡಿದ್ದಕ್ಕಿಂತಲೂ ಗೇಲಿ ಮಾಡಿದ್ದೇ ಹೆಚ್ಚು.

ಆರ್ಸಿಬಿ ಜೊತೆಗಿನ ಪಂದ್ಯಕ್ಕೆ ಒಂದು ದಿನದ ಮುನ್ನ
ಆರ್ಸಿಬಿ ಜೊತೆಗಿನ ಪಂದ್ಯಕ್ಕೆ ಒಂದು ದಿನದ ಮುನ್ನ ಮಾಧ್ಯಮವರೊಂದಿಗೆ (ವರ್ಚುಯಲ್) ಮಾತನಾಡುತ್ತಿದ್ದ ವಾರ್ನರ್, "ಮುಂಬರುವ ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ವೇಳೆ,ಪ್ರೇಕ್ಷಕರಿಗೆ ಅವಕಾಶ ನೀಡಬೇಕು"ಎಂದು ವಾರ್ನರ್ ಮನವಿ ಮಾಡಿದ್ದಾರೆ.

ಶೇ.25ರಷ್ಟು ಪ್ರೇಕ್ಷಕರಾದರೂ ಮೈದಾನಕ್ಕೆ ಬರಲು ಅವಕಾಶ ನೀಡಬೇಕು
ಕನಿಷ್ಠ ಪಕ್ಷ ಶೇ.25ರಷ್ಟು ಪ್ರೇಕ್ಷಕರಾದರೂ ಮೈದಾನಕ್ಕೆ ಬರಲು ಅವಕಾಶ ನೀಡಬೇಕು. ವಿಶ್ವದ ಎರಡು ಬಲಿಷ್ಠ ತಂಡಗಳು ಸೆಣಸಾಟವನ್ನು ನಾನು ಕಾತುರದಿಂದ ಕಾಯುತ್ತಿದ್ದೇನೆ. ಇತ್ತೀಚೆಗೆ ಕೆಲವು ಫುಟ್ಭಾಲ್ ಪಂದ್ಯಗಳಲ್ಲಿ ಕಮ್ಮಿ ಸಂಖ್ಯೆಯಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು"ಎಂದು ವಾರ್ನರ್ ಹೇಳಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ
"ಬಾಕ್ಸಿಂಗ್ ಡೇ ಅಂತಹ ಪ್ರತಿಷ್ಠಿತ ಪಂದ್ಯದ ವೇಳೆ, ಪ್ರೇಕ್ಷಕರು ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ಕ್ರಿಕೆಟ್ ಆಸ್ಟ್ರೇಲಿಯಾ, ನಮ್ಮ ಸರಕಾರಕ್ಕೆ ಮನವಿ ಮಾಡಿದೆ. ಸರಕಾರದಿಂದ ಸಕಾರಾತ್ಮಕ ಸೂಚನೆ ಬರುತ್ತದೆ ಎನ್ನುವ ನಂಬಿಕೆಯಲ್ಲಿ ನಾವಿದ್ದೇವೆ"ಎಂದು ವಾರ್ನರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications