ಭಾರತ ಹಾಗೂ ವಿಶ್ವ XI ನಡುವೆ ಪಂದ್ಯ ಆಯೋಜನೆಗೆ ಬಿಸಿಸಿಐಗೆ ಮನವಿ ಮಾಡಿದ ಸರ್ಕಾರ: ವರದಿ

ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗುತ್ತಿರುವ ಹಿನ್ನಲೆಯಲ್ಲಿ ವಿಶ್ವ X1 ವಿರುದ್ಧ ಕ್ರಿಕೆಟ್ ಪಂದ್ಯವನ್ನಾಡಲು ಭಾರತ ಸರ್ಕಾರ ಬಯಸಿದ್ದು ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ. ಮುಂಬರುವ ಆಗಸ್ಟ್ 22ರಂದು ಈ ಪಂದ್ಯವನ್ನು ಆಯೋಜನೆ ಮಾಡಲು ಮನವ ಮಾಡಲಾಗಿದೆ ಎನ್ನಲಾಗಿದೆ.
ಮೂಲಗಳ ಮಾಹಿತಿಯ ಪ್ರಕಾರ ಸಂಸ್ಕೃತಿ ಸಚಿವಾಲಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮಂಡಳಿಯ ಜೊತೆಗೆ ಚರ್ಚೆಯನ್ನು ಕೂಡ ನಡೆಸಿದ್ದು ಭಾರತೀಯ ಆಟಗಾರರ ಜೊತೆಗೆ ವಿದೇಶಿ ಆಟಗಾರರು ಕೂಡ ಈ ಪಂದ್ಯದಲ್ಲಿ ಭಾಗಯಾಗಬೇಕೆಂದು ಬಯಸಿದೆ. ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಅಭೊಯಾನದ ಅಂಗವಾಗಿ ಈ ಪಂದ್ಯವನ್ನು ಆಯೋಜಿಸಲು ಚಿಂತನೆ ನಡೆಸಲಾಗಿದೆ.

ಚರ್ಚೆಯ ಹಂತದಲ್ಲಿದೆ
ಈ ಬಗ್ಗೆ ಬಿಸಿಸಿಐ ಪ್ರತಿಕ್ರಿಯಿಸಿದ್ದು ಈ ಪ್ರಸ್ತಾವನೆ ಈಗ ಕೇವಲ ಚರ್ಚೆಯ ಹಂತದಲ್ಲಿದೆ. ಈ ಪಂದ್ಯ ಆಯೋಜಿಸಲು ಕೆಲ ಸವಾಲುಗಳಿದ್ದು ಅಂತಾರಾಷ್ಟ್ರೀಯ ಕ್ರಿಕೆಟಿಗ ಲಭ್ಯತೆಯನ್ನು ಖಾತರಿಪಡಿಸಲು ಅಡ್ಡಿಯಾಗುತ್ತಿದೆ ಎಂದಿದೆ. ಹೀಗಾಗಿ ಈ ಪ್ರಸ್ತಾವನೆಯನ್ನು ಬಿಸಿಸಿಐ ಯಾವ ರೀತಿಯಾಗಿ ಪರಿಗಣಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪ್ರಸ್ತಾವನೆ ಸ್ವೀಕರಿಸಿದ್ದೇವೆ
ಈ ಪ್ರಸ್ತಾವನೆಯ ಬಗ್ಗೆ ಬಿಸಿಸಿಐ ಮೂಲಗಳು ಪ್ರತಿಕ್ರಿಯೆ ನೀಡಿದೆ. "ಭಾರತ ಹಾಗೂ ವಿಶ್ವ XI ಮಧ್ಯೆ ಆಗಸ್ಟ್ 22ರಂದು ಕ್ರಿಕೆಟ್ ಆಯೋಜನೆ ಬಗ್ಗೆ ಭಾರತ ಸರ್ಕಾರದಿಂದ ನಾವು ಪ್ರಸ್ತಾವನೆಯನ್ನು ಸ್ವೀಕರಿಸಿದ್ದೇವೆ. ವಿಶ್ವ ತಂಡದಲ್ಲಿ ನಾವು ಕನಿಷ್ಠ 13ರಿಂದ 14 ಆಟಗಾರರು ಅಗತ್ಯವಿದ್ದು ಅವರ ಲಭ್ಯತೆಯ ಬಗ್ಗೆ ಪರೀಕ್ಷಿಸಿಕೊಳ್ಳುವ ಅಗತ್ಯವಿದೆ" ಎಂದು ಬಿಸಿಸಿಐ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಎನ್‌ಡಿ ಟಿವಿ ವರದಿ ಮಾಡಿದೆ.

ಭಾರತದ ಸ್ಟಾರ್ ಆಟಗಾರರು ಲಭ್ಯ
ಇನ್ನು ಈ ಪಂದ್ಯ ಆಯೋಜನೆ ಸಾಧ್ಯವಾದಲ್ಲಿ ಭಾರತದ ಸ್ಟಾರ್ ಆಟಗಾರರು ಲಭ್ಯವಾಗುವುದರಲ್ಲಿ ಅನುಮಾನವಿಲ್ಲ ಎಂದು ಮೂಲಗಳು ತಿಳಿಸಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಾ ಆಟಗಾರರು ಈ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎನ್ನಲಾಗಿದೆ. ಮುಂದಿನ ತಿಂಗಳು ಜಿಂಬಾಬ್ವೆ ಪ್ರವಾಸವನ್ನು ಭಾರತ ತಂಡ ಕೈಗೊಳ್ಳಲಿದ್ದು ಕೆಲ ಸ್ಟಾರ್ ಆಟಗಾರರು ಈ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಪ್ರಸ್ತಾವಿತ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ. ಇನ್ನು ಸರ್ಕಾರ ಅಂದುಕೊಂಡಂತೆ ನಡೆದರೆ ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications