Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದ್ರಾವಿಡ್ ಮುಂದಿದೆ ಮಹಾ ಸವಾಲು: ದ್ರಾವಿಡ್ ಬೆಂಬಲಕ್ಕೆ ನಿಂತ ದ. ಆಫ್ರಿಕಾ ದಿಗ್ಗಜ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಎರಡನೇ ಬಾರಿ ಸೋಲು ಅನುಭವಿಸಿದ ಬಳಿಕ ಟೀಮ್ ಇಂಡಿಯಾದ ಕೆಲ ಅನುಭವಿ ಆಟಗಾರರ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿರುವಂತೆಯೇ ತಂಡದ ಕೋಚ್ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಪರಿಣಾಮಕಾರಿಯಾಗಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ ಈ ಸಂದರ್ಭದಲ್ಲಿ ಕೋಚ್ ದ್ರಾವಿಡ್ ಬೆಂಬಲಕ್ಕೆ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಗ್ರೇಮ್ ಸ್ಮಿತ್ ನಿಂತಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ 209 ರನ್‌ಗಳ ಬೃಹತ್ ಅಂತರದಿಂದ ಸೋಲು ಅನುಭವಿಸಿದ್ದು ಸತತ ಎರಡನೇ ಬಾರಿಗೆ ಚಾಂಪಿಯನ್ ಟ್ರೋಪಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಈ ಬಗ್ಗೆ ಗ್ರೇಮ್ ಸ್ಮಿತ್ ಮಾತನಾಡಿದ್ದು ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಮುಂದೆ ಬಹಳ ದೊಡ್ಡ ಸವಾಲು ಮುಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಅವರು ತಂಡವನ್ನು ಕಟ್ಟಲು ದ್ರಾವಿಡ್‌ಗೆ ನ್ಯಾಯಯುತವಾದ ಸಮಯವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Greame Smith backs Indian coach Rahul Dravid said Give him fair opportunity to rebuild India

"ನೀವು ಭಾರತೀಯ ಕ್ರಿಕೆಟ್‌ನಲ್ಲಿ ಲೀಡರ್‌ಶಿಪ್ ಜವಾಬ್ಧಾರಿ ವಹಿಸಿಕೊಂಡಾಗ ದೊಡ್ಡ ಮಟ್ಟದ ನಿರೀಕ್ಷೆ ನಿಮ್ಮ ಮೇಲಿರುತ್ತದೆ. ಗುಣಮಟ್ಟದ ಆಟಗಾರರ ಬಹಳ ದೊಡ್ಡ ಪಡೆಯಿಲ್ಲಿದೆ. ಎರಡು ಅಥವಾ ಮೂರು ತಂಡಗಳನ್ನು ಒಟ್ಟಿಗೆ ಸೇರಿಸಬಹುದಾದ ಪ್ರಮಾಣದ ಆಟಹಾರರು ಇದ್ದಾರೆ. ಅವರಲ್ಲಿ ಸಮತೋಲಿತ ತಂಡವನ್ನು ಆಯ್ದುಕೊಳ್ಳುವುದು ದೊಡ್ಡ ಸವಾಲಾಗಿರುತ್ತದೆ" ಎಂದಿದ್ದಾರೆ ಗ್ರೇಮ್ ಸ್ಮಿತ್.

"ರಾಹುಲ್ ದ್ರಾವಿಡ್ ಮತ್ತು ಅವರ ಆಯ್ಕೆ ಮಂಡಳಿಗೆ ಇರುವ ಭಾರತ ತಂಡದಲ್ಲಿ ದೊಡ್ಡ ಸವಾಲೆಂದರೆ ತಂಡಗಳನ್ನು ಸಮತೋಲನದಿಂದ ಆಯ್ಕೆ ಮಾಡುವುದು, ನಿಮ್ಮ ಪ್ರವಾಸದ ವೇಳಾಪಟ್ಟಿಗಳನ್ನು ವಿಭಿನ್ನ ಮಾದರಿಗಳಿಗೆ ಅನುಗುಣವಾಗಿ ಸಮತೋಲನಗೊಳಿಸುವುದು, ಹೀಗೆ ಕೆಲ ದೊಡ್ಡ ನಿರ್ಧಾರಗಳನ್ನು ಅವರು ತೆಗೆದುಕೊಳ್ಳಬೇಕಾಗುತ್ತದೆ. ಇದರಲ್ಲಿ ಅವರು ಹೇಗೆ ಮುಂದಿನ ಹೆಜ್ಜೆ ತೆಗೆದುಕೊಳ್ಳಯತ್ತಾರೆ ಎಂಬುದು ಬಹಳ ಮುಖ್ಯವಾಗುತ್ತದೆ" ಎಂದಿದ್ದಾರೆ ಗ್ರೇಮ್ ಸ್ಮಿತ್.

"ಅವರು ಅತ್ಯುತ್ತಮ ಗುಣಮಟ್ಟದ ವ್ಯಕ್ತಿ ಮತ್ತು ಅಷ್ಟೇ ಉತ್ತಮವಾದ ಕ್ರಿಕೆಟಿಗ. ಕೋಚ್ ಆಗಿಯೂ ಅವರು ಸರಿಯಾದ ಹೆಜ್ಜೆಯಿಟ್ಟಿದ್ದಾರೆ. ಹಾಗಾಗಿ ಭಾರತ ತಂಡವನ್ನು ಮತ್ತೆ ಕಟ್ಟಲು ಅವರಿಗೆ ನ್ಯಾಯಯುತವಾದ ಸಮಯಾವಕಾಶವನ್ನು ನೀಡಬೇಕು" ಎಂದಿದ್ದಾರೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ಗ್ರೇಮ್ ಸ್ಮಿತ್.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಕಳೆದ ಋತುವಿನಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮಿದ ಬಳಿಕ ದ್ರಾವಿಡ್ ಮಾರ್ಗದರ್ಶನದಲ್ಲಿಟೀಮ್ ಇಂಡಿಯಾ ಮತ್ತೆ ಹೊಸ ಹುರುಪಿನೊಂದಿಗೆ ಹೊಸ ಆವೃತ್ತಿಗೆ ಸಿದ್ಧವಾಗುತ್ತಿದೆ. ಮುಂದಿನ ತಿಂಗಳು ಕೆರಿಬಿಯನ್‌ ನಾಡಿನಲ್ಲಿ ಹೊಸ WTC ಅಭಿಯಾನವನ್ನು ಪ್ರಾರಂಭಿಸಲಿದೆ. ಮೂರನೇ ಆವೃತ್ತಿಯ ಡಬ್ಲ್ಯುಟಿಸಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ನಂತರ ಟೀಮ್ ಇಂಡಿಯಾ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ODI ಮತ್ತು ಐದು T20I ಪಂದ್ಯಗಳನ್ನು ಆಡಲಿದೆ.

Story first published: Monday, June 19, 2023, 9:13 [IST]
Other articles published on Jun 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+