ದ.ಆಫ್ರಿಕಾ ಕ್ರಿಕೆಟ್‌ನ ಪೂರ್ಣಕಾಲಿಕ ನಿರ್ದೇಶಕನಾಗಿ ಅಧಿಕಾರ ಸ್ವೀಕರಿಸಿದ ಗ್ರೇಮ್ ಸ್ಮಿತ್

ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್‌ಗೆ ಕಳೆದ ಡಿಸೆಂಬರ್‌ನಲ್ಲಿ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರನ್ನು ಮಧ್ಯಂತರ ನಿರ್ದೇಶಕನಾಗಿ ಆಯ್ಕೆ ಮಾಡಲಾಗಿತ್ತು. ಇಂದು ಪೂರ್ಣಕಾಲಿಕ ನಿರ್ದೇಶಕನಾಗಿ ಗ್ರೇಮ್ ಸ್ಮಿತ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಮುಂದಿನ ಎರಡು ವರ್ಷಗಳ ಕಾಲ ಸ್ಮಿತ್ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಬಾಸ್ ಆಗಿ ಮುಂದುವರಿಯಲಿದ್ದಾರೆ.
39 ವರ್ಷದ ಗ್ರೇಮ್ ಸ್ಮಿತ್ ಕಳೆದ ಡಿಸೆಂಬರ್‌ನಲ್ಲಿ ತಮ್ಮ ಮಧ್ಯಂತರ ಅಧಿಕಾರಾವಧಿಯನ್ನು ವಹಿಸಿಕೊಂಡಿದ್ದರು. ಅದಾದ ಬಳಿಕ ಈ ನಾಲ್ಕು ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಲ್ಲಿ ಹೊಸ ಚೈತನ್ಯವನ್ನು ತುಂಬಲು ಸ್ಮಿತ್ ಕಾರಣರಾದರು. ಹೀಗಾಗಿ ಸ್ಮಿತ್ ಕಾರ್ಯವೈಖರಿಯನ್ನು ಪರಿಗಣಿಸಿ ಪೂರ್ಣಕಾಲಿಕ ನಿರ್ದೇಶಕನಾಗಿ ಅವರನ್ನು ನೇಮಕ ಮಾಡುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಇನ್ನು ಪೂರ್ಣಕಾಲಿಕ ನಿರ್ದೇಶಕನಾಗಿ ನೇಮಕವಾದ ಬಳಿಕ ಗ್ರೇಮ್ ಸ್ಮಿತ್ ತಕ್ಷಣವೇ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕನ ವಿಚಾರವಾಗಿ ಸ್ಮಿತ್ ಟೆಸ್ಟ್‌ಗೆ ಹೊಸ ನಾಯಕನನ್ನು ನೇಮಕಮಾಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸದ್ಯ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟನ್ ಡಿಕಾಕ್ ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾಗಲಾರರು ಎಂದು ಸ್ಮಿತ್ ಹೇಳಿದ್ದಾರೆ. ಅವರ ಮೇಲಿನ ಒತ್ತಡವನ್ನು ಕಡಿಮ ಮಾಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ ಸ್ಮಿತ್.
ಕ್ವಿಂಟನ್ ಡಿ ಕಾಕ್ ಏಕದಿನ ಮತ್ತು ಟಿ20 ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ. ಆಟಗಾರನಾಗಿ ಮೂರು ಮಾದರಿಯ ನಾಯಕತ್ವ ವಹಿಸಿಕೊಳ್ಳುವುದು ಸುಲಭವಲ್ಲ, ಹೀಗಾಗಿ ಟೆಸ್ಟ್ ತಂಡದಲ್ಲಿ ಡಿ ಕಾಕ್ ವಿಕೆಟ್ ಕೀಪರ್ ಮತ್ತು ಅನುಭವಿ ಬ್ಯಾಟ್ಸ್‌ಮನ್ ಆಗು ಮುಂದುವರಿಯಲಿದ್ದಾರೆ ಎಂದು ಸ್ಮಿತ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications