
ಗ್ರೇಮ್ ಸ್ಮಿತ್ ಸುಳಿವು
ಈಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಗ್ರೇಮ್ ಸ್ಮಿತ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಡಿವಿಲಿಯರ್ಸ್ ಆಡುವ ಸಾಧ್ಯತೆಯ ಬಗ್ಗೆ ಹೇಳಿದ್ದಾರೆ. ಡಿವಿಲಿಯರ್ಸ್ ಅಲ್ಲದೆ ಅನುಭವಿ ಆಟಗಾರರಾದ ಕ್ರಿಸ್ ಮೋರಿಸ್ ಹಾಗೂ ಇಮ್ರಾನ್ ತಾಹೀರ್ ಕೂಡ ದಕ್ಷಿಣ ಆಫ್ರಿಕಾ ಟಿ20 ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಮಾತನಾಡಿದ್ದಾರೆ.

ಉತ್ತುಂಗದಲ್ಲಿದ್ದಾಗಲೇ ವಿದಾಯ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಉತ್ತುಂಗ ಸ್ಥಾನದಲ್ಲಿದ್ದಾಗಲೇ ಎಬಿ ಡಿವಿಲಿಯರ್ಸ್ 15 ವರ್ಷಗಳ ವರ್ಣರಂಜಿತ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ 2018ರಲ್ಲಿ ವಿದಾಯವನ್ನು ಹೇಳಿದ್ದರು. 34ರ ಹರೆಯದಲ್ಲಿ ಡಿವಿಲಿಯರ್ಸ್ ಈ ನಿರ್ಧಾರವನ್ನು ತೆಗೆದುಕೊಂಡಾಗ ಎಲ್ಲರೂ ಅಚ್ಚರಿಗೊಳಗಾಗಿದ್ದರು. 2018ರ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆಡಿದ ಟೆಸ್ಟ್ ಪಂದ್ಯದ ನಂತರ ವಿದಾಯವನ್ನು ಘೋಷಿಸಿದ್ದರು.

ಲೀಗ್ ಕ್ರಿಕೆಟ್‌ನಲ್ಲಿ ಎಬಿಡಿ ಮಿಂಚು
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ ನಂತರವೂ ಡಿವಿಲಿಯರ್ಸ್ ಸಾಕಷ್ಟು ಲೀಗ್ ಕ್ರಿಕೆಟ್‌ಗಳಲ್ಲಿ ಅದ್ಭುತವಾದ ಪ್ರದರ್ಶನವನ್ನು ಮುಂದುವರಿಸಿದ್ದರು. ಈ ಮೂಲಕ ತನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂಬುದನ್ನು ಸಾರಿದ್ದರು. ಐಪಿಎಲ್‌ನಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿಕೊಂಡು ಬರುತ್ತಿರುವ ಡಿವಿಲಿಯರ್ಸ್ ಈ ಬಾರಿಯ ಟೂರ್ನಿಯಲ್ಲಿಯೂ ಶ್ರೇಷ್ಠ ಫಾರ್ಮ್‌ಅನ್ನು ಮುಂದುವರಿಸಿದ್ದಾರೆ.


Click it and Unblock the Notifications












