ಐಪಿಎಲ್‌ನಲ್ಲಿ ಮುಂದುವರಿಯುವ ನಿರ್ಧಾರ ಆಟಗಾರರದ್ದು: ಗ್ರೇಮ್ ಸ್ಮಿತ್

ಕೊರೊನಾ ವೈರಸ್‌ನ ಆತಂಕದಿಂದಾಗಿ ಆಸ್ಟ್ರೇಲಿಯಾದ ಮೂವರು ಹಾಗೂ ಓರ್ವ ಇಂಗ್ಲೆಂಡ್ ಆಟಗಾರ ಈ ಬಾರಿಯ ಐಪಿಎಲ್‌ನಿಂದ ಅರ್ಧಕ್ಕೆ ವಾಪಾಸಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮಧ್ಯೆ ಕೆಕೆಆರ್ ತಂಡದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದಿದ್ದು ಆಟಗಾರರಲ್ಲಿ ಮತ್ತಷ್ಟು ಆತಂಕಗಳು ಸಹಜವಾಗಿಯೇ ಹೆಚ್ಚಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯ ನಿರ್ದೇಶಕ ಗ್ರೇಮ್ ಸ್ಮಿತ್ ಪ್ರತಿಕ್ರಿಯಿಸಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ಬಯಸಿದರೆ ಅದು ಅವರ ಆಯ್ಕೆ. ಅಂತಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಯಿದ್ದರೆ ಆಟಗಾರರ ನಿರ್ಧಾರವನ್ನು ಗೌರವಿಸಲಾಗುತ್ತದೆ ಎಂದು ಗ್ರೇಮ್ ಸ್ಮಿತ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ನಿರ್ದೇಶಕ ಗ್ರೇಮ್ ಸ್ಮಿತ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಟಗಾರರ ಸಹಾಯಕ್ಕೆ ಯಾವಾಗಲೂ ನಿಂತುಕೊಳ್ಳುತ್ತದೆ. ಸೋಮವಾರ ಐಪಿಎಲ್‌ನಲ್ಲಿ ಕೊರೊನಾ ವೈರಸ್ ಪ್ರಕರಣ ಕಾಣಿಸಿಕೊಂಡ ನಂತರ ಟೂರ್ನಿಯಲ್ಲಿ ಮುಂದುವರಿಯಬೇಕಾ ಎಂಬ ನಿರ್ಧಾರವನ್ನು ಆಟಗಾರರೇ ತೆಗೆದುಕೊಳ್ಳಬಹುದು ಎಂದಿದ್ದಾರೆ.
"ನಾವು ಆಟಗಾರರಿಗೆ ಬೆಂಬಲವನ್ನು ನೀಡಲು ಬಯಸುತ್ತೇವೆ ಜೊತೆಗೆ ಯಾವುದೇ ಸಹಾಯಕ್ಕಾದರೂ ನಿಮ್ಮೊಂದಿಗೆ ಇದ್ದೇವೆ ಎಂದು ತಿಳಿಸಲು ಬಯಸುತ್ತೇವೆ ಎಂದು ಗ್ರೇಮ್ ಸ್ಮಿತ್ ಅವರ ಹೇಳಿಕೆಯನ್ನು ವೆಬ್‌ಸೈಟ್‌ವೊಂದು ಪ್ರಕಟಿಸಿದೆ. ಅಂತಿಮವಾಗಿ ಟೂರ್ನಿಯಲ್ಲಿ ಮುಂದುವರಿಯುವುದು ಅಥವಾ ಹೊರಬರುವುದು ಆಟಗಾರರಿಗೆ ಬಿಟ್ಟ ಸಂಗತಿ ಎಂದು ಸ್ಮಿತ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ಕ್ವಿಂಟನ್ ಡಿಕಾಕ್, ವೇಗಿ ಕಗಿಸೋ ರಬಡಾ, ಮಾಜಿ ನಾಯಕ ಫಾಪ್ ಡು ಪ್ಲೆಸಿಸ್ ಸಹಿತ 11 ಆಟಗಾರರು ಸದ್ಯ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications