ಆತನಂಥಾ ಬೌಲರ್‌ನನ್ನು ನಾನು ನೋಡಿಲ್ಲ: ಭಾರತದ ಮಾಜಿ ವೇಗಿ ಬಗ್ಗೆ ಗ್ರೇಮ್ ಸ್ಮಿತ್ ಪ್ರಶಂಸೆ!

ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಕೆಲ ಅದ್ಭುತ ಆಟಗಾರರು ಕಾಲಿಟ್ಟಿದ್ದು ತಂಡದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿದೆ. ಇನ್ನು ಐಪಿಎಲ್‌ನಿಂದಾಗಿ ಮತ್ತಷ್ಟು ವೇಗದ ಯುವ ಬೌಲರ್‌ಗಳು ಬೆಳಕಿಗೆ ಬರುತ್ತಿದ್ದು ಭಾರತೀಯ ಕ್ರಿಕೆಟ್ ತಂಡದ ಅವಕಾಶಕ್ಕಾಗಿ ಬಾಗಿಲು ಬಡಿಯುತ್ತಿದ್ದಾರೆ.
ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಬಗ್ಗೆ ಗ್ರೇಮ್ ಸ್ಮಿತ್ ವಿಶೇಷ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಭಾರತದ ಈ ಕೌಶಲ್ಯಯುತ ಬೌಲರ್‌ನಂತಾ ಮತ್ತೋರ್ವ ವೇಗಿಯನ್ನು ನಾನು ನನ್ನ ವೃತ್ತಿ ಜೀವನದಲ್ಲಿಯೇ ನೋಡಿಲ್ಲ ಎಂದಿದ್ದಾರೆ ಗ್ರೇಮ್ ಸ್ಮಿತ್.
ಹಾಗಾದರೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಹೇಳಿರುವ ಭಾರತದ ಆ ಮಾಜಿ ವೇಗದ ಬೌಲರ್ ಯಾರು? ಮುಂದೆ ಓದಿ..

ಹರಿಣಗಳ ನಾಡಿನ ಶ್ರೇಷ್ಠ ಆಟಗಾರನಿಗೆ ಕಾಡಿದ್ದ ಭಾರತೀಯ
ಗ್ರೇಮ್ ಸ್ಮಿತ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. 117 ಟೆಸ್ಟ್ ಪಂದ್ಯಗಳನ್ನು ಆಡಿರುವ ಗ್ರೇಮ್ ಸ್ಮಿತ್ 9265 ರನ್‌ಗಳನ್ನು ಗಳಿಸಿದ್ದಾರೆ. ಏಕದಿನ ಮಾದರಿಯಲ್ಲಿ ಸ್ಮಿತ್ 197 ಪಂದ್ಯಗಳನ್ನು ಆಡಿದ್ದು 6,989 ರನ್‌ಗಳಿಸಿದ್ದಾರೆ. ಇಂತಾ ಉತ್ತಮ ರನ್‌ಗಳ ದಾಖಲೆಯನ್ನು ಹೊಂದಿರುವ ಹರಿಣಗಳ ನಾಡಿದ ಆಟಗಾರನಿಗೆ ಭಾರತೀಯ ಬೌಲರ್ ವೃತ್ತಿಜೀವನದಿದ್ದಕ್ಕೂ ಬಹಳ ಕಾಡಿದ್ದಾರೆ. ಅದು ಬೇರೆ ಯಾರೂ ಅಲ್ಲ ಜಹೀರ್ ಖಾನ್.

ಜಹೀರ್‌ಖಾನ್‌ರಂತೆ ಕೌಶಲ್ಯಯುತ ಬೌಲರ್‌ನನ್ನು ನೋಡಿಲ್ಲ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಹೀರ್ ಖಾನ್ ಹಾಗೂ ಗ್ರೇಮ್ ಸ್ಮಿತ್ 27 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಇದರಲ್ಲಿ 14 ಪಂದ್ಯಗಳಲ್ಲಿ ಜಹೀರ್ ಖಾನ್ ಸ್ಮಿತ್ ವಿಕೆಟ್ ಕಬಳಿಸಿದ್ದಾರೆ. ಕ್ರಿಕೆಟ್.ಕಾಮ್ ಜೊತೆಗಿನ ಸಂವಾದದಲ್ಲಿ ಜಹೀರ್ ಖಾನ್ ಬಗ್ಗೆ ಗ್ರೇಮ್ ಸ್ಮಿತ್ ಮಾತನಾಡಿದ್ದಾರೆ. "ಜಹೀರ್ ಖಾನ್ ನಾನು ಎದುರಿಸಿರುವ ಅತ್ಯಂತ ಕೌಶಲ್ಯಯುತ ಬೌಲರ್ ಆಗಿದ್ದಾರೆ. ಆತ ಅದ್ಭುತವಾಗಿ ಚೆಂಡನ್ನು ಸ್ವಿಂಗ್ ಮಾಡುತ್ತಿದ್ದರಲ್ಲದೆ ವೇಗದಲ್ಲಿಯೂ ಅದ್ಭುತವಾಗಿ ಬದಲಾವಣೆ ಮಾಡುತ್ತಿದ್ದರು. ಚೆಂಡನ್ನು ಉತ್ತಮವಾಗಿ ರಿವರ್ಸ್‌ಸ್ವಿಂಗ್ ಕೂಡ ಮಾಡುತ್ತಿದ್ದರು" ಎಂದು ಗ್ರೇಮ್ ಸ್ಮಿತ್ ಜಹೀರ್ ಖಾನ್ ಸಾಮರ್ಥ್ಯದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಿರ್ದೇಶಕ ಸ್ಮಿತ್
ಗ್ರೇಮ್ ಸ್ಮಿತ್ 2014ರಲ್ಲಿ ತಮ್ಮ 33ನೇ ವಯಸ್ಸಿನಲ್ಲಿ ನಿವೃತ್ತಿಯಾಗಿದ್ದಾರೆ. 22ನೇ ವಯಸ್ಸಿನಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿಕೊಂಡಿದ್ದ ಗ್ರೇಮ್ ಸ್ಮಿತ್ ದಕ್ಷಿಣ ಆಫ್ರಿಕಾದ ಅತ್ಯಂತ ಕಿರಿಯ ನಾಯಕ ಎನಿಸಿಕೊಂಡಿದ್ದರು. ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಳ್ಳುವ ವೇಳೆಗೆ ಕೇವಲ 8 ಟೆಸ್ಟ್ ಹಾಗೂ 22 ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರು.
ಧೋನಿ ನಾಯಕತ್ವದಲ್ಲಿ ಕಮ್‌ಬ್ಯಾಕ್ ಮಾಡಿರುವ ಸಿಎಸ್‌ಕೆಗೆ ಪ್ಲೇಆಫ್ ಪ್ರವೇಶಿಸಲು ಇರುವುದು ಇದೊಂದೇ ಮಾರ್ಗ!

ಮುಂಬೈ ಇಂಡಿಯನ್ಸ್ ಕ್ರಿಕೆಟ್ ನಿರ್ದೇಶಕ ಜಹೀರ್ ಖಾನ್
ಇತ್ತ ಟೀಮ್ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಕೂಡ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕರಾಗಿ ಜಹೀರ್ ಖಾನ್ ಕರ್ತವ್ಯ ನಿಭಾಯಿಸುತ್ತಿದ್ದಾರೆ. 2000ನೇ ಇಸವಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿರುವ ಜಹೀರ್ ಖಾನ್ 2014ರಲ್ಲಿ ನಿವೃತ್ತಿ ಘೋಷಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications