'ಆತ ಬಂದು ಸಿಕ್ಸ್ ಚಚ್ಚುತ್ತಾನೆ': ಪ್ರಭಾವಿ ಭಾರತೀಯನ ಶ್ಲಾಘಿಸಿದ ಗ್ರೇಮ್ ಸ್ವಾನ್

ಲಂಡನ್: ಭಾರತೀಯರಿಗೆ ಕ್ರಿಕೆಟ್ ಕಲಿಸಿದ್ದು ಆಂಗ್ಲರು. ಆದರೆ ಕ್ರಿಕೆಟ್ ಲೋಕದ 'ದೇವರು' ಅಂತ ಕರೆಸಿಕೊಳ್ಳುತ್ತಿರುವವರು ಭಾರತದ ಹೆಮ್ಮೆ, ದಿಗ್ಗಜ ಸಚಿನ್ ತೆಂಡೂಲ್ಕರ್. ವಿಶ್ವದ ಯಾವುದೇ ಬಲಿಷ್ಠ ತಂಡಗಳು ಮಾಡಿರದ ಅನೇಕ ಅಪರೂಪದ ದಾಖಲೆಗಳನ್ನು ಟೀಮ್ ಇಂಡಿಯಾ ಮಾಡಿದೆ, ಲೆಕ್ಕಕ್ಕೆ ಸಿಗದಷ್ಟು ವಿಶ್ವದಾಖಲೆಗಳನ್ನು ಭಾರತೀಯರು ನಿರ್ಮಿಸಿದ್ದಾರೆ. ಈಗ ಭಾರತೀಯ ಕ್ರಿಕೆಟ್ ತಂಡ ಇನ್ನಷ್ಟು ಬಲಿಷ್ಠ ತಂಡವಾಗಿ ವಿಶ್ವದ ಗಮನ ಸೆಳೆಯುತ್ತಿದೆ.
ವಿದೇಶಿ ಯಾವುದೇ ಬ್ಯಾಟ್ಸ್‌ಮನ್‌ಗಳು ಮಾತನಾಡಿದರೂ ಹೆಚ್ಚಿನ ಸಾರಿ ಭಾರತೀಯರನ್ನು ಉಲ್ಲೇಖಿಸುತ್ತಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್, ಮಾದರಿ ಕ್ಯಾಪ್ಟನ್ ಹೀಗೆ ಎಲ್ಲದರಲ್ಲೂ ಭಾರತೀಯರ ಹೆಸರೇ ಮುಂಚೂಣಿಯಲ್ಲಿ ಬರುತ್ತದೆ.
ಈ ಬಾರಿಯೂ ಇಂಗ್ಲೆಂಡ್ ಮಾಜಿ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್ ಭಾರತೀಯ ಬ್ಯಾಟ್ಸ್‌ಮನ್ ಒಬ್ಬರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಕ್ರಿಕೆಟ್‌ನಲ್ಲಿ ಆತ ಮಿನುಗುತ್ತಾನೆ
ಆತ ಬಂದ ಕೂಡಲೇ ಸಿಕ್ಸ್ ಬಾರಿಸುವ ಮೂಲಕ ಪ್ರಭಾವಿತಗೊಳಿಸುತ್ತಾನೆ. ತನ್ನದೇ ನೈಸರ್ಗಿಕ ಆಟ ಆಡುವ ಆತನಿಗೆ ತನ್ನದೇ ಆಟ ಆಡಲು ಅನುವು ಮಾಡಿಕೊಟ್ಟರೆ ನಾಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತ ಮಿನುಗುತಾರೆಯಾಗಿ ಆಕರ್ಷಣೆ ಮೂಡಿಸುತ್ತಾನೆ ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಹೇಳಿದ್ದಾರೆ.

ಆತ ಕ್ರಿಕೆಟ್ ಆಡುವ ಪರಿ ಇಷ್ಟ
ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟ್ ಶೋನಲ್ಲಿ ಮಾತನಾಡಿದ ಸ್ವಾನ್, 22ರ ಹರೆಯದ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಶ್ಲಾಘಿಸಿದರು. 'ಆ ಆಕರ್ಷಣೀಯ ಆಟಗಾರನೆಂದರೆ ರಿಷಭ್ ಪಂತ್. ಆತ ಕ್ರಿಕೆಟ್ ಆಡುವ ರೀತಿ ನನಗೆ ಸಂಪೂರ್ಣವಾಗಿ ಇಷ್ಟ. ಯಾಕೆಂದರೆ ಅವನಿಗೆ ಯಾರಾದರೂ ಬೆಂಬಲ ನೀಡುತ್ತಾರೆ,' ಎಂದಿದ್ದಾರೆ.

ಪಂತ್ ಪರದಾಟ ಉಲ್ಲೇಖ
ಯಾವ ಆಟಗಾರರನ್ನು ವಿರಾಟ್ ಕೊಹ್ಲಿ ಬೆಂಬಲಿಸುವುದನ್ನು ಬಯಸುತ್ತೀರಿ ಎಂಬ ಇರ್ಫಾನ್ ಫಠಾಣ್ ಅವರ ಪ್ರಶ್ನೆಗೆ ಉತ್ತರಿಸಿದ ಸ್ವಾನ್ ಪಂತ್ ಅವರನ್ನು ಉಲ್ಲೇಖಿಸಿದರು. ಆ ಬಳಿಕ ಫಠಾಣ್, ಕೊಹ್ಲಿ ಅವರು ಪಂತ್ ಅವರಂತ ಬ್ಯಾಟ್ಸ್‌ಮನ್‌ಗಳಿಗೆ ಎಷ್ಟೆಲ್ಲಾ ಬೆಂಬಲಿಸುತ್ತಾರೆ, ಬೆಂಬಲಿಸಿದ ಹೊರತಾಗಿಯೂ ಪಂತ್ ಪರದಾಡಿದ ಬಗ್ಗೆಯೂ ಇರ್ಫಾನ್ ಮಾತನಾಡಿದರು.

ಪಂತ್ ದಿಟ್ಟ ಬ್ಯಾಟಿಂಗ್ ನೆನೆದ ಸ್ವಾನ್
2018ರಲ್ಲಿ ಇಂಗ್ಲೆಂಡ್ vs ಭಾರತ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಪಂತ್, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದರು. ಆ ವೇಳೆ ಮೊಯೀನ್ ಅಲಿ ಓವರ್‌ನಲ್ಲಿ ಎದುರಿಸಿದ ಎರಡನೇ ಎಸೆತಕ್ಕೆ ಸಿಕ್ಸ್ ಚಚ್ಚಿದ್ದರು. ಇದನ್ನು ಸ್ವಾನ್ ಸ್ಮರಿಸಿಕೊಂಡಿದ್ದಾರೆ. 'ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲನೇ ಅಥವಾ ಎರಡನೇ ಎಸೆತಕ್ಕೆ ಪಂತ್ ಸಿಕ್ಸ್ ಬಾರಿಸಿದ್ದನ್ನು ನಾನು ನೆನಪಿಸಿಕೊಳ್ಳಬಲ್ಲೆ. ಈತ ಟೆಸ್ಟ್ ಕ್ರಿಕೆಟ್‌ನಲ್ಲಿ ಏನೋ ವಿಶೇಷತೆ ಹೊಂದಿದ್ದಾನೆ ಎಂದು ಆಗ ನಾನು ಅಂದುಕೊಂಡಿದ್ದೆ,' ಎಂದು ಸ್ವಾನ್ ವಿವರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications