ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಹುಲ್ ಶತಕ ಬಾರಿಸುವುದನ್ನು ನಿರೀಕ್ಷಿಸುತ್ತಿದ್ದೆ ಎಂದ ಇಂಗ್ಲೆಂಡ್ ಮಾಜಿ ಸ್ಪಿನ್ನರ್

Graeme Swann praised KL Rahul for leading from the front against RCB

ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಪ್ರದರ್ಶನವನ್ನು ಕೊಂಡಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರಾಹುಲ್ ನಾಯಕನ ಪ್ರದರ್ಶನ ನೀಡಿ 34 ರನ್‌ಗಳ ಅಂತರದ ಗೆಲುವಿಗೆ ಕಾರಣರಾಗಿದ್ದಾರೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ 57 ಎಸೆತಗಳನ್ನು ಎದುರಿಸಿ ಅಜೇಯ 91 ರನ್‌ಗಳ ಕೊಡುಗೆಯನ್ನು ನೀಡಿದ್ದರು. ಈ ಭರ್ಜರಿ ಆಟದಲ್ಲಿ 5 ಸಿಕ್ಸರ್ ಹಾಗೂ 7 ಬೌಂಡರಿಗಳು ಒಳಗೊಂಡಿದ್ದವು. ಹೀಗಾಗಿ ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ 180 ರನ್‌ಗಳ ಬೃಹತ್ ಗುರಿಯನ್ನು ನೀಡಲು ಸಾಧ್ಯವಾಗಿತ್ತು.

ಪಂಜಾಬ್ ಕಿಂಗ್ಸ್‌ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೈಲೈಟ್ಸ್‌ಪಂಜಾಬ್ ಕಿಂಗ್ಸ್‌ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೈಲೈಟ್ಸ್‌

"ಇದು ನಾಯಕನಾಗಿ ಅದ್ಭುತವಾದ ಪ್ರದರ್ಶನ. 11 ರಿಂದ 15ನೇ ಓವರ್‌ಗಳ ಮಧ್ಯೆ ಪಂಜಾಬ್ ಕಿಂಗ್ಸ್ ತಂಡದ 4 ವಿಕೆಟ್‌ಗಳು ಉರುಳಿದಾಗ ಸುಂಟರಗಾಳಿಗೆ ಸಿಲುಕಿದ ಅನುಭವವನ್ನು ಎದುರಿಸಿತ್ತು. ಯಾಕೆಂದರೆ ಅವರ ತಂಡ ಉತ್ತಮ ಆರಂಭವನ್ನು ಪಡೆದುಕೊಂಡಿತು. ಹೀಗಾಗಿ ಆ ಸಂದರ್ಭದಲ್ಲಿ ದುಸ್ವಪ್ನದಂತೆ ಪಂಜಾಬ್ ಕಿಂಗ್ಸ್‌ಗೆ ಕಾಡಿತ್ತು.

"ಪ್ರಮುಖ ವಿಕೆಟ್‌ಗಳು ಕಳೆದುಕೊಂಡ ನಂತರ ಮಧ್ಯದಲ್ಲಿ ತಂಡಕ್ಕೆ ರಾಹುಲ್ ಆಸರೆಯಾಗಬೇಕಿತ್ತು. ಹೀಗಾಗಿ ಇನ್ನಿಂಗ್ಸ್‌ನ ಅಂತ್ಯಕ್ಕಾಗುವ ವೇಳೆಯಲ್ಲಿ ರಾಹುಲ್ ಶತಕವನ್ನು ಬಾರಿಸಲು ಸಾಧ್ಯವಾಗಲಿಲ್ಲ. ಆದರೆ ಅಂತ್ಯದಲ್ಲಿ ರನ್‌ವೇಗವನ್ನು ಸಾಕಷ್ಟು ಹೆಚ್ಚಿಸಿದರು. ನಿಮ್ಮನ್ನು ಆಟದಲ್ಲಿಯೇ ಮಗ್ನವಾಗಿಸಬಲ್ಲ ಸಾಮರ್ಥ್ಯವನ್ನು ರಾಹುಲ್ ಹೊಂದಿದ್ದಾರೆ. ನಾನು ಪಂಜಾಬ್ ತಂಡದ ಅಭಿಮಾನಿಯಲ್ಲ. ಆದರೆ ರಾಹುಲ್ ಅವರ ಶತಕವನ್ನು ನಾನು ನಿರೀಕ್ಷಿಸಿದ್ದೆ" ಎಂದು ಗ್ರೇಮ್ ಸ್ವಾನ್ ಹೇಳಿದ್ದಾರೆ.

Story first published: Saturday, May 1, 2021, 13:55 [IST]
Other articles published on May 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X