ಆಗಸ್ಟ್ 12 ಸೋಮವಾರ, ಕಳೆದ ವಾರ ಇಂಗ್ಲೆಂಡ್ ತಂಡದ ದಿಗ್ಗಜ ಕ್ರಿಕೆಟಿಗ ನಿಧನರಾಗಿದ್ದರು. ಈ ಸಾವಿನ ಸುತ್ತ ಹಲವು ಅನುಮಾನುಗಳು ಮೂಡಿದ್ದವು. ಇದೀಗ ಕ್ರಿಕೆಟಿಗನ ಸಾವಿನ ರಹಸ್ಯ ಬಹಿರಂಗವಾಗಿದೆ.
ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟಿಗ ಗ್ರಹಾಂ ಥೋರ್ಪ್ ಅವರು ಆಗಸ್ಟ್ 5 ರಂದು ಮೃತಪಟ್ಟಿದ್ದರು. ಕಳೆದ 2 ವರ್ಷಗಳಿಂದ ದೈಹಿಕ ಹಾಗೂ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಅವರ ನಿಧನ ಇಡೀ ಕ್ರಿಕೆಟ್ ಜಗತ್ತನ್ನು ದಿಗ್ಭ್ರಮೆಗೊಳಿಸಿತ್ತು. ಇದೀಗ 7 ದಿನಗಳ ನಂತರ ಕ್ರಿಕೆಟಿಗನ ಪತ್ನಿ ಅಮಂಡಾ ಥೋರ್ಪ್ ಸಾವಿನ ಬಗ್ಗೆ ತಿಳಿಸಿದ್ದಾರೆ.

ಮಾಜಿ ಇಂಗ್ಲೆಂಡ್ ನಾಯಕ ಮೈಕೆಲ್ ಅಥರ್ಟನ್ ಅವರೊಂದಿಗಿನ ಸಂದರ್ಶನದಲ್ಲಿ, ಅಮಂಡಾ ಅವರು ಥೋರ್ಪ್ ಸಾವಿನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಥೋರ್ಪ್ ಅವರ ಮೃತಪಟ್ಟ ಬಗ್ಗೆ ಮೊದಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಘೋಷಿಸಿತು.
ದೀರ್ಘಕಾಲದಿಂದ ಮಾನಸಿಕ ಮತ್ತು ದೈಹಿಕ ಖಿನ್ನತೆ ಸಮಸ್ಯೆಗಳಿಂದ ಹೋರಾಡಿ ಅಂತಿಮವಾಗಿ ಅವರು ತಮ್ಮ ಜೀವವನ್ನು (ಆತ್ಮಹತ್ಯೆ) ತೆಗೆದುಕೊಂಡರು ಎಂದು ಅಮಂಡಾ ಹೇಳಿದ್ದಾರೆ.
'ದಿ ಟೈಮ್ಸ್' ವರದಿ ಪ್ರಕಾರ, ಎರಡು ವರ್ಷಗಳ ಹಿಂದೆ ಅಂದರೆ ಮೇ ತಿಂಗಳ 2022ರಲ್ಲಿ ಥೋರ್ಪ್ ಆತ್ಮಹತ್ಯೆಗೆ ಯತ್ನಿಸಿದ್ದರು. ತಾವು ಪ್ರೀತಿಸಿದ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದರೂ ಖನ್ನತೆಯಿಂದ ಥೋರ್ಪ್ ಚೇತರಿಸಿಕೊಳ್ಳಲಿಲ್ಲ. ಅವರು ಇತ್ತೀಚೆಗೆ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದರು.
ನಾನಿಲ್ಲದೆ ಹೆಂಡತಿ ಮತ್ತು ಮಕ್ಕಳು ಉತ್ತಮವಾಗಿತ್ತಾರೆ ಎಂದು ಥೋರ್ಪ್ ಭಾವಿಸಿದ್ದರು. ಹೀಗಾಗಿ ಅವರು ತನ್ನ ಪ್ರಾಣವನ್ನು ತೆಗೆದುಕೊಂಡಿರುವುದಕ್ಕಾಗಿ ಕುಟುಂಬಸ್ಥರು ದುಃಖಿತರಾಗಿದ್ದಾರೆ.
ಫರ್ನ್‌ಹ್ಯಾಮ್ ಕ್ರಿಕೆಟ್ ಕ್ಲಬ್ ಮತ್ತು ಚಿಪ್‌ಸ್ಟೆಡ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯದ ಆರಂಭಕ್ಕೂ ಮುನ್ನ ಥೋರ್ಪ್ ಅವರ ನೆನಪಿಗಾಗಿ ಸಮಾರಂಭವನ್ನು ನಡೆಸಲಾಯಿತು. ಇದರಲ್ಲಿ ಅವರ ಪತ್ನಿ ಮತ್ತು ಪುತ್ರಿಯರಾದ ಕಿಟ್ಟಿ (22), ಎಮ್ಮಾ (19) ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅಮಂಡಾ, "ಕಳೆದ ಕೆಲವು ವರ್ಷಗಳಿಂದ ಗ್ರಹಾಂ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು. ಈ ಕಾರಣದಿಂದಾಗಿ, ಅವರು ಮೇ 2022 ರಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇದಾದ ಬಳಿಕ ಅವರು ದೀರ್ಘಕಾಲ ಐಸಿಯುನಲ್ಲಿ ಇರಬೇಕಾಯಿತು ಎಂದಿದ್ದಾರೆ.
ಗ್ರಹಾಂ ಥೋರ್ಪ್ ಅವರು ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಕ್ರಿಕೆಟ್ ಆಡಿದ್ದಾರೆ. 1993 ರಿಂದ 2005 ರವರೆಗೆ ಇಂಗ್ಲೆಂಡ್ ತಂಡವನ್ನು 100 ಟೆಸ್ಟ್ ಮತ್ತು 82 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಈ ಅವಧಿಯಲ್ಲಿ 9 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದರು.