Rishabh Pant: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿ ಕಂ ಬ್ಯಾಕ್: ಮಹೇಂದ್ರ ಸಿಂಗ್ ದಾಖಲೆ ಸರಿಗಟ್ಟಿದ ರಿಷಭ್ ಪಂತ್
ಈಗಾಗಲೇ ಅಂತಾರಾಷ್ಟ್ರೀಯ ಸೀಮಿತ ಓವರ್‌ಗಳಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಭ್ ಪಂತ್, ಟೆಸ್ಟ್ ಕ್ರಿಕೆಟ್‌ಗೂ ಭರ್ಜರಿಯಾಗಿ ಪುನರಾಗಮನ ಮಾಡಿದ್ದಾರೆ. ಗಾಯದಿಂದ ಗುಣಮುಖರಾಗಿ ಮೈದಾನಕ್ಕೆ ಬಂದ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ತಮ್ಮದೇ ರೋಲ್ ಮಾಡಲ್ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್, ಬಾಂಗ್ಲಾ ಬೌಲರ್‌ಗಳನ್ನು ಕಾಡಿದರು. ಮೊದಲಾವಧಿಯ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದ ರಿಷಭ್ ಪಂತ್ ಇನಿಂಗ್ಸ್ ಬೆಳೆಸುತ್ತಾ ಸಾಗಿದರು. ಈ ಮೂಲಕ ಇವರ ಫಿಟ್ನೆಸ್ ಬಗ್ಗೆ ಇದ್ದ ಪ್ರಶ್ನೆಗಳಿಗೆ ಅಂಗಳದಲ್ಲೇ ಉತ್ತರ ನೀಡಿದರು.

ರಿಷಭ್ ಶತಕ
ಚೆನ್ನೈ ಟೆಸ್ಟ್‌ನಲ್ಲಿ ಪಂತ್ ಅಮೋಘ ಬ್ಯಾಟಿಂಗ್ ನಡೆಸಿದರು. ತಮ್ಮ ನೈಜ ಶೈಲಿಯಲ್ಲಿ ಬ್ಯಾಟ್ ಮಾಡಿದ ರಿಷಭ್ ಪಂತ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಇವರು 128 ಎಸೆತಗಳಲ್ಲಿ 109 ರನ್ ಸಿಡಿಸಿ ಔಟ್ ಆದರು. ಇವರ ಮನಮೋಹಕ ಇನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್ ಸೇರಿವೆ. ಈ ಮೂಲಕ ಪಂತ್ ತಮ್ಮ ಟೆಸ್ಟ್ ವೃತ್ತಿಜೀವನದ ಆರನೇ ಟೆಸ್ಟ್ ಶತಕ ಸಿಡಿಸಿದರು.
ಧೋನಿ ದಾಖಲೆ ಸರಿಗಟ್ಟಿದ ಪಂತ್
ಈ ಶತಕದ ಮೂಲಕ ಪಂತ್ ಭಾರತದ ಪರ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ವಿಕೆಟ್ ಕೀಪರ್ ಎನಿಸಿಕೊಂಡರು. ಅಲ್ಲದೆ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದರು. ಧೋನಿ 90 ಟೆಸ್ಟ್‌ಗಳ 144 ಇನ್ನಿಂಗ್ಸ್‌ಗಳಲ್ಲಿ 6 ಶತಕಗಳನ್ನು ಗಳಿಸಿದ್ದರು. 638 ದಿನಗಳ ನಂತರ, ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಪಂತ್ ತಮ್ಮ ನೈಜ ಆಟವನ್ನು ಆಡಿದರು. ಈ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಇವರ ಈ ಪಂದ್ಯದಲ್ಲಿ ಸಿಂಗಲ್ ಹ್ಯಾಂಡಲ್ ಶಾಟ್ ಸಹ ಎಲ್ಲರ ಚಿತ್ತ ಕದ್ದಿತ್ತು.
ರಿಷಭ್ ಪಂತ್ ಬಾಂಗ್ಲಾದೇಶದ ವಿರುದ್ಧವೇ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಪಂತ್ ಡಿಸೆಂಬರ್ 23, 2022ರಂದು ಮಿರ್‌ಪುರದಲ್ಲಿ ಬಾಂಗ್ಲಾದೇಶದ ವಿರುದ್ಧ ಪಂತ್ ಅರ್ಧಶತಕ ಗಳಿಸಿದ್ದರು.
ಬಾಂಗ್ಲಾದೇಶದ ಆಫ್ ಸ್ಪಿನ್ನರ್ ಮೆಹದಿ ಹಸನ್ ಮಿರಾಜ್ 15 ನೇ ಓವರ್‌ನಲ್ಲಿ ಬೌಲ್ ಮಾಡಲು ಬಂದರು. ಮೆಹದಿ ಹಸನ್ ಮಿರಾಜ್ ಎಸೆದ ಈ ಓವರ್‌ನ ಮೊದಲ ಎಸೆತದಲ್ಲಿ ರಿಷಬ್ ಪಂತ್ ಒನ್ ಹ್ಯಾಂಡೆಡ್ ಸಿಕ್ಸರ್ ಬಾರಿಸಿದರು. ಚೆಂಡು ಪ್ರೇಕ್ಷಕರ ಗ್ಯಾಲರಿ ತಲುಪುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಏಕದಿನ ಹಾಗೂ ಸೀಮಿತ ಓವರ್‌ಗಳ ರೀತಿ ಬ್ಯಾಟ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು. ಇವರ ಅಬ್ಬರದ ಆಟಕ್ಕೆ ಬ್ರೇಕ್ ಹಾಕಲು ಬಾಂಗ್ಲಾ ಬೌಲರ್‌ಗಳು ಸಹ ವಿಫಲರಾದರು. ತಮ್ಮ ನೈಜ ಆಟವನ್ನು ಆಡಿದ ಪಂತ್ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications