ವಿಡಿಯೋ: ಈಕೆಯ ಫೀಲ್ಡಿಂಗ್ ನೋಡಿ ಕ್ರಿಕೆಟ್ ಲೋಕವೇ ಬೆರಗು!
ಎಲ್ಲರೂ ಐಪಿಎಲ್ 2020 ಕಡೆಗೆ ನೋಡುತ್ತಿರುವಾಗಲೇ ಅದರ ಮಧ್ಯದಲ್ಲಿಯೇ ಮಹಿಳೆಯರ ಟಿ20 ಚಾಲೆಂಜ್ 2020 ಪಂದ್ಯ ನಡೆದು ಸ್ಮೃತಿ ಮಂದಾನಾ ನಾಯಕತ್ವದ ಟ್ರಯಲ್‌ಬ್ಲೇಜರ್ಸ್ ತಂಡ ಜಯಿಸಿದ್ದೂ ಆಗಿದೆ.
ಎಲ್ಲರೂ ಪುರುಷರ ಕ್ರಿಕೆಟ್ ನೋಡಿ ವಾಹ್-ವಾಹ್ ಎನ್ನುತ್ತಿರುವಾಗ ಮಹಿಳೆಯರೂ ಸಹ ಅದ್ಭುತ ಕ್ರಿಕೆಟ್ ನಿಂದ ತಮ್ಮತ್ತ ನೋಡುವಂತೆ ಮಾಡಿದ್ದಾರೆ. ಮಹಿಳೆಯರ ತಂಡಗಳೂ ಸಹ ಒಳ್ಳೆಯ ಸ್ಪರ್ಧಾತ್ಮಕ ಕ್ರಿಕೆಟ್ ಅನ್ನೇ ಆಡಿವೆ.
ಮಹಿಳೆಯರ ಟಿ20 ಚಾಲೆಂಜ್‌ನ ಪಂದ್ಯವೊಂದರಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬರು ಮಾಡಿರುವ ಅದ್ಭುತ ಫೀಲ್ಡಿಂಗ್ ವಿಡಿಯೋ ಹರಿದಾಡುತ್ತಿದ್ದು, ಭಾರಿ ವೈರಲ್ ಆಗಿದೆ.

ಥಾಯ್ಲೆಂಡ್ ಆಟಗಾರ್ತಿಯ ಫೀಲ್ಡಿಂಗ್
ಟ್ರಯಲ್‌ಬ್ಲೇಜರ್ಸ್ ಹಾಗೂ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಸೂಪರ್‌ನೋವಾಸ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಕ್ರಿಕೆಟ್ ಆಟಗಾರ್ತಿ ನಾಥಕಾನ್ ಜಾಂತಮ್ ಮಾಡಿರುವ ಫೀಲ್ಡಿಂಗ್ ಎಲ್ಲರ ಗಮನ ಸೆಳೆದಿದೆ.
ತಲೆ ಕೆಳಗೆ ಹಾಕಿ ಡೈವ್ ಮಾಡಿದ ಆಟಗಾರ್ತಿ
ಚೆಂಡನ್ನು ಬೌಂಡರಿಯ ವರೆಗೆ ಹಿಮ್ಮೆಟ್ಟಿ ಹೋಗುವ ನಾಥಕಾನ್ ಜಾಂತಮ್, ಇನ್ನೇನು ಚೆಂಡು ಬೌಂಡರಿ ಗೆರೆ ಮುತ್ತಿಕ್ಕಲಿದೆ ಎನ್ನುವಾಗಿ ತಲೆ ಕೆಳಗು ಹಾಕಿ ಡೈವ್ ಹೊಡೆಯುವ ನಾಥಕಾನ್ ಜಾಂತಮ್, ಕೆಲವೇ ಇಂಚಿನಲ್ಲಿ ಬಾಲನ್ನು ತಡೆಯುತ್ತಾರೆ. ಅವರ ಈ ಫೀಲ್ಡಿಂಗ್ ಯತ್ನ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಕ್ ಆದ ಕ್ರಿಕೆಟ್‌ಪ್ರೇಮಿಗಳು
ಟ್ರೋಫಿ ಗೆದ್ದ ಟ್ರಯಲ್‌ಬ್ಲೇಜರ್ಸ್ ಆಟಗಾರ್ತಿ ನಾಥಕಾನ್ ಜಾಂತಮ್ ಹಾಕಿರುವ ಡೈವ್ ಅತ್ಯಂತ ಅದ್ಭುತವಾಗಿದೆ. ವಿಡಿಯೋ ನೋಡಿದ ಹಲವರು ನಾಥಕಾನ್ ನ 'ಕತ್ತು ಹೇಗಿದೆ, ಅದು ಉಳುಕಿಲ್ಲವೇ' ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ನಾನು ಆರಾಮವಾಗಿದ್ದೇನೆ: ನಾಥಕಾನ್ ಜಾಂತಮ್
ಇದಕ್ಕೆ ಟ್ವಿಟ್ಟರ್‌ನಲ್ಲಿ ಉತ್ತರಿಸಿರುವ ನಾಥಕಾನ್ ಜಾಂತಮ್, ನನಗೆ ಏನೂ ಸಮಸ್ಯೆ ಆಗಿಲ್ಲ, ಸ್ವಲ್ಪ ನೋವು ಸಹ ಇಲ್ಲ, ನಾನು ಆರಾಮವಾಗಿದ್ದೇನೆ ಎಂದಿದ್ದಾರೆ. ಸ್ಮೃತಿ ಮಂದಾನಾ ನಾಯಕತ್ವದ ಟ್ರಯಲ್‌ಬ್ಲೇಜರ್ಸ್ ತಂಡ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications