Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Greatest IPL Captains: ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಇರ್ಫಾನ್ ಪಠಾಣ್ ಮೆಚ್ಚುಗೆ

ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ರೋಚಕ ಘಟ್ಟದತ್ತ ಮುಖ ಮಾಡಿದೆ. ಪಂಜಾಬ್‌ ಕಿಂಗ್ಸ್‌ ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ. ಆದರೆ ಹಿಂದಿನ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡು ನಿರಾಸೆಯನ್ನು ಅನುಭವಿಸಿದೆ. ಪಂಜಾಬ್ ತಂಡವನ್ನು ಮುನ್ನಡೆಸುತ್ತಿರುವ ನಾಯಕ ಶ್ರೇಯಸ್ ಅಯ್ಯರ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್‌, ಶ್ರೇಯಸ್ ಅಯ್ಯರ್ ಅವರ ನಾಯಕತ್ವವನ್ನು ಕೊಂಡಾಡಿದ್ದಾರೆ.

ಶ್ರೇಯಸ್ ಅಯ್ಯರ್ ಐಪಿಎಲ್‌ನ ಹಲವು ಫ್ರಾಂಚೈಸಿಗಳ ಪರ ಕಣಕ್ಕೆ ಇಳಿದಿದ್ದಾರೆ. ಒಂದು ವೇಳೆ ಪಂಜಾಬ್‌ ಕಿಂಗ್ಸ್‌ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರೆ, ಇವರು ಎಂಎಸ್‌ ಧೋನಿ, ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಅವರಂತಹ ದಿಗ್ಗಜ ನಾಯಕರನ್ನು ಹಿಂದಿಕ್ಕಬಹುದು ಎಂದು ಇರ್ಫಾನ್‌ ಪಠಾಣ್‌ ತಿಳಿಸಿದ್ದಾರೆ.

Greatest IPL Captains

ಜಿಯೋ ಹಾಟ್‌ ಸ್ಟಾರ್‌ ಜೊತೆ ಮಾತನಾಡಿರುವ ಇರ್ಫಾನ್ ಪಠಾಣ್, ಎಲ್ಲ ಫ್ರಾಂಚೈಸಿಗಳಲ್ಲಿ ಇವರು ಬೆಸ್ಟ್‌ ನಾಯಕ ಎಂದು ತಿಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಅವರು ಸ್ಟೈಲಿಷ್‌ ಬಲಗೈ ಬ್ಯಾಟರ್‌ ಆಗಿದ್ದು, ಐಪಿಎಲ್‌ ಇತಿಹಾಸದಲ್ಲಿ ಯಾವೊಬ್ಬ ನಾಯಕ ಮಾಡದ ಸಾಧನೆಯನ್ನು ಮಾಡಿದ್ದಾರೆ. ಇವರು ಮೂರು ವಿಭಿನ್ನ ತಂಡಗಳ ಪರ ನಾಯಕರಾಗಿ ಫೈನಲ್‌ಗೆ ಕೊಂಡೊಯ್ದಿದ್ದಾರೆ ಎಂದು ಹೇಳಿದ್ದಾರೆ.

ಶ್ರೇಯಸ್ ಅಯ್ಯರ್ ಗುಣಗಾನ

"ಶ್ರೇಯಸ್‌ ಅಯ್ಯರ್ ಅವರ ನಾಯಕತ್ವದಲ್ಲಿ ಕೆಕೆಆರ್‌ ಒಮ್ಮೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಇವರು ಪಂಜಾಬ್‌ ತಂಡಕ್ಕೂ ಚಾಂಪಿಯನ್‌ ಪಟ್ಟವನ್ನು ತೊಡಿಸಿದರೆ, ದಿಗ್ಗಜ ನಾಯಕರನ್ನು ಮೀರಿಸುವ ಸಾಧನೆಯನ್ನು ಮಾಡಲಿದ್ದಾರೆ ಎಂದು ಇರ್ಫಾನ್ ತಿಳಿಸಿದ್ದಾರೆ. ಶ್ರೇಯಸ್‌ ವಿಭಿನ್ನ ತಂಡ, ವಿಭಿನ್ನ ಪರಿಸ್ಥಿತಿಗಳು, ಬೇರೆ ಬೇರೆ ಆಟಗಾರರು ಮತ್ತು ಸಂಸ್ಕೃತಿಗಳಿಗೆ ಹೊಂದಿಕೊಂಡಿದ್ದು, ಫಲಿತಾಂಶಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.

ಎಂಎಸ್‌ ಧೋನಿ, ರೋಹಿತ್ ಶರ್ಮಾ, ಗೌತಮ್ ಗಂಭೀರ್ ಪಟ್ಟಿಯಲ್ಲಿ ಶ್ರೇಯಸ್‌ ಅಯ್ಯರ್‌ ಒಬ್ಬ ಉತ್ತಮ ನಾಯಕ ಎಂದು ನಾನು ಭಾವಿಸುತ್ತೇನೆ. ಮೂರು ವಿಭಿನ್ನ ತಂಡಗಳನ್ನು ಐಪಿಎಲ್‌ ಫೈನಲ್‌ಗೆ ಕೊಂಡೊಯ್ಯುವುದು ಸುಲಭವಲ್ಲ. ಇದಕ್ಕೂ ಮೊದಲು ಇಂತಹ ಸಾಧನೆಯನ್ನು ಬೇರೆ ಯಾವ ನಾಯಕ ಸಹ ಮಾಡಿರಿಲಿಲ್ಲ ಎಂದು ಪ್ರಶಂಸಿದ್ದಾರೆ.

ಇರ್ಫಾನ್ ಪಠಾಣ್‌ ಅಯ್ಯರ್ ಅವರನ್ನು ಐಪಿಎಲ್‌ನ ಕೆಲವು ಅತ್ಯಂತ ಯಶಸ್ವಿ ನಾಯಕರೊಂದಿಗೆ ಹೋಲಿಕೆ ಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಸಿಎಸ್‌ಕೆ ಪರ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ರೋಹಿತ್‌ ನಾಯಕರಾದ ಬಳಿಕ ಗೆದ್ದ ಎಲ್ಲ ಟ್ರೋಫಿಗಳು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದಾಗಲೇ ಬಂದಿವೆ. ಇನ್ನು ಗಂಭೀರ್‌ ಸಹ ಒಂದೇ ತಂಡವನ್ನು ಮುನ್ನಡೆಸುವಾಗಲೇ ಹೆಚ್ಚು ಟ್ರೋಫಿ ಗೆದಿದ್ದಾರೆ ಎಂದು ತಿಳಿಸಿದ್ದಾರೆ. ಶ್ರೇಯಸ ಅಯ್ಯರ್ 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿ ಫೈನಲ್‌ಗೆ ಕೊಂಡೊಯ್ದರು. 2024ರಲ್ಲಿ ಕೆಕೆಆರ್ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದರು. 2025ರಲ್ಲಿ ಪಂಜಾಬ್‌ ಕಿಂಗ್ಸ್‌ ಮುಂದಾಳತ್ವದಲ್ಲಿ ರನ್ನರ್ ಅಪ್‌ ಆದರು ಎಂದು ಇರ್ಫಾನ್ ತಿಳಿಸಿದ್ದಾರೆ.

Story first published: Thursday, May 7, 2026, 15:17 [IST]
Other articles published on May 7, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+