ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಆಘಾತದ ಮೇಲೆ ಆಘಾತ: ಒಂದೇ ದಿನ ಇಬ್ಬರು ದಿಗ್ಗಜರು ಕಣ್ಮರೆ!

ಕೆಲ ಸ್ಮರಣೀಯ ಕ್ಷಣಗಳಿಗಾಗಿ ಎದುರು ನೋಡುತ್ತಿದ್ದ ಕ್ರಿಕೆಟ್ ಲೋಕದ ಪಾಲಿಗೆ ಶುಭ ಶುಕ್ರವಾಗಬೇಕಿದ್ದ ಈ ದಿನ ಕರಾಳ ದಿನವಾಗಿ ಮಾರ್ಪಟ್ಟಿದೆ. ಸುಮಾರು ಎರಡೂವರೆ ದಶಕಗಳ ನಂತರ ಪಾಕಿಸ್ತಾನಕ್ಕೆ ಕಾಲಿಟ್ಟ ಆಸ್ಟ್ರೇಲಿಯಾ ಸರಣಿ ಆರಂಭವಾಗಿದ್ದರೆ ಮತ್ತೊಂದೆಡೆ ಶ್ರೇಷ್ಠ ಕ್ರಿಕೆಟಿಗ ವಿರಾಟ್ ಕೊಹ್ಲಿ 100ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಅತ್ತ ಶ್ರೀಲಂಕಾ 300ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ಸಂಭ್ರಮದಲ್ಲಿದೆ. ಮತ್ತೊಂದೆಡೆ ಮಹಿಳಾ ವಿಶ್ವಕಪ್‌ಗೆ ಕ್ರಿಕೆಟ್ ಟೂರ್ನಿ ಚಾಲನೆ ದೊರೆತಿದೆ. ಈ ಎಲ್ಲಾ ಕಾರಣಗಳಿಂದ ಸಂಭ್ರಮಿಸಬೇಕಿತ್ತು ಈ ದಿನ.
ಆದರೆ ಒಂದರ ನಂತರ ಮತ್ತೊಂದು ಆಘಾತಕಾರಿ ಸುದ್ದಿ ಕರಾಳ ದಿನವಾಗುವಂತೆ ಮಾಡಿದ್ದು ಕ್ರಿಕೆಟ್ ಅಭಿಮಾನಿಗಳು ಆಘಾತಗೊಳ್ಳುವಂತೆ ಮಾಡಿದೆ. ಮೊದಲಿಗೆ ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್ ಕೀಪರ್ ರಾಡ್ ಮಾರ್ಶ್ ನಿಧನದ ಸುದ್ದಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದರೆ ಸಂಜೆಯ ವೇಳೆಗೆ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಶ್ರೇಷ್ಠ ವಿಕೆಟ್ ಕೀಪರ್ ರಾಡ್ ಮಾರ್ಶ್ ವಾರದ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ಕೋಮಾಗೆ ಜಾರಿದ್ದರು. ಕ್ವೀನ್ಸ್‌ಲ್ಯಾಂಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಚೊಕಿತ್ಸೆ ಪಡೆಯುತ್ತಿದ್ದ ಮಾರ್ಶ್ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಈ ದಿಗ್ಗಜ ಕ್ರಿಕೆಟಿಗನ ಸಾವಿಗೆ ಸ್ವತಃ ಶೇನ್ ವಾರ್ನ್ ಕೂಡ ಬೇಸರವನ್ನು ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದರು. ಆದರೆ ದಿನದಂತ್ಯದಲ್ಲಿ ಶೇನ್ ವಾರ್ನ್ ಕೂಡ ಇನ್ನಿಲ್ಲ ಎಂಬ ಸುದ್ದಿ ಕ್ರಿಕೆಟ್ ಪ್ರೇಮಿಗಳಿಗೆ ಆಘಾತ ನೀಡಿದೆ.
ಕ್ರಿಕೆಟ್‌ನಿಂದ ನಿವೃತ್ತಿಯಾಗಿ ದಶಕ ಕಳೆದರೂ ಕ್ರಿಕೆಟ್ ಚಟುವಟಿಕೆಗಳಲ್ಲಿ ಶೇನ್ ವಾರ್ನ್ ಸಾಕಷ್ಟು ಸಕ್ರಿಯವಾಗಿರುವ ವ್ಯಕ್ತಿತ್ವ. ಕ್ರಿಕೆಟ್ ಕಾಮೆಂಟರಿ, ಕೋಚ್ ವೃತ್ತಿ ಹೀಗೆ ಸದಾ ಬ್ಯುಸಿಯಾಗಿರುವ ವಾರ್ನ್ ತಮ್ಮ 52ನೇ ವಯಸ್ಸಿನಲ್ಲಿಯೇ ಇನ್ನಿಲ್ಲ ಎಂಬ ಸುದ್ದಿ ಜಗತ್ತಿನ ಕ್ರಿಕೆಟ್ ಪ್ರೇಮಿಗಳಿಗೆ ಆಘಾತ ನೀಡಿದೆ.
ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿರುವ ಶೇನ್ ವಾರ್ನ್ ಸರ್ವ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರು. 145 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ವಾರ್ನ್ 708 ವಿಕೆಟ್ ಕಬಳಿಸಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 1999ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ವಾರ್ನ್ ಒಟ್ಟಾರೆಯಾಗಿ 1001 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications