IPL 2026: ಮಿಚೆಲ್ ಸ್ಟಾರ್ಕ್ ದಾಖಲೆ ಅಳಿಸಿದ ಕ್ಯಾಮರೂನ್ ಗ್ರೀನ್
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ವಿದೇಶಿ ಆಟಗಾರ ಎಂಬ ಖ್ಯಾತಿ ಈಗ ಕ್ಯಾಮರೂನ್ ಗ್ರೀನ್ ಪಾಲಾಗಿದೆ. ಇವರು ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಬಿಡ್ ಆಗಿ ದಾಖಲೆ ಬರೆದಿದ್ದಾರೆ. ಇವರನ್ನು ಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಜಿದ್ದು ಕಂಡು ಬಂದಿತು. ಬಳಿಕ ಕೆಕೆಆರ್ ಇವರಿಗೆ 25.20 ಕೋಟಿ ರೂ. ನೀಡಿ ಖರೀದಿಸಿದೆ. ಈ ಮೂಲಕ ಐಪಿಎಲ್ ಇತಿಹಾಸ ಬರೆದಿದ್ದಾರೆ.
ಎಲ್ಲರ ನಿರೀಕ್ಷೆಯಂತೆ ಕ್ಯಾಮರೂನ್ ಗ್ರೀನ್ ಅವರ ಹೆಸರು ಅಂಗಳಕ್ಕೆ ಬಂದಾಗ ಹಲವು ಫ್ರಾಂಚೈಸಿಗಳು ಇವರ ಮೇಲೆ ಹಣವನ್ನು ಹೂಡಲು ತಯಾರಾದವು. ಇವರನ್ನು ಕೊಳ್ಳಲು ಸಿಎಸ್‌ಕೆ ಹಾಗೂ ಕೆಕೆಆರ್ ತಂಡಗಳ ನಡುವೆ ಭಾರೀ ಜಿದ್ದು ಕಂಡು ಬಂದಿತ್ತು. ಆದರೆ ಈ ಬಾರಿಯ ಲೀಗ್‌ನಲ್ಲಿ ಅತಿ ಹೆಚ್ಚು ಹಣದೊಂದಿಗೆ ಅಂಗಳಕ್ಕೆ ಇಳಿದಿದ್ದ ಕೆಕೆಆರ್ ಅಂತಿಮವಾಗಿ ಕ್ಯಾಮರೂನ್ ಗ್ರೀನ್ ಅವರಿಗೆ ಭಾರೀ ಮೊತ್ತವನ್ನು ನೀಡಿತು. ಕೆಕೆಆರ್ ಗ್ರೀನ್ ಅವರಿಗೆ 25.20 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು.

ಕ್ಯಾಮರೂನ್ ಗ್ರೀನ್ ಈಗ ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಇವರು ಈ ಮೂಲಕ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಮಿಚೆಲ್ ಸ್ಟಾರ್ಕ್ ಅವರಿಗೆ ಐಪಿಎಲ್ 2024ರ ಹರಾಜಿನಲ್ಲಿ ಕೆಕೆಆರ್ ತಂಡ 24.75 ಕೋಟಿ ರೂ.ಗಳಿಗೆ ತನ್ನ ತಂಡಕ್ಕೆ ಸೇರಿಸಕೊಂಡಿತ್ತು. ಇದು ಐಪಿಎಲ್ ಇತಿಹಾಸ ಸೃಷ್ಟಿಸಿತ್ತು. ಈ ಬಾರಿಯ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಅತಿ ಹೆಚ್ಚು ಹಣಕ್ಕೆ ಬಿಕರಿಯಾದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ವಿದೇಶಿ ಆಟಗಾರರು
ಕ್ಯಾಮರೂನ್ ಗ್ರೀನ್, 25.20 ಕೋಟಿ ರೂ., ಕೆಕೆಆರ್ (2026)
ಮಿಚೆಲ್ ಸ್ಟಾರ್ಕ್, 24.75 ಕೋಟಿ ರೂ., ಕೆಕೆಆರ್ (2024)
ಪ್ಯಾಟ್ ಕಮಿನ್ಸ್, 20.50 ಕೋಟಿ ರೂ., ಎಸ್‌ಆರ್‌ಎಚ್ (2024)
ಸ್ಯಾಮ್ ಕರನ್, 18.50 ಕೋಟಿ ರೂ., ಪಂಜಾಬ್ ಕಿಂಗ್ಸ್ (2023)
ಕ್ಯಾಮರೂನ್ ಗ್ರೀನ್, 17.50 ಕೋಟಿ ರೂ., ಮುಂಬೈ ಇಂಡಿಯನ್ಸ್ (2023)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications