IPL 2025 AI Prediction: ಈ ಬಾರಿ ಕಪ್ ನಮ್ದೇ ನಾ? ಗ್ರೋಕ್ ಎಐ ಹೇಳಿದ್ದೇನು?
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಮಹಾನ್ ಲೀಗ್‌ನಲ್ಲಿ ಭಾಗವಹಿಸಲು ವಿಶ್ವದ ನಾನಾ ಆಟಗಾರರು ಒಂದೇ ಸೂರಿನಡಿ ಕಾಣಿಸಿಕೊಳ್ಳಲಿದ್ದಾರೆ. ಈ ಲೀಗ್‌ನಲ್ಲಿ ಆರ್‌ಸಿಬಿ ಸಹ ಭಾಗವಹಿಸುತ್ತಿದೆ. ಸತತ 17 ಆವೃತ್ತಿಗಳಲ್ಲಿ ಕಪ್ ಗೆಲ್ಲುವ ಆಸೆಯೊಂದಿಗೆ ಕಣಕ್ಕೆ ಇಳಿಯುತ್ತಿದ್ದ ಆರ್‌ಸಿಬಿ ನಿರಾಸೆ ಅನುಭವಿಸಿದೆ. ಈ ಬಾರಿ ಆರ್‌ಸಿಬಿ ನವ ಉತ್ಸಾಹದಲ್ಲಿ ಅಂಗಳಕ್ಕೆ ಇಳಿಯಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಬಾರಿ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ.
18ನೇ ಆವೃತ್ತಿಯ ಐಪಿಎಲ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ವೇಳೆ ಆರ್‌ಸಿಬಿ ಸಹ ಕಪ್ ಗೆಲುವಿನ ಕನಸಿನೊಂದಿಗೆ ಕಣಕ್ಕೆ ಇಳಿಯಲಿದೆ. ಈ ವೇಳೆ ಆರ್‌ಸಿಬಿ ಅಭಿಮಾನಿಗಳು ಸಹ ಈ ಬಾರಿ ಕಪ್ ನಮ್ಮೇ ಎಂದು ಹೇಳುತ್ತಲೇ ಇದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ತಂಡವು ಐಪಿಎಲ್ ಪ್ರಶಸ್ತಿ ಗೆಲ್ಲುತ್ತದೋ ಇಲ್ಲವೋ ಎಂಬ ಬಗ್ಗೆ ಗ್ರೋಕ್ AI ಭವಿಷ್ಯ ನುಡಿದಿದೆ.

ಅಂದಹಾಗೆ ಗ್ರೋಕ್ ಎಐ ಎಂದರೇನು ಎಂಬ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಮೂಡುವುದು ಸಹಜ. ವಾಸ್ತವವಾಗಿ ಗ್ರೋಕ್ AI ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ ಆಗಿದೆ. ಇದನ್ನು ಎಕ್ಸ್ (ಟ್ವೀಟರ್) ಅಭಿವೃದ್ಧಿಪಡಿಸಿದೆ. ಈ ವೇಳೆ ಬಳಕೆದಾರ ಎಕ್ಸ್‌ನಲ್ಲಿ ಹಲವು ಪ್ರಶ್ನೆಗಳು ಕೇಳಿ ಉತ್ತರವನ್ನು ಕಂಡು ಕೊಂಡಿದ್ದಾರೆ. ಇನ್ನು ಹಲವರು ವಿಚಿತ್ರ ಪ್ರಶ್ನೆಗಳನ್ನು ಕೇಳಿ ಎಐ ಬುದ್ಧಿಮತ್ತೆಯನ್ನು ಪ್ರಶ್ನಿಸಿದ್ದಾರೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಸಿಬಿ ಈ ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುತ್ತದೆಯೇ ಎಂದು ಪ್ರಶ್ನೆ ಕೇಳುತ್ತಿದ್ದಾರೆ.
ಎಐ ಹೇಳಿದ್ದೇನು?
ಇದಕ್ಕೆ ಪ್ರತಿಕ್ರಿಯಿಸಿದ ಗ್ರೋಕ್ ಎಐ, 'ಐಪಿಎಲ್ 2025 ರಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲುವುದು ಕಷ್ಟ ಎಂದು ತಿಳಿಸಿದೆ'. ಆರ್‌ಸಿಬಿ ಐಪಿಎಲ್ ಲೀಗ್‌ನಲ್ಲಿ ಅತ್ಯಂತ ಜನಪ್ರೀಯ ತಂಡ, ಈ ತಂಡದ ಫ್ಯಾನ್ ಫಾಲೋವರ್ಸ್ ಸಖತ್ ಆಗಿದೆ. ಮೂರು ಬಾರಿ ಆರ್‌ಸಿಬಿ ಫೈನಲ್ ಫೈಟ್ ನಡೆಸಿದ್ರೂ ಸಹ ಕಪ್ ಗೆಲ್ಲದೇ ಇರುವ ನೋವು ತಂಡಕ್ಕಿದೆ. ಆರ್‌ಸಿಬಿ ತಂಡದಲ್ಲಿ ವಿಶ್ವ ವಿಖ್ಯಾತ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಇದ್ದರೂ ಸಹ ಒಂದೇ ಒಂದು ಬಾರಿ ಕಪ್ ಗೆಲ್ಲದೇ ಇರುವುದು ನಿಜಕ್ಕೂ ಅಭಿಮಾನಿಗಳಿಗೆ ಬೇಸರದ ಸಂಗತಿ. ಎಐ ಭವಿಷ್ಯದ ಪ್ರಕರಾ, ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡ ಎಂದು ಬೆನ್ನು ತಟ್ಟಿದೆ.

ರಜತ್ ಪಾಟಿದಾರ್ ಅವರ ಮುಂದಾಳತ್ವದ ಆರ್‌ಸಿಬಿ ಹೊಸ ಉತ್ಸಾಹದಲ್ಲಿ ಕಣಕ್ಕೆ ಇಳಿಯಲಿದೆ. ಈ ವೇಳೆ ತನ್ನ ಮೊದಲ ಪಂದ್ಯವನ್ನು ಆರ್‌ಸಿಬಿ, ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳ ಸಾಕ್ಷಿಯಾಗಲಿದೆ. ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications