GT vs DC: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್‌ಗೆ ತವರಿನಲ್ಲಿ ಸೋಲು
ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2024ರ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅತಿ ದೊಡ್ಡ ಗೆಲುವು ದಾಖಲಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ 6 ವಿಕೆಟ್‌ಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ರನ್ ಕಲೆ ಹಾಕಲು ಪರದಾಟ ನಡೆಸಿತು. ಗುಜರಾತ್ ತಂಡ 17.3 ಓವರ್‌ಗಳಲ್ಲಿ 89 ರನ್‌ಗಳಿಗೆ ಆಲೌಟ್ ಆಯಿತು. ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 8.5 ಓವರ್‌ಗಳಲ್ಲಿ 4 ವಿಕೆಟ್‌ಗೆ 92 ರನ್ ಸೇರಿಸಿ ಅಬ್ಬರಿಸಿತು. ಈ ಜಯದ ಮೂಲಕ ರಿಷಭ್ ಪಂತ್ ಪಡೆ 6 ಅಂಕಗಳೊಂದಿಗೆ ಆರನೇ ಸ್ಥಾನಕ್ಕೆ ಬಡ್ತಿ ಪಡಿಯಿತು. ಗುಜರಾತ್ ಸಹ ಏಳು ಪಂದ್ಯಗಳಲ್ಲಿ ಆರು ಅಂಕ ಕಲೆ ಹಾಕಿ ಏಳನೇ ಸ್ಥಾನದಲ್ಲಿದೆ. ಇದಕ್ಕೂ ಮುನ್ನ 2009ರಲ್ಲೂ ಡೆಲ್ಲಿ ತಂಡ 4.5 ಓವರ್‌ಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಆ ಪಂದ್ಯದಲ್ಲಿ ಮಳೆಯಿಂದಾಗಿ ಡೆಲ್ಲಿ ತಂಡ ಕೇವಲ 6 ಓವರ್‌ಗಳ ಬ್ಯಾಟಿಂಗ್ ಮಾಡಬೇಕಾಗಿದ್ದ ಕಾರಣ ತಂಡವು 4.5 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತ್ತು.

ಮುಕೇಶ್ ಅಬ್ಬರ
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ದೆಹಲಿ ಕ್ಯಾಪಿಟಲ್ಸ್ ಬೌಲರ್‌ಗಳ ವಿರುದ್ಧ ಗುಜರಾತ್ ಟೈಟಾನ್ಸ್‌ನ ಇಡೀ ತಂಡ 20 ಓವರ್‌ಗಳ ಬ್ಯಾಟಿಂಗ್ ಮಾಡಲು ಸಹ ಬಿಡಲಿಲ್ಲ. ಗುಜರಾತ್ 17.3 ಓವರ್‌ಗಳಲ್ಲಿ ಆಲೌಟ್ ಆಯಿತು. ಮುಖೇಶ್ ಕುಮಾರ್ ಗರಿಷ್ಠ 3 ವಿಕೆಟ್ ಪಡೆದರು. ಇವರಲ್ಲದೆ ಇಶಾಂತ್ ಶರ್ಮಾ ಮತ್ತು ಟ್ರಿಸ್ಟಾನ್ ಸ್ಟಬ್ಸ್ ತಲಾ ಎರಡು ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಮತ್ತು ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.
ಗುಜರಾತ್ ತಂಡದ ಪರ ರಶೀದ್ ಖಾನ್ 31 ರನ್ ಗಳ ಇನ್ನಿಂಗ್ಸ್ ಆಡಿದರು. ಒಂದು ವೇಳೆ ಇವರು ಸಹ ಸಿಂಗಲ್ ಡಿಜಿಟ್‌ನಲ್ಲಿ ಕೆಲಸ ಮುಗಿಸಿದ್ದರೆ, ಅಲ್ಪ ಮೊತ್ತಕ್ಕೆ ಆತಿಥೇಯ ತಂಡ ಕುಸಿಯುತ್ತಿತ್ತು. ಮಧ್ಯಮ ಕ್ರಮಾಂಕದ ರಾಹುಲ್ ತೆವಾಟಿಯಾ 10, ಸಾಯಿ ಸುದರ್ಶನ 12 ರನ್ ಸಿಡಿಸಿದರು.
ಗುರಿಯನ್ನು ಬೆನ್ನಟ್ಟಿದ ಸಂದರ್ಭದಲ್ಲಿ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಗರಿಷ್ಠ 20 ರನ್ ಗಳಿಸಿದರು. ಆದರೆ, ಶಾಯ್ ಹೋಪ್ 19 ರನ್ ಕೊಡುಗೆ ನೀಡಿದರು. ರಿಷಬ್ ಪಂತ್ 16 ರನ್ ಗಳಿಸಿ ಅಜೇಯರಾಗಿ ಮರಳಿದರು ಮತ್ತು ಅಭಿಷೇಕ್ ಪೊರೆಲ್ ಕೂಡ 15 ರನ್ ಕೊಡುಗೆ ನೀಡಿದರು.

ಗಿಲ್ ಹೇಳಿದ್ದೇನು?
ಡೆಲ್ಲಿ ವಿರುದ್ಧ ನಮ್ಮ ತಂಡದ ಬ್ಯಾಟಿಂಗ್ ತುಂಬಾ ಸಾಧಾರಣವಾಗಿತ್ತು. ಮುಂದಿನ ಪಂದ್ಯಕ್ಕೂ ಮುನ್ನ ನಮ್ಮ ನೈಜ ಮನಸ್ಥಿತಿಗೆ ಹಿಂತಿರುಗಬೇಕು. ವಿಕೆಟ್ ಉತ್ತಮವಾಗಿಯೇ ಇತ್ತು. ಎದುರಾಳಿ ತಂಡವು 89 ರನ್‌ಗಳನ್ನು ಬೆನ್ನಟ್ಟುತ್ತಿರುವಾಗ, ನಮ್ಮ ಬೌಲರ್ಗಳು ಶಿಸ್ತಿನ ದಾಳಿ ನಡೆಸಿದರು. ನಾವು ಈಗಾಗಲೇ 3 ಪಂದ್ಯಗಳನ್ನು ಗೆದ್ದಿದ್ದೇವೆ. ಕಳೆದ ಎರಡು ವರ್ಷಗಳಂತೆ ದ್ವಿತೀಯಾರ್ಧದಲ್ಲಿ ನಾವು 5-6 ಹೆಚ್ಚು ಗೆಲ್ಲುತ್ತೇವೆ ಎಂದು ಭಾವಿಸುತ್ತೇವೆ ಎಂದು ಪಂದ್ಯದ ಬಳಿಕ ಶುಭ್‌ಮನ್ ಗಿಲ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications