For Quick Alerts
ALLOW NOTIFICATIONS  
For Daily Alerts
 

IPL 2025: ಅಂಕಪಟ್ಟಿಯಲ್ಲಿ ಆರ್‌ಸಿಬಿ ಕೆಳಗಿಳಿಸಿದ ಗುಜರಾತ್; ಹೈದರಾಬಾದ್ ಪ್ಲೇಆಫ್ ಕನಸು ಭಗ್ನ

ಐಪಿಎಲ್ 2025 ರ 51ನೇ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಿತು. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಗುಜರಾತ್ ಟೈಟಾನ್ಸ್ 38 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೆಳಗಿಳಿಸಿ ಆಗ್ರಸ್ಥಾನ ತಲುಪಿದೆ. ಗುಜರಾತ್ ವಿರುದ್ಧದ ಸೋಲು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ಲೇಆಫ್ ಕಸನನ್ನು ಭಗ್ನಗೊಳಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ನಿಗದಿತ 20 ಓವರ್‍‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 224 ರನ್‌ಗಳನ್ನು ಗಳಿಸಿತು. ಈ ಬೃಹತ್ ಗುರಿ ಬೆನ್ನಟ್ಟಿದ ಹೈದರಾಬಾದ್ 20 ಓವರ್‍‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 186 ರನ್ ಗಳಿಸಲು ಶಕ್ತವಾಯಿತು. ಇದರೊಂದಿಗೆ ಹೈದರಾಬಾದ್ ಟೂರ್ನಿಯಿಂದ ಹೊರಗುಳಿಯಿತು.

GT vs SRH IPL 2025 Toss Match Report Score batting and bowling performance kannada

ಶುಭಮನ್ ಗಿಲ್ ನೇತೃತ್ವದ ಗುಜರಾತ್‌ ಟೈಟಾನ್ಸ್ ತಂಡ ನೀಡಿದ 225 ರನ್‌ಗಳ ಗೆಲುವಿನ ಗುರಿಯನ್ನು ಸನ್‌ರೈಸರ್ಸ್ ಹೈದರಾಬಾದ್ ಬೆನ್ನಟ್ಟಿತು. ಹೈದರಾಬಾದ್ ತಂಡಕ್ಕೆ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಜೋಡಿ ಇನ್ನಿಂಗ್ಸ್ ಆರಂಭಿಸಿದರು. ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ನಡುವೆ 49 ರನ್‌ಗಳ ಜೊತೆಯಾಟ ನಡೆಯಿತು. ಉತ್ತಮ ಫಾರ್ಮ್‌ನಲ್ಲಿದ್ದ ಹೆಡ್ 16 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 20 ರನ್ ಗಳಿಸಿ ಔಟಾದರು.

ಟ್ರಾವಿಸ್ ಔಟಾದ ಬಳಿಕ ಬಂದ ಬ್ಯಾಟರ್ಸ್ ರನ್ ಗಳಿಸುವ ವೇಗದಲ್ಲಿ ವಿಕೆಟ್ ಕಳೆದುಕೊಂಡರು. ಇದರೊಂದಿಗೆ ಅಭಿಷೇಕ್ ಶರ್ಮಾ ಅವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ಸಿಗಲಿಲ್ಲ. ಹೆಡ್ ವಿಕೆಟ್ ಪತನದ ನಂತರ ಬಂದ ಸ್ಫೋಟಕ ಬ್ಯಾಟರ್ಸ್ ಆದ ಹೆನ್ರಿಕ್ ಕ್ಲಾಸೆನ್ 23 ರನ್ ಗಳಿಸಿದರೆ, ಇಶಾನ್ ಕಿಶನ್ ಕೇವಲ 13 ರನ್ ಗಳಿಸಲಷ್ಟೇ ಶಕ್ತರಾದರು. ಇದಾದ ನಂತರ, ಬೇರೆ ಯಾವುದೇ ಬ್ಯಾಟರ್‍‌ನಿಂದ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಪರಿಣಾಮ ಹೈದರಾಬಾದ್ ತಂಡ ಸೋಲು ಕಂಡಿತು.

ಅಭಿಷೇಕ್ ಶರ್ಮಾ ಹೋರಾಟ ವ್ಯರ್ಥ

ಗುಜರಾತ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಹೈದರಾಬಾದ್ ಪರ ಅತಿ ಹೆಚ್ಚು ರನ್ ಗಳಿಸಿದರು. ಅವರು 41 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 74 ರನ್ ಗಳಿಸಿದರು. ಈ ಮೂಲಕ ಹೈದರಾಬಾದ್ ತಂಡಕ್ಕೆ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ ಅವರ ಅರ್ಧಶತಕದ ಹೋರಾಟ ವ್ಯರ್ಥವಾಯಿತು. ಗುಜರಾತ್ ಟೈಟಾನ್ಸ್ ಪರ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ ಮತ್ತು ಜೆರಾಲ್ಡ್ ಕೋಟ್ಜೀ ತಲಾ 1 ವಿಕೆಟ್ ಪಡೆದರು.

ಅತ್ಯುತ್ತಮ ಆಟಗಾರ ಪ್ರಶಸ್ತಿ

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಪರ ನಾಯಕ ಶುಭಮನ್ ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಹೈದರಾಬಾದ್ ತಂಡದ ಬೌಲರ್ಸ್ ಬೆಂಡೆತ್ತಿದ ಶುಭಮನ್ ಗಿಲ್ ಅರ್ಧಶತಕ ಸಿಡಿಸಿ ಮಿಂಚಿದರು. ಗಿಲ್‌ ಕೇವಲ 38 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದಾಗ ದುರುದೃಷ್ಟಕರ ರನೌಟ್ ಆದರು. ಗುಜರಾತ್ ತಂಡ ಬೃಹತ್ ಮೊತ್ತ ಕಲೆ ಹಾಕಲು ಗಿಲ್ ನೆರವಾದರು. ಈ ಪ್ರದರ್ಶನಕ್ಕಾಗಿ ಅವರಿಗೆ ಅತ್ಯುತ್ತಮ ಆಟಗಾರ ಪ್ರಶಸ್ತಿ ಸಿಕ್ಕಿತು.

ತ್ರಿಮೂರ್ತಿಗಳ ಅಬ್ಬರ

ಮೊದಲು ಬ್ಯಾಟಿಂಗ್ ಮಾಡಲು ಇಳಿದ ಗುಜರಾತ್ ಟೈಟಾನ್ಸ್ ತಂಡ ಮತ್ತೊಮ್ಮೆ ಭರ್ಜರಿ ಆರಂಭ ಪಡೆಯಿತು. ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಜೋಡಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪವರ್‍‌ ಪ್ಲೇನಲ್ಲಿ ಗುಜರಾತ್ ಟೈಟಾನ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೆ 82 ರನ್ ಗಳಿಸಿತು. ಇದಾದ ನಂತರ ಏಳನೇ ಓವರ್‍‌ನಲ್ಲಿಯೇ 87 ರನ್ ಗಳಿಗೆ ಮೊದಲ ಹಿನ್ನಡೆ ಅನುಭವಿಸಿತು. ಸುದರ್ಶನ್ ಅರ್ಧಶತಕದ ಸನಿಹದಲ್ಲಿ ಔಟಾದರು. ಸುದರ್ಶನ್ 23 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ 48 ರನ್‌ ಗಳಿಸಿದರು.

ಗುಜರಾತ್ ಟೈಟಾನ್ಸ್ ಮೊದಲ ವಿಕೆಟ್ ಕಳೆದುಕೊಂಡ ನಂತರವೂ, ಶುಭಮನ್ ಗಿಲ್ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದರು. ನಂತರ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಗಿಲ್ ಜೊತೆಗೆ ಜೋಸ್ ಬಟ್ಲರ್ ಕೂಡ ತಮ್ಮ ಬ್ಯಾಟಿಂಗ್ ಪರಾಕ್ರಮ ತೋರಿಸಿದರು. ಈ ಜೋಡಿ 37 ಎಸೆತಗಳಲ್ಲಿ 32 ರನ್‌ಗಳ ಜೊತೆಯಾಟಿದರು. ಉತ್ತಮವಾಗಿ 38 ಎಸೆತಗಳಲ್ಲಿ 76 ರನ್ ಗಳಿಸಿದ ಗಿಲ್ ದುರದೃಷ್ಟಕರ ರನೌಟ್ ಆದರು. ಆರಂಭಿಕರಿಬ್ಬರೂ ಔಟಾದರ ನಂತರ ತಾಳ್ಮೆಯುವ ಬ್ಯಾಟಿಂಗ್ ಜೋಸ್ ಬಟ್ಲರ್ ತಮ್ಮ ಆರ್ಭಟ ಶುರು ಮಾಡಿದರು.

ಸ್ಫೋಟಕ ಬ್ಯಾಟಿಂಗ್ ಮಾಡಿದ ಜೋಸ್ ಬಟ್ಲರ್ ಗುಜರಾತ್ ಟೈಟಾನ್ಸ್ ತಂಡದ ಸ್ಕೋರ್ ಅನ್ನು 200 ರನ್‌ಗಳ ಗಟಿ ದಾಟಿಸಿದರು. ಬಟ್ಲರ್ 37 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ನೆರವಿನಿಂದ 64 ರನ್ ಗಳಿಸಿ ಔಟಾದರು. 4ನೇ ಕ್ರಮಾಂಕದಲ್ಲಿ ಬಂದ ವಾಷಿಂಗ್ಟನ್ ಸುಂದರ್ ವೇಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅವರು 16 ಎಸೆತಗಳಲ್ಲಿ 1 ಸಿಕ್ಸರ್ ಸಹಾಯದಿಂದ 21 ರನ್ ಗಳಿಸಿದರೆ, ರಾಹುಲ್ ತೆವಾಟಿಯಾ 6 ರನ್ ಗಳಿಸಿ ಔಟಾದರು.

ರಶೀದ್ ಖಾನ್ ಮೊದಲ ಎಸೆತದಲ್ಲೇ ಔಟಾದರು. ಇನ್ನೂ ಶಾರುಖ್ ಖಾನ್ ಕೂಡ 6 ರನ್ ಗಳಿಸಿ ಅಜೇಯರಾಗುಳಿದಿರು. ಹೈದರಾಬಾದ್ ಪರ ವೇಗಿ ಉನಾದ್ಕಟ್ ಗರಿಷ್ಠ ಮೂರು ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ ಮತ್ತು ಜೀಶನ್ ಅನ್ಸಾರಿ ತಲಾ 1 ವಿಕೆಟ್ ಪಡೆದರು.

ಪ್ರಸ್ತುತ ಗುಜರಾತ್ ಟೈಟಾನ್ಸ್ ತಂಡವು ಇದುವರೆಗೆ ಆಡಿದ 10 ಪಂದ್ಯಗಳಲ್ಲಿ 7 ಗೆಲುವುಗಳೊಂದಿಗೆ 14 ಅಂಕಗಳನ್ನು ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 2025 ರ ಪ್ಲೇಆಫ್‌ನಿಂದ ಬಹುತೇಕ ಹೊರಬಿದ್ದಿದೆ. ಹೈದರಾಬಾದ್ ಆಡಿದ10 ಪಂದ್ಯಗಳಲ್ಲಿ 7 ಸೋಲುಗಳ ನಂತರ 6 ಅಂಕಗಳೊಂದಿಗೆ 9 ನೇ ಸ್ಥಾನದಲ್ಲಿದೆ.

ಉಭಯ ತಂಡಗಳ ಪ್ಲೇಯಿಂಗ್-11

ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಬ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಜೆರಾಲ್ಡ್ ಕೋಟ್ಜಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ಕೀಪರ್), ಅನಿಕೇತ್ ವರ್ಮಾ, ಕಮಿಂದು ಮೆಂಡಿಸ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್, ಜೀಶನ್ ಅನ್ಸಾರಿ, ಮೊಹಮ್ಮದ್ ಶಮಿ.

Story first published: Friday, May 2, 2025, 21:52 [IST]
Other articles published on May 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+