ಜಿಟಿ20ಎಲ್: ಕೀರನ್ ಪೊಲಾರ್ಡ್ ಕೆಣಕಿದ ಡ್ವೇನ್ ಬ್ರಾವೋ-ವಿಡಿಯೋ

ಒಟ್ಟಾವಾ, ಜುಲೈ 30: ಗ್ಲೋಬಲ್ ಟಿ20 ಲೀಗ್ 1ನೇ ಸುತ್ತಿನ 7ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆಲ್ ರೌಂಡರ್‌ಗಳಾದ ಕೀರನ್ ಪೊಲಾರ್ಡ್ ಮತ್ತು ಡ್ವೇನ್ ಬ್ರಾವೋ ನಡುವೆ ಬಿಗು ವಾತಾವರಣ ನಿರ್ಮಾಣವಾಗುವುದರಲ್ಲಿತ್ತು. ಟೊರೊಂಟೋ ನ್ಯಾಷನಲ್ಸ್ ಮತ್ತು ವಿನ್ನಿಪೆಗ್ ಹಾಕ್ಸ್ ನಡುವಿನ ಪಂದ್ಯದಲ್ಲಿ ಈ ದೃಶ್ಯ ಕಂಡುಬಂತು.
ಸೋಮವಾರ (ಜುಲೈ 29) ನಡೆದ ಟೊರೊಂಟೋ ನ್ಯಾಷನಲ್ಸ್ vs ವಿನ್ನಿಪೆಗ್ ಹಾಕ್ಸ್ ನಡುವಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ನಾಯಕತ್ವದ ಟೊರೊಂಟೋ ನ್ಯಾಷನಲ್ಸ್ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡದ ಬ್ರಾವೋ, ಪೊಲಾರ್ಡ್ ಅವರನ್ನು ಕೆಣಕಿದರು. ಪೊಲಾರ್ಡ್ ಅವರನ್ನು ಔಟ್ ಮಾಡಿದ ಬಳಿಕ ಬ್ರಾವೋ ಕೆಣಕೋ ರೀತಿಯಲ್ಲಿ ಲಭಿಸಿದ ವಿಕೆಟ್ ಸೆಲೆಬ್ರೇಟ್ ಮಾಡಿದರು.
ಪೊಲಾರ್ಡ್ ಕೇವಲ 21 ಎಸೆತಗಳಿಗೆ 52 ರನ್ ಪೇರಿಸಿ 19.2ನೇ ಓವರ್‌ನಲ್ಲಿ ಬ್ರಾವೋ ಎಸೆತಕ್ಕೆ ಕ್ಯಾಚ್ ನೀಡಿದರು. ಆಗ ಬ್ರಾವೋ, ಪೊಲಾರ್ಡ್ ಅವರೆದುರು ಭಿನ್ನ ರೀತಿಯಲ್ಲಿ ವಿಕೆಟ್ ಸಂಭ್ರಮಾಚರಿಸಿದರು. ಆಗ ಕೊಂಚ ಗರಂ ಆದಂತೆ ಕಂಡ ಪೊಲಾರ್ಡ್ ಬ್ರಾವೋಗೆ ಬ್ಯಾಟ್‌ನಿಂದ ಕುಕ್ಕಿದರು. ಬ್ರಾವೋ ಇದಕ್ಕೆ ಪ್ರತಿಯಾಗಿ ನಕ್ಕಿದ್ದರಿಂದ ಬಿಗುವಾಗಬೇಕಿದ್ದ ವಾತಾವರಣ ತಿಳಿಯಾಯ್ತು.
ವಿರುದ್ಧ ತಂಡಗಳಲ್ಲಿದ್ದಾಗ ಬ್ರಾವೋ-ಪೊಲಾರ್ಡ್ ಹೀಗೆ ಪರಸ್ಪರ ಕೆಣಕಿ-ಕೆಣಕಿಸಿಕೊಳ್ಳೋದು ಇದೇ ಮೊದಲಲ್ಲ. ಐಪಿಎಲ್‌ನಲ್ಲೂ ಮುಂಬೈ ಇಂಡಿಯನ್ಸ್‌ನಲ್ಲಿರುವ ಪೊಲಾರ್ಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿರುವ ಬ್ರಾವೋ ಹೀಗೇ ಕಾಲುಕೆರೆದುಕೊಳ್ಳುತ್ತಿರುತ್ತಾರೆ. ಅಂದ್ಹಾಗೆ ಪಂದ್ಯದಲ್ಲಿ ವಿನ್ನಿಪೆಗ್ ಹಾಕ್ಸ್ 3 ವಿಕೆಟ್ ಗೆಲುವನ್ನಾಚರಿಸಿತು. ಯುವಿ 26 ಎಸೆತಗಳಿಗೆ 45 ರನ್ ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications