For Quick Alerts
ALLOW NOTIFICATIONS  
For Daily Alerts
 

ಸೋಫಿಯಾ ಡಿವೈನ್‌ 2 ಕೋಟಿ, ದೀಪ್ತಿಗೆ 3.2 ಕೋಟಿ ರೂ, ಅಮೆಲಿಯಾ ಕೆರ್‌ಗೆ 3 ಕೋಟಿ ರೂ.

ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ್ತಿ ಸೋಫಿಯಾ ಡಿವೈನ್‌ ಅವರನ್ನು ಕೊಳ್ಳಲು ಆರಂಭದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಆರ್‌ಸಿಬಿ ತಂಡಗಳು ಜಿದ್ದಾಜಿದ್ದಿನ ಕಾಳಗ ನಡೆಸಿದವು. ಇವರ ಮೂಲ ಬೆಲೆಗಿಂತ ಹರಾಜು ಬೆಲೆ ದುಪ್ಪಟ್ಟು ಆದಾಗ ಆರ್‌ಸಿಬಿ ಅಂಗಳದಿಂದ ಹೊರ ನಡೆಯಿತು. ಆಗ ಅಖಾಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಎಂಟ್ರಿ ನೀಡಿತು.

ನೋಡು ನೋಡುತ್ತಿದ್ದಂತೆ ಸೋಫಿಯಾ ಅವರ ಬೆಲೆ ಗಗನಕ್ಕೆ ಏರುತ್ತಲೇ ಸಾಗಿತು. ಈ ವೇಳೆ ಗುಜರಾತ್ ಹಾಗೂ ಡೆಲ್ಲಿ ತಂಡಗಳು ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲೇ ಬೇಕು ಎಂದು ಜಿದ್ದಾಜಿದ್ದಿಗೆ ಬಿದ್ದವು. ಇವರನ್ನು ಕೊಳ್ಳುವಲ್ಲಿ ಗುಜರಾತ್ ಸಫಲವಾಯಿತು. ಇವರಿಗೆ ಗುಜರಾತ್‌ 2 ಕೋಟಿ ರೂ. ನೀಡಿತು. ಇವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ 18 ಪಂದ್ಯಗಳಲ್ಲಿ 402 ರನ್‌ ಬಾರಿಸಿದ್ದು, 9 ವಿಕೆಟ್‌ ಪಡೆದಿದ್ದಾರೆ.

Gujarat Pays 2 Cr for Devine Deepti Sharma Joins UP for 3 2 Cr in WPL Auction

ಇನ್ನು ಇತ್ತೀಚಿಗೆ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಸಣಿ ಶ್ರೇಷ್ಠ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ದೀಪ್ತಿ ಶರ್ಮಾ ಅವರನ್ನು ಕೊಳ್ಳಲು ಮಾಲೀಕರು ಹಣದ ಹೊಳೆ ಹರಿಸಿದರು. ಆದರೆ ಯುಪಿ ವಾರಿಯರ್ಜ್‌ ತಂಡ 3.2 ಕೋಟಿ ರೂ.ಗೆ ಆರ್‌ಟಿಎಂ ಬಳಿಸಿ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇವರು ಈ ಹಿಂದೆಯೂ ಯುಪಿ ತಂಡದ ಪರ ಆಡಿದ್ದರು. ಈಗ ಮತ್ತೊಮ್ಮೆ ಯುಪಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದೀಪ್ತಿ ಶರ್ಮಾಗೆ 3.20 ಕೋಟಿ ರೂ.

ದೀಪ್ತಿ ಶರ್ಮಾ ಅವರ ಹೆಸರು ಅಂಗಳಕ್ಕೆ ಬರುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್‌ ಇವರಿಗೆ 50 ಲಕ್ಷ ರೂ. ಬಾಜಿ ಕಟ್ಟಿತು. ಆದರೆ ಬೇರೆ ಯಾವ ತಂಡಗಳು ಸಹ ಇವರಿಗೆ ಹಣವನ್ನು ಹೂಡದಾಗ ದೀಪ್ತಿ 50 ಲಕ್ಷ ರೂ.ಗೆ ಡೆಲ್ಲಿ ಪಾಲಾಗುತ್ತಿದ್ದರು. ಆದ್ರೆ ಆರ್‌ಟಿಎಂ ಯುಪಿ ವಾರಿಯರ್ಜ್‌ ಅವರ ಬಳಿ ಇದ್ದಿದ್ದರಿಂದ ಅವರಿಗೆ ಆರ್‌ಟಿಎಂ ಬಳಸುವಿರಾ ಎಂದು ಕೇಳಿದಾಗ ಹೌದು ಎಂದು ಹೇಳಿದರು. ಆಗ ಡೆಲ್ಲಿ 50 ಲಕ್ಷ ರೂಗಳಿಂದ ದೀಪ್ತಿ ಮೊತ್ತವನ್ನು 3.20 ಕೋಟಿ ಹೂಡಲು ಮನಸ್ಸು ಮಾಡಿತು. ಆಗ ಯುಪಿ ತಾವು ಅವರನ್ನು ಕೊಳ್ಳುವುದಾಗಿ ಸೂಚಿಸಿದರು. ಮುಂದಿನ ಆವೃತ್ತಿಯಲ್ಲಿ ದೀಪ್ತಿ ಯುಪಿ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ.

Story first published: Thursday, November 27, 2025, 15:56 [IST]
Other articles published on Nov 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+