Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಜಿಟಿ ತಂಡಕ್ಕೆ ಒಂದೇ ವಾರದಲ್ಲಿ 12.75 ಕೋಟಿ ರೂ. ನಷ್ಟ; ಇಬ್ಬರು ಸ್ಟಾರ್ ಆಟಗಾರರು ಔಟ್

ಐಪಿಎಲ್ 2025 ರಲ್ಲಿ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಅದ್ಭುತ ಪ್ರದರ್ಶನ ನೀಡುತ್ತಿದೆ. ಇಂದು ಐಪಿಎಲ್ 26 ನೇ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಗುಜರಾತ್ ಟೈಟಾನ್ಸ್ ಎದುರಿಸುತ್ತಿದೆ. ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಲಕ್ನೋ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ಎರಡು ಹಿನ್ನಡೆ ಅನುಭವಿಸಿದೆ.

ಗುಜರಾತ್ ಟೈ ಟಾನ್ಸ್ ತಂಡದ ಇಬ್ಬರು ಸ್ಟಾರ್ ಆಟಗಾರರು ಐಪಿಎಲ್ 2025 ರ ಟೂರ್ನಿಯಿಂದ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೋ ರಬಾಡ ವೈಯಕ್ತಿಕ ಕಾರಣಗಳಿಂದ ತವರಿಗೆ ಮರಳಿದರೆ, ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ಬೆನ್ನುನೋವಿನಿಂದಾಗಿ ತಮ್ಮ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

Gujarat Titans lose two star players in a week in IPL 2025

ಗುಜರಾತ್ ಟೈಟಾನ್ಸ್ ತಂಡ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು, ಒಂದರಲ್ಲಿ ಸೋಲು ಕಂಡಿದೆ. ಪ್ರಸ್ತುತ 8 ಅಂಕಗಳೊಂದಿಗೆ ಗುಜರಾತ್ ಪಾಯಿಂಟ್ ಪಟ್ಟಿಯಲ್ಲಿ ಆಗ್ರ ಸ್ಥಾನದಲ್ಲಿದೆ. ಇಂತಹ ಸಂದರ್ಭದಲ್ಲಿ ಕಗಿಸೋ ರಬಾಡಾ ಮತ್ತು ಗ್ಲೆನ್ ಫಿಲಿಪ್ಸ್ ಹೊರಗುಳಿದಿರುವುದು ಗುಜರಾತ್ ಟೈಟಾನ್ಸ್ ತಂಡಕ್ಕೆ ದೊಡ್ಡ ಪೆಟ್ಟು ನೀಡಿದೆ.

ಏಪ್ರಿಲ್ 6 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಸಮಯದಲ್ಲಿ ಗ್ಲೆನ್ ಫಿಲಿಪ್ಸ್ ಗಾಯಗೊಂಡಿದ್ದರು. ಇದಾದ ನಂತರ ಅವರು ಬೆನ್ನುನೋವಿನಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳದ ಕಾರಣ ಅವರು ನ್ಯೂಜಿಲೆಂಡ್‌ಗೆ ಮರಳಿದ್ದಾರೆ. ಫಿಲಿಪ್ಸ್ ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಆಡುವ ಹನ್ನೊಂದರ ಭಾಗವಾಗಿಲ್ಲ. ಆದರೆ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರು ಬದಲಿ ಫೀಲ್ಡರ್ ಆಗಿ ಮೈದಾನಕ್ಕೆ ಬಂದಿದ್ದರು.

ಇದಕ್ಕೂ ಮುನ್ನ ಸ್ಟಾರ್ ಬಲಗೈ ವೇಗದ ಬೌಲರ್ ಕಗಿಸೊ ರಬಾಡ ಗುಜರಾತ್ ಟೈಟಾನ್ಸ್ ಶಿಬಿರವನ್ನು ತೊರೆದಿದ್ದರು. ರಬಾಡಾ ವೈಯಕ್ತಿಕ ಕಾರಣಗಳಿಂದ ತವರಿಗೆ ಮರಳಿದ್ದರು. ಈಗ ಗುಜರಾತ್ ಟೈಟಾನ್ಸ್ ತಂಡ ಈ ಇಬ್ಬರು ಆಟಗಾರರನ್ನು ಖಂಡಿತ ಮಿಸ್ ಮಾಡಿಕೊಳ್ಳಲಿದೆ.

ಕಗಿಸೋ ರಬಾಡ ಮತ್ತು ಗ್ಲೆನ್ ಫಿಲಿಪ್ಸ್ ಐಪಿಎಲ್ ತೊರೆದು ತಮ್ಮ ದೇಶಕ್ಕೆ ಮರಳಿದ್ದರಿಂದ, ಗುಜರಾತ್ ಟೈಟಾನ್ಸ್ ಒಂದು ವಾರದೊಳಗೆ 12.75 ಕೋಟಿ ರೂ. ನಷ್ಟವನ್ನು ಅನುಭವಿಸಿದೆ. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಜಿಟಿ ರಬಾಡ ಅವರನ್ನು 10.75 ಕೋಟಿ ರೂ.ಗೆ ಮತ್ತು ಫಿಲಿಪ್ಸ್ ಅವರನ್ನು 2 ಕೋಟಿ ರೂ.ಗೆ ಬಿಡ್ ಮಾಡಿತ್ತು.

ಶುಭಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಆರಂಭಿಕ ಸೋಲಿನ ನಂತರ, ಜಿಟಿ ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಗ್ರಸ್ಥಾನದಲ್ಲಿದೆ. ಜಿಟಿ ಪ್ರಸ್ತುತ +1.413 ರ ಅತ್ಯುತ್ತಮ ನಿವ್ವಳ ರನ್ ರೇಟ್ ಹೊಂದಿದೆ.

Story first published: Saturday, April 12, 2025, 15:49 [IST]
Other articles published on Apr 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+