For Quick Alerts
ALLOW NOTIFICATIONS  
For Daily Alerts
 

IPL Orange Cap: ಸಾಯಿ ಸುದರ್ಶನ್‌ ಮುಡಿಗೆ ಆರೆಂಜ್‌ ಕ್ಯಾಪ್‌

ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಈ ಮೂಲಕ ಇತಿಹಾಸ ನಿರ್ಮಿಸಿದೆ. ಈ ಲೀಗ್‌ನಲ್ಲಿ ಭರವಸೆಯ ಬ್ಯಾಟರ್‌ ಸಾಯಿ ಸುದರ್ಶನ್‌ ಅಮೋಘ ಪ್ರದರ್ಶನ ನೀಡಿ ಆರೆಂಜ್‌ ಕ್ಯಾಪ್‌ನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರಿಗೆ ನೀಡುವ ಆರೆಂಜ್‌ ಕ್ಯಾಪನ್ನು ಗುಜರಾತ್‌ ಟೈಟಾನ್ಸ್ ತಂಡದ ಸಾಯಿ ಸುದರ್ಶನ್‌ ಪಡೆದಿದ್ದಾರೆ. ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಸಾಯಿ ಸುದರ್ಶನ್‌ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಆರಂಭದಿಂದಲೂ ಮುಂಚೂಣಿಯಲ್ಲಿದ್ದರು. ಫೈನಲ್‌ ಪಂದ್ಯ ಹಾಗೂ ಎರಡನೇ ಕ್ವಾಲಿಫೈಯರ್‌ ಪಂದ್ಯವನ್ನು ಆಡದೇ ಇದ್ದರೂ ಸಹ ಇವರು ಅತಿ ಹೆಚ್ಚು ರನ್‌ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು ಈ ಮೂಲಕ ದೊಡ್ಡ ಸಾಧನೆ ಮಾಡಿದರು.

Gujarat Titans Sai Sudharsan Wins IPL Orange Cap Despite Missing Final Matches

ಪ್ರಸಕ್ತ ಲೀಗ್‌ನಲ್ಲಿ ಸಾಯಿ ಸುದರ್ಶನ್‌ ಆಡಿದ 15 ಪಂದ್ಯಗಳಲ್ಲಿ 54ರ ಸರಾಸರಿಯಲ್ಲಿ 759 ರನ್‌ ಸಿಡಿಸಿ ಅಬ್ಬರಿಸಿದರು. ಈ ವೇಳೆ 1 ಶತಕ, 6 ಅರ್ಧಶತಕ ಸಿಡಿಸಿದರು. ಈ ಮೂಲಕ ಪ್ರಸಕ್ತ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ಸ್‌

ಸಾಯಿ ಸುದರ್ಶನ್‌, ಗುಜರಾತ್ ಟೈಟಾನ್ಸ್‌, 15 ಪಂದ್ಯ, 759 ರನ್‌
ಸೂರ್ಯಕುಮಾರ್ ಯಾದವ್, ಮುಂಬೈ ಇಂಡಿಯನ್ಸ್‌, 16 ಪಂದ್ಯ, 717 ರನ್‌
ವಿರಾಟ್ ಕೊಹ್ಲಿ, ಆರ್‌ಸಿಬಿ, 15 ಪಂದ್ಯ, 657 ರನ್‌
ಶುಭಮನ್‌ ಗಿಲ್‌, ಗುಜರಾತ್ ಟೈಟಾನ್ಸ್‌, 15 ಪಂದ್ಯ, 650 ರನ್‌
ಮಿಚೆಲ್ ಮಾರ್ಷ್, ಎಲ್‌ಎಸ್‌ಜಿ, 13 ಪಂದ್ಯ, 627 ರನ್‌

ವರ್ಷ ಆಟಗಾರ ತಂಡ ರನ್‌
2008 ಶಾನ್ ಮಾರ್ಷ್ ಪಂಜಾಬ್‌ 616
2009 ಮ್ಯಾಥ್ಯೂ ಹೇಡನ್‌ ಸಿಎಸ್‌ಕೆ 572
2010 ಸಚಿನ್ ತೆಂಡೂಲ್ಕರ್‌ ಮುಂಬೈ 618
2011 ಕ್ರಿಸ್‌ ಗೇಲ್‌ ಆರ್‌ಸಿಬಿ 608
2012 ಕ್ರಿಸ್‌ ಗೇಲ್‌ ಆರ್‌ಸಿಬಿ 733
2013 ಮೈಕಲ್‌ ಹಸ್ಸಿ ಸಿಎಸ್‌ಕೆ 733
2014 ರಾಬಿನ್ ಉತ್ತಪ್ಪ ಕೆಕೆಆರ್‌ 660
2015 ಡೇವಿಡ್ ವಾರ್ನರ್‌ ಎಸ್‌ಆರ್‌ಎಚ್‌ 562
2016 ವಿರಾಟ್ ಕೊಹ್ಲಿ ಆರ್‌ಸಿಬಿ 973
2017 ಡೇವಿಡ್ ವಾರ್ನರ್ ಎಸ್‌ಆರ್‌ಎಚ್‌ 641
2018 ಕೇನ್ ವಿಲಿಯಮ್ಸನ್‌ ಎಸ್‌ಆರ್‌ಎಚ್‌ 735
2019 ಡೇವಿಡ್ ವಾರ್ನರ್ ಎಸ್‌ಆರ್‌ಎಚ್‌ 692
2020 ಕೆಎಲ್‌ ರಾಹುಲ್‌ ಪಂಜಾಬ್‌ 670
2021 ರುತುರಾಜ್ ಗಾಯಕ್ವಾಡ್‌ ಸಿಎಸ್‌ಕೆ 635
2022 ಜೋಸ್ ಬಟ್ಲರ್ ಆರ್‌ಆರ್‌ 863
2023 ಶುಭಮನ್‌ ಗಿಲ್‌ ಜಿಟಿ 890
2024 ವಿರಾಟ್‌ ಕೊಹ್ಲಿ ಆರ್‌ಸಿಬಿ 741
2025 ಸಾಯಿ ಸುದರ್ಶನ್‌ ಜಿಟಿ 759

Story first published: Wednesday, June 4, 2025, 0:15 [IST]
Other articles published on Jun 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+