For Quick Alerts
ALLOW NOTIFICATIONS  
For Daily Alerts
 

IPL 2025: ಗಿಲ್-ಸುಂದರ್ ಅಬ್ಬರ; ಗುಜರಾತ್‌ಗೆ ಹ್ಯಾಟ್ರಿಕ್ ಗೆಲುವು

ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ 2025 ರಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಐಪಿಎಲ್ 2025 ರ 19 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಗುಜರಾತ್ ಟೈಟಾನ್ಸ್ 7 ವಿಕೆಟ್‌ಗಳಿಂದ ಸೋಲಿಸಿತು. ಇದು ಹೈದರಾಬಾದ್ ತಂಡಕ್ಕೆ ಎದುರಾದ ಸತತ ನಾಲ್ಕನೇ ಸೋಲು. ಈ ಗೆಲುವಿನೊಂದಿಗೆ ಗುಜರಾತ್ ತಂಡವು 6 ಅಂಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ನಂತರ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತಲುಪಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 2025 ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಹೈದರಾಬಾದ್ 2 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

Gujarat Titans won by 7 wkts against Sunrisers Hyderabad in IPL 2025 match 19

ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 152 ರನ್‌ಗಳಿಗೆ ಕಟಗಟಿ ಹಾಕಿತು. ಹೈದರಬಾದ್ ನೀಡಿದ ಸುಲಭ ಗುರಿ ಬೆನ್ನಟ್ಟಿ ಗುಜರಾತ್ ಪರ ನಾಯಕ ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನಡೆಸಿದರು. ಹೀಗಾಗಿ ಗುಜರಾತ್ ಕೇವಲ 16.4 ಓವರ್‌ಗಳಲ್ಲಿ 153 ರನ್‌ಗಳನ್ನು ಗಳಿಸಿ ಗೆಲುವು ಸಾಧಿಸಿತು.

ಟಾಸ್ ಗೆದ್ದ ನಂತರ, ಗುಜರಾತ್ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದರು. ಈ ನಿರ್ಧಾರ ಸರಿಯಾಗಿದೆ ಎಂದು ಗುಜರಾತ್ ಬೌಲರ್‌ಗಳು ಸಾಬೀತುಪಡಿಸಿದರು. ಮೊಹಮ್ಮದ್ ಸಿರಾಜ್ ಮತ್ತು ಸಾಯಿ ಕಿಶೋರ್ ಹೈದರಾಬಾದ್ ತಂಡದ ಟಾಪ್ ಆರ್ಡರ್ ಅನ್ನು ಬೇಟೆಯಾಡಿದರು.

ಹೈದರಾಬಾದ್ ತಂಡದ ಸ್ಫೋಟಕ ಅಗ್ರ ಕ್ರಮಾಂಕ ಮತ್ತೊಮ್ಮೆ ವಿಫಲವಾಯಿತು. ಅಭಿಷೇಕ್ ಶರ್ಮಾ (18), ಟ್ರಾವಿಸ್ ಹೆಡ್ (8) ಮತ್ತು ಇಶಾನ್ ಕಿಶನ್ (17) ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲವಾದರು. ನಿತೀಶ್‌ಕುಮಾರ್ ರೆಡ್ಡಿ (31) ಮತ್ತು ಹೆನ್ರಿಕ್ ಕ್ಲಾಸೆನ್ (27) ಆರ್ಕಷಕ ಶಾಟ್‌ಗಳನ್ನು ಹೊಡೆದರು. ಆದರೆ ಅವುಗಳನ್ನು ಬಿಗ್ ಸ್ಕೋರ್‌ಗಳಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಲಿಲ್ಲ.

ಸನ್‌ ರೈಸರ್ಸ್ ಹೈದರಾಬಾದ್ ನಾಯಕ ಕಮ್ಮಿನ್ಸ್ ಅವರ ಅಜೇಯ 22 ರನ್‌ಗಳ ಸಹಾಯದಿಂದ ಹೈದರಾಬಾದ್ 150 ರನ್‌ಗಳ ಗಡಿ ತಲುಪಿತು. ಆದರೆ ಇದು ಗೆಲುವಿಗೆ ಸಾಕಾಗಲಿಲ್ಲ. ಗುಜರಾತ್ ಪರ ಸಿರಾಜ್ 4 ವಿಕೆಟ್ ಪಡೆದರೆ, ಸಾಯಿ ಕಿಶೋರ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಪಡೆದರು.

ಗುರಿಯನ್ನು ಬೆನ್ನಟ್ಟಿದ ಗುಜರಾತ್ ಸುಲಭವಾಗಿ ಗೆಲುವು ಸಾಧಿಸಿತು. ಗುಜರಾತ್ ಆರಂಭ ಉತ್ತಮವಾಗಿರಲಿಲ್ಲ. ಏಕೆಂದರೆ ಇಬ್ಬರು ಆರಂಭಿಕ ಬ್ಯಾಟರ್‍‌ಗಳು16 ರನ್‌ಗಳಿಗೆ ಔಟಾದರು. ನಂತರ ನಾಯಕ ಶುಭಮನ್ ಗಿಲ್ ಅವರ ಅಜೇಯ 61 ರನ್‌ಗಳು ಮತ್ತು ವಾಷಿಂಗ್ಟನ್ ಸುಂದರ್ ಅವರ 49 ರನ್‌ಗಳು ತಂಡಕ್ಕೆ ನೆರವಾಯಿತು. ಸುಂದರ್ ಅರ್ಧಶತಕದ ಜೊತೆಗೆ ಪಂದ್ಯವನ್ನು ಮುಗಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, 5 ನೇ ಕ್ರಮಾಂಕದಲ್ಲಿ ಬಂದ ಶೆರ್ಫೇನ್ ರುದರ್ಫೋರ್ಡ್ 16 ಎಸೆತಗಳಲ್ಲಿ 35 ರನ್ ಗಳಿಸಿ 17 ನೇ ಓವರ್‌ನಲ್ಲಿಯೇ ಪಂದ್ಯವನ್ನು ಗೆಲ್ಲಿಸಿದರು.

Story first published: Sunday, April 6, 2025, 23:31 [IST]
Other articles published on Apr 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+