ಗುಜರಾತ್ ಪೋರನ ಅಮೊಘ ಸಾಧನೆ: ಶಾಲಾ ಟೂರ್ನಿಯಲ್ಲಿ 498 ರನ್
ಗುಜರಾತ್‌ನ 18 ವರ್ಷದ ಪೋರ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ್ದಾನೆ. ತಮ್ಮ ಧಮಾಕೆದಾರ ಬ್ಯಾಟಿಂಗ್ ಮೂಲಕ ತಾನು ಪ್ರತಿನಿಧಿಸುವ ಶಾಲೆಗೆ ನೆರವಾದ ಪ್ಲೇಯರ್ ಅಬ್ಬರಿಸಿದ್ದಾನೆ. ಅಲ್ಲದೆ ದಾಖಲೆಯ ಪುಟದಲ್ಲಿ ಸ್ಥಾನ ಪಡೆದು ಬೀಗಿದ್ದಾನೆ.
ಗುಜರಾತ್‌ನ ಸೆಂಟ್ರಲ್ ಬೋರ್ಡ್ ಕ್ರಿಕೆಟ್ ಅಹಮದಾಬಾದ್ ಅಡಿಯಲ್ಲಿ ಶಾಲಾ ಟೂರ್ನಿ ನಡೆಯುತ್ತಿದೆ. ಇದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಡಿಯಲ್ಲಿ ಬರುತ್ತದೆ. ಶಿವಾಯ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದಿವಾನ್ ಬಲ್ಲುಭಾಯ್ ಕಪ್ ಅಂಡರ್ 19 ಪಂದ್ಯಾವಳಿಯಲ್ಲಿ ಈ ಪೋರ ಅಮೋಘ ಬ್ಯಾಟಿಂಗ್ ನಡೆಸಿ ದಾಖಲೆ ಬರೆದಿದ್ದಾನೆ.

ಶಾಲಾ ಕ್ರಿಕೆಟ್‌ನಲ್ಲಿ ದಾಖಲೆ
ಸೇಂಟ್ ಕ್ಸೇವಿಯರ್ಸ್ (ಲೊಯೊಲಾ) ಹಾಗೂ ಜೆಎಲ್ ಇಂಗ್ಲಿಷ್ ಸ್ಕೂಲ್ ನಡುವಣ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ದ್ರೋಣಾ ದೇಸಾಯಿ 498 ರನ್‌ಗಳ ಇನಿಂಗ್ಸ್ ಕಟ್ಟಿ ಅಬ್ಬರಿಸಿದ್ದಾರೆ. ಈ ಮೂಲಕ ದೇಶದಲ್ಲಿ ಅತಿ ದೊಡ್ಡ ಇನಿಂಗ್ಸ್ ಕಟ್ಟಿದ ಆರನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಮುಂಬೈ ತಂಡದ ಪ್ರಣವ್ ಧನ್ವಾಡೆ (1009 ರನ್), ಪೃಥ್ವಿ ಶಾ (546 ರನ್), ಡಿಆರ್ ಹವೇವಾಲ್ಲಾ (515 ರನ್), ಚಮನ್‌ಲಾಲ (506 ರನ್), ಅರ್ಮಾನ್ ಜಾಫರ್ (498 ರನ್) ಈ ಮೊದಲು ಗರಿಷ್ಠ ಸ್ಕೋರ್ ಮಾಡಿದ್ದರು. ಈಗ ಈ ಸಾಲಿಗೆ ದ್ರೋಣಾ ದೇಸಾಯಿ ಸೇರಿದ್ದಾರೆ.
ನನಗೆ ಯಾವುದೇ ಮಾಹಿತಿ ಇರಲಿಲ್ಲ
ಪಂದ್ಯದ ಬಳಿಕ ಮಾತನಾಡಿರುವ ದ್ರೋಣಾ ದೇಸಾಯಿ, ನಾನು 500 ರನ್‌ಗಳ ಹತ್ತಿರದಲ್ಲಿದ್ದ ಬಗ್ಗೆ ನನಗೆ ತಿಳಿದಿರಲಿಲ್ಲ. ಈ ಮೈದಾನದಲ್ಲಿ ಸ್ಕೋರ್ ಬೋರ್ಡ್ ಸಹ ಇಲ್ಲ. ನನ್ನ ತಂಡ ಸಹ ನನಗೆ ನೀವು 498 ರನ್‌ಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರಾ ಎಂಬ ಬಗ್ಗೆ ಇನ್ಫಾರ್ಮ್ ಸಹ ಮಾಡಲಿಲ್ಲ. ನಾನು ನನ್ನ ನೈಜ ಆಟವನ್ನು ಆಡಲು ಮುಂದಾಗಿ ಔಟ್ ಆದೆ. ನಾನು ಇಷ್ಟು ದೊಡ್ಡ ಇನಿಂಗ್ಸ್ ಆಡಿರುವುದು ನಿಜಕ್ಕೂ ಖುಷಿಯ ವಿಚಾರ ಎಂದು ದ್ರೋಣಾ ದೇಸಾಯಿ ತಿಳಿಸಿದ್ದಾರೆ.
ನಾನು ಏಳು ವಯಸ್ಸಿನಲ್ಲಿ ಇದ್ದಾಗಿನಿಂದ ಕ್ರಿಕೆಟ್ ಆಡಲು ಆರಂಭಿಸಿದ್ದೇನೆ. ನನ್ನ ತಂದೆ ನನಗೆ ತುಂಬ ಪ್ರೋತ್ಸಾಹ ನೀಡಿದ್ದಾರೆ. ಶಾಲೆಗಳಿಗೆ ನಾನು ಪರೀಕ್ಷೆಗಳಿದ್ದಾಗ ಮಾತ್ರ ಹೋಗುತ್ತಿದೆ. ಮೈದಾನದಲ್ಲಿ ಬೆವರು ಹರಿಸುವುದೇ ನನ್ನ ಕೆಲಸವಾಗಿತ್ತು ಎಂದು ದ್ರೋಣಾ ದೇಸಾಯಿ ತಿಳಿಸಿದ್ದಾರೆ.
ಡ್ರೋನ್ ದೇಸಾಯಿ ಪ್ರತಿನಿಧಿಸುವ ತಂಡ 712 ರನ್‌ಗಳಿಂದ ಜೆಎಲ್ ಇಂಗ್ಲಿಂಷ್ ಶಾಲೆಯನ್ನು ಮಣಿಸಿತು. ಈಗಾಗಲೇ ಗುಜರಾತ್ ಅಂಡರ್ 14 ತಂಡವನ್ನು ಪ್ರತಿನಿಧಿಸಿರುವ ಡ್ರೋನ್ ದೇಸಾಯಿ, ಈಗ ತಮ್ಮ ರಾಜ್ಯದ ಅಂಡರ್ 19 ತಂಡವನ್ನು ಪ್ರತಿನಿಧಿಸುವ ಕನಸು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications