Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Maharaja Trophy T20: ಸ್ಮರಣ್-ಪ್ರವೀಣ್ ದುಬೆ ಅಬ್ಬರಕ್ಕೆ ಮಂಗಳೂರು ಡ್ರಾಗನ್ಸ್ ಸೈಲೆಂಟ್

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ 18ನೇ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ ವಿರುದ್ಧ ಗುಲ್ಬರ್ಗ ಮಿಸ್ಟಿಕ್ಸ್ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಗೆಲವಿಗಾಗಿ ಹೋರಾಡಿ ಮಂಗಳೂರು ಅಂತಿಮವಾಗಿ ಮೂರು ಎಸೆತಗಳು ಬಾಕಿ ಇರುವಂತೆ ಪಂದ್ಯವನ್ನು ಕೈ ಚೆಲ್ಲಿತ್ತು. ಉಳಿದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಡ್ರಾಗನ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 150 ರನ್‌ಗಳನ್ನು ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಗುಲ್ಬರ್ಗಾ ಮಿಸ್ಟಿಕ್ಸ್ 19.3 ಓವರ್‌ಗಳಲ್ಲೇ 5 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು.

Gulbarga Mystics win against Mangalore Dragons

ಈವರಗೆ ಆಡಿರುವ ಆರು ಪಂದ್ಯಗಳಲ್ಲಿ ಮೂರಲ್ಲಿ ಗೆಲುವು ಸಾಧಿಸಿರುವ ಗುಲ್ಬರ್ಗಾ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಮಂಗಳೂರು ಆರು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲೇ ಉಳಿದಿದೆ.

ಮಂಗಳೂರು ಇನ್ನಿಂಗ್ಸ್

ಮಂಗಳೂರು ಪರ ಇನ್ನಿಂಗ್ಸ್ ಆರಂಭಿಸಿದ ರೋಹನ್ ಪಾಟೀಲ್ ಮತ್ತು ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ ಉತ್ತಮ ಅಡಿಪಾಯ ಹಾಕಿದರು. ನಿಧನವಾಗಿ ರನ್ ಗಳಿಸುತ್ತಿದ ರೋಹನ್ ಪಾಟೀಲ್ (14) ವಿಕೆಟ್ ಕಳೆದುಕೊಂಡರು. ಬಳಿಕ ನೊರೊನ್ಹಾ (32) ಕೂಡ ಹೆಚ್ಚು ಅಬ್ಬರಿಸಲು ಸಾಧ್ಯವಾಗಲಿಲ್ಲ.

ಮೂರನೇ ಕ್ರಮಾಂಕದಲ್ಲಿ ಆಗಮಿಸಿದ ನಿಕಿನ್ ಜೋಸ್ (9) ರನೌಟ್‌ಗೆ ಬಲಿಯಾದರು. ಈ ವೇಳೆ ಒಂದಾದ ಕೃಷ್ಣಮೂರ್ತಿ ಸಿದ್ಧಾರ್ಥ್ (29) ಮತ್ತು ನಾಯಕ ಶ್ರೇಯಸ್ ಗೋಪಾಲ್ (25) ಚೇತರಿಕೆ ಆಟವಾಡಿ ಔಟಾದರು. ಕೊನೆಯಲ್ಲಿ ಲೋಚನ್ ಗೌಡ (8), ಪ್ರಣವ್ ಭಾಟಿಯಾ (13), ತುಷಾರ್ ಸಿಂಗ್ (9) ಮತ್ತು ಎಂಬಿ ದರ್ಶನ್ (7) ತಂಡದ ಮೊತ್ತವನ್ನು ಹೆಚ್ಚಿಸಲು ನೆರವಾದರು.

ಗುಲ್ಬಾರ್ಗ ಪರ ಅಭಿಷೇಕ್ ಪ್ರಭಾಕರ್, ಪ್ರವೀಣ್ ದುಬೆ, ಪೃಥ್ವಿರಾಜ್ ಶೇಖಾವತ್, ಮೋನಿಶ್ ರೆಡ್ಡಿ, ರಿತೇಶ್ ಭಟ್ಕಳ್ ತಲಾ ಒಂದೊಂದು ವಿಕೆಟ್ ಪಡೆದರು.

ಗುಲ್ಬರ್ಗಾ ಗೆಲುವು

ಮಂಗಳೂರು ನೀಡಿದ ಟಾರ್ಗೆಟ್ ಅನ್ನು ಚೇಸಿಂಗ್ ಮಾಡಿದ ಗುಲ್ಬಾರ್ಗಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ದೇವದತ್ ಪಡಿಕ್ಕಲ್ (2) ಉತ್ತಮ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅನೀಶ್ ಕೆವಿ (16), ಲುವ್ನಿತ್ ಸಿಸೋಡಿಯಾ (26), ವಾಹಿದ್ ಫೈಜಾನ್ ಖಾನ್ (6) ಮತ್ತು ಯಶೋವರ್ಧನ್ ಪರಂತಪ್ (7) ತಂಡಕ್ಕೆ ಆಸರೆಯಾಗಲಿಲ್ಲ.

ಸೋಲಿನ ಸುಳಿಯಲ್ಲಿ ಸಿಲುಕಿದ ಗುಲ್ಬರ್ಗಾ ತಂಡವನ್ನು ಪ್ರವೀಣ್ ದುಬೆ ಮತ್ತು ಸ್ಮರನ್ ಆರ್ ಮೇಲೆತ್ತಿದರು. ಈ ಜೋಡಿ ಸ್ಪೋಟಕ ಪ್ರದರ್ಶನ ನೀಡುವ ಮೂಲಕ ಗೆಲುವು ತಂದು ಕೊಟ್ಟಿತ್ತು. ಪ್ರವೀಣ್ ದುಬೆ ಕೇವಲ 24 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿ ಬಾರಿಸುವ ಮೂಲಕ 47 ರನ್ ಗಳಿಸಿದರು. ಮತ್ತೊಂದೆಡೆ ಸ್ಮರನ್ 30 ಎಸೆತಗಳಲ್ಲಿ 2 ಬೌಂಡರಿ ಹಾಗು 1 ಸಿಕ್ಸರ್‌ನೊಂದಿಗೆ 40 ರನ್ ಪೇರಿಸಿದರು.

Story first published: Saturday, August 24, 2024, 0:40 [IST]
Other articles published on Aug 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+