ಬಲಗೊಳ್ಳಲಿದೆ ನ್ಯೂಜಿಲ್ಯಾಂಡ್, ತಂಡ ಸೇರಿಕೊಳ್ಳಲಿದ್ದಾರೆ ಮಾರ್ಟಿನ್ ಗಪ್ಟಿಲ್!

ವೆಲ್ಲಿಂಗ್ಟನ್, ಫೆಬ್ರವರಿ 9: ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದ ನ್ಯೂಜಿಲ್ಯಾಂಡ್ ಸ್ಫೋಟಕ ಬ್ಯಾಟ್ಸ್ಮನ್ ಮಾರ್ಟಿನ್ ಗಪ್ಟಿಲ್ ಚೇತರಿಸಿಕೊಂಡಿದ್ದಾರೆ. ಅವರು ಮತ್ತೆ ತಂಡವನ್ನು ಸೇರಿಕೊಳ್ಳುವುದರಲ್ಲಿದ್ದಾರೆ. ಗಪ್ಟಿಲ್ ಬೆನ್ನುನೋವಿನ ಸಮಸ್ಯೆಗೀಡಾಗಿದ್ದರು. ಆದರೆ ಭಾರತ-ನ್ಯೂಜಿಲ್ಯಾಂಡ್ 3ನೇ ಟಿ20 ಪಂದ್ಯದಲ್ಲಿ ಗಪ್ಟಿಲ್ ಪಾಲ್ಗೊಳ್ಳುತ್ತಿಲ್ಲ.
ಗಾಯದಿಂದಾಗಿ ಭಾರತ-ನ್ಯೂಜಿಲ್ಯಾಂಡ್ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಗಪ್ಟಿಲ್ ದೂರ ಸರಿಯುವಂತಾಗಿತ್ತು. ಮಾರ್ಟಿನ್ ಈಗ ಗುಣಮುಖರಾಗಿದ್ದಾರಾದರೂ ಭಾರತ-ಕಿವೀಸ್ ನಡುವಿನ 3ನೇ ಮತ್ತು ಕೊನೆಯ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಬದಲಿಗೆ ಮುಂಬರಲಿರುವ ಬಾಂಗ್ಲಾದೇಶ-ನ್ಯೂಜಿಲ್ಯಾಂಡ್ ಏಕದಿನ ಸರಣಿಗೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆದರೆ ಬಾಂಗ್ಲಾ-ಕಿವೀಸ್ ಏಕದಿನ ಸರಣಿಯಿಂದ ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಹೊರ ಬಿದ್ದಿದ್ದಾರೆ. ಶುಕ್ರವಾರ (ಫೆಬ್ರವರಿ 8) ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದ ವೇಳೆ ಹಸನ್ ಕೈ ಬೆರಳಿಗೆ ಗಾಯ ಮಾಡಿಕೊಂಡಿರುವುದು ಇದಕ್ಕೆ ಕಾರಣ. ಫೆಬ್ರವರಿ 13ರಿಂದ ಬಾಂಗ್ಲಾ ಪ್ರವಾಸ ಸರಣಿ ಆರಂಭಗೊಳ್ಳಲಿದೆ.
ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಲಾಕೀ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಕಾಲಿನ್ ಮುನ್ರೋ, ಜಿಮ್ಮಿ ನೀಶಮ್, ಹೆನ್ರಿ ನಿಕೋಲ್ಸ್, ರಾಸ್ ಟೇಲರ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications