ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 427 ರನ್‌ಗಳಿಗೆ ಆಲೌಟಾಗಿದೆ. ಇದಕ್ಕೆ ಉತ್ತರವಾಗಿ ಶ್ರೀಲಂಕಾ ಬ್ಯಾಟಿಂಗ್ ಶುರು ಮಾಡಿದೆ.
ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಯುವ ವೇಗದ ಬೌಲರ್ ಅದ್ಭುತ ಸಾಧನೆ ಮಾಡಿದ್ದಾರೆ. ಈ ವೇಗಿ ಎರಡನೇ ದಿನ ಶತಕ ಗಳಿಸಿ ತಮ್ಮ ಹೆಸರಲ್ಲಿ ಬೃಹತ್ ದಾಖಲೆ ಬರೆದು ಕೊಂಡಿದ್ದಾರೆ. ಇಂಗ್ಲೆಂಡ್‌ನ ವೇಗದ ಬೌಲರ್ ಗಸ್ ಅಟ್ಕಿನ್ಸನ್ 8ನೇ ಕ್ರಮಾಂಕದಲ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ದಿನ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಇಂಗ್ಲೆಂಡ್‌ನ 26 ವರ್ಷದ ವೇಗಿ ಗಸ್ ಅಟ್ಕಿನ್ಸನ್ ಶತಕ ಬಾರಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕವಾಗಿದೆ. ಶತಕ ಪೂರ್ಣಗೊಳಿಸಲು ಅಟ್ಕಿನ್ಸನ್ ಕೇವಲ 103 ಎಸೆತಗಳನ್ನು ತೆಗೆದುಕೊಂಡರು.
ಆದರೆ, ಶತಕ ಪೂರೈಸಿದ ಬಳಿಕ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗದೆ 118 ರನ್ ಹೊಡೆದು ಔಟಾದರು. 115 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವನಿಂದ 118 ರನ್ ಕಲೆ ಹಾಕಿದರು. ಈ ಶತಕದೊಂದಿಗೆ ಅವರು ಲಾರ್ಡ್ಸ್‌ನಲ್ಲಿ ಅದ್ಭುತ ಸಾಧನೆ ಮಾಡಿದ ಇಂಗ್ಲೆಂಡ್‌ನ 5 ಬೌಲರ್‌ಗಳ ಕ್ಲಬ್‌ಗೆ ಸೇರಿಕೊಂಡರು.
ಇದಕ್ಕೂ ಮುನ್ನ ಗ್ಯಾಬಿ ಅಲೆನ್ (ಇಂಗ್ಲೆಂಡ್), ಕೀತ್ ಮಿಲ್ಲರ್ (ಆಸ್ಟ್ರೇಲಿಯಾ), ಇಯಾನ್ ಬೋಥಮ್ (ಇಂಗ್ಲೆಂಡ್), ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) ಮತ್ತು ಕ್ರಿಸ್ ವೋಕ್ಸ್ (ಇಂಗ್ಲೆಂಡ್) ಈ ಸಾಧನೆ ಮಾಡಿದ್ದಾರೆ.
ಪಾಕಿಸ್ತಾನ ವಿರುದ್ಧ ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್)- 169 ರನ್ - 2010
ನ್ಯೂಜಿಲೆಂಡ್ ವಿರುದ್ಧ ಗ್ಯಾಬಿ ಅಲೆನ್ (ಇಂಗ್ಲೆಂಡ್)- 122 ರನ್ - 1931
ಇಂಗ್ಲೆಂಡ್ ವಿರುದ್ಧ ಬರ್ನಾರ್ಡ್ ಜೂಲಿಯನ್ (ವೆಸ್ಟ್ ಇಂಡೀಸ್)- 121 ರನ್ 1973
ಶ್ರೀಲಂಕಾ ವಿರುದ್ಧ ಗಸ್ ಅಟ್ಕಿನ್ಸನ್* (ಇಂಗ್ಲೆಂಡ್)- 118 ರನ್ - 2024
ವೆಸ್ಟ್ ಇಂಡೀಸ್ ವಿರುದ್ಧ ರೇ ಇಲ್ಲಿಂಗ್‌ವರ್ತ್ (ಇಂಗ್ಲೆಂಡ್)- 113 ರನ್ - 1969
ಇಂಗ್ಲೆಂಡ್ ವಿರುದ್ಧ ಅಜಿತ್ ಅಗರ್ಕರ್ (ಭಾರತ)- 109* ರನ್ - 2002