ಗುವಾಹಟಿ: ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಅಬ್ಬರ ನಡೆಸಿದ್ದಾರೆ. ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ವಿಕೆಟ್ ಪಡೆಯಲು ಪರದಾಟ ನಡೆಸಿದ್ದಾರೆ. ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಉತ್ತಮ ಜೊತೆಯಾಟ ನೀಡಿದ ಕಾರಣ ಎರಡನೇ ಟೆಸ್ಟ್ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತವನ್ನು ಕಲೆ ಹಾಕಿದೆ.
ಭಾನುವಾರ ಎರಡನೇ ದಿನದಾಟವನ್ನು ದಕ್ಷಿಣ ಆಫ್ರಿಕಾ 6 ವಿಕೆಟ್‌ಗೆ 247 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರೆಸಿತು. ಈ ವೇಳೆ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳ ಆರ್ಭಟಿಸಿದರು. ಏಳನೇ ವಿಕೆಟ್‌ಗೆ ಕೈಲ್ ವೆರ್ರೆನ್ ಹಾಗೂ ಸೆನುರನ್ ಮುತ್ತುಸಾಮಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲಾವಧಿಯಲ್ಲಿ ಟೀಮ್ ಇಂಡಿಯಾ ಬೌಲರ್ಸ್‌ಗಳನ್ನು ಕಾಡಿತು. ಈ ವೇಳೆ ಈ ಜೋಡಿ 237 ಎಸೆತಗಳಲ್ಲಿ 88 ರನ್ ಸೇರಿಸಿತು. ಕೈಲ್ ವೆರ್ರೆನ್ 45 ರನ್ ಸಿಡಿಸಿ ಔಟ್ ಆದರು.

8ನೇ ವಿಕೆಟ್‌ಗೆ ಸೆನುರನ್ ಮುತ್ತುಸಾಮಿ ಹಾಗೂ ಮಾರ್ಕೊ ಜಾನ್ಸನ್ ಜೋಡಿ ಸಹ ಭಾರತೀಯ ಬೌಲರ್‌ಗಳನ್ನು ಕಾಡಿತು. ಏಕದಿನ ಶೈಲಿಯಲ್ಲಿ ಬ್ಯಾಟ್ ಮಾಡಿದ ಜೋಡಿ ಆರ್ಭಟಿಸಿತು. ಈ ಜೋಡಿ 107 ಎಸೆತಗಳಲ್ಲಿ 97 ರನ್ ಸೇರಿಸಿತು. ಈ ವೇಳೆ ಸೆನುರನ್ ಮುತ್ತುಸಾಮಿ 206 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಾಯದಿಂದ 109 ರನ್ ಬಾರಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸೈಮನ್ ಹಾರ್ಮರ್ (5) ಜವಾಬ್ದಾರಿ ಮರೆತರು.
ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜಾನ್ಸನ್ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ನೈಜ್ಯ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿ ಚೊಚ್ಚಲ ಶತಕದಿಂದ ವಂಚಿತರಾದರು. ಇವರ ಆಟಕ್ಕೆ ಬ್ರೇಕ್ ಹಾಕಲು ಟೀಮ್ ಇಂಡಿಯಾದ ಬೌಲರ್ಸ್‌ಗಳು ವಿಫಲರಾದರು. ಭಾರತದ ಸ್ಪಿನ್ ಹಾಗೂ ವೇಗದ ಬೌಲರ್‌ಗಳ ವಿರುದ್ಧ ರನ್‌ಗಳನ್ನು ಬಾಚಿದರು. ಇವರು ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ಮಾರ್ಕೊ 6 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 93 ರನ್ ಬಾರಿಸಿ ಕುಲ್‌ದೀಪ್ ಯಾದವ್ ಅವರು ತೋಡಿದ ಖೆಡ್ಡಾಗೆ ಬಲಿಯಾದರು. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು 31 ಎಸೆತಗಳನ್ನು ಎದುರಿಸಿ 1 ಬೌಂಡರಿ ನೆರವಿನಿಂದ ಅಜೇಯ 12 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 151.1 ಓವರ್ ಬ್ಯಾಟ್ ಮಾಡಿ 489 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಬೌಲರ್ಸ್‌ಗಳಲ್ಲಿ ಕುಲ್‌ದೀಪ್ ಯಾದವ್ 115 ರನ್ ನೀಡಿ 4 ವಿಕೆಟ್ ಕಬಳಿಸಿದರು. ಉಳಿದಂತೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.