ಸಿಪಿಎಲ್ ಇತಿಹಾಸದಲ್ಲಿ ಕನಿಷ್ಠ ಮೊತ್ತವನ್ನು ರಕ್ಷಿಸಿದ ದಾಖಲೆಗೆ ಪಾತ್ರವಾದ ಗಯಾನ ವಾರಿಯರ್ಸ್

ಈ ಬಾರಿಯ ಸಿಪಿಎಲ್ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್‌ಗಳಿಗಿಂತ ಬೌಲರ್‌ಗಳು ಹೆಚ್ಚಾಗಿ ಮಿಂಚುತ್ತಿದ್ದಾರೆ. ಅದರಲ್ಲೂ ಸ್ಪಿನ್ ಬೌಲಿಂಗ್ ದಾಳಿ ಪರಿಣಾಮಕಾರಿಯಾಗಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುತ್ತಿದೆ. ಸಿಪಿಎಲ್‌ನ 8ನೇ ಪಂದ್ಯವೂ ಕೂಡ ಬೌಲರ್‌ಗಳ ಮೇಲಾಟಕ್ಕೆ ಸಾಕ್ಷಿಯಾಯಿತು. ಮಾತ್ರವಲ್ಲ ಸಿಪಿಎಲ್ ಇತಿಹಾಸದಲ್ಲಿ ಕನಿಷ್ಠ ಮೊತ್ತವನ್ನು ರಕ್ಷಣೆ ಮಾಡಿದ ತಂಡವೆಂಬ ಖ್ಯಾತಿಯನ್ನು ಗಯಾನಾ ವಾರಿಯರ್ಸ್ ಪಡೆದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಗಯಾನಾ ವಾರಿಯರ್ಸ್ ತಂಡ ನಿಗದಿತ 20 ಓವರ್ ಪೂರ್ಣಗೊಳ್ಳಲು ಇನ್ನೂ 5 ಎಸತಗಳು ಬಾಕಿಯಿರುವಂತೆಯೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 118 ರನ್ ಗಳಿಸಲಷ್ಟೇ ಶಕ್ತವಾಯಿತು. ಎದುರಾಳಿ ಜಮೈಕಾ ತಲ್ಲವಾಸ್ ತಂಡದ ಸ್ಪಿನ್ ಅಸ್ತ್ರ ಮಜೀಬ್, ಲ್ಯಾಮಿಚ್ಚನೆ, ಭ್ರಾಥ್‌ವೇಟ್ ಬೌಲಿಂಗ್ ದಾಳಿಗೆ ಗಯಾನಾ ತಂಡದ ಆಟಗಾರರು ನಿರೀಕ್ಷಿತ ಉತ್ತರವನ್ನು ನೀಡಲು ವಿಫಲರಾಗಿದ್ದರು.

ಜಮೈಕಾ ತಂಡದ ಸ್ಥಿತಿ ಮತ್ತಷ್ಟು ಶೋಚನಿಯ
ಗಯಾನ ತಂಡದ ಆಟಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಲು ಬಂದಿಳಿದ ಜಮೈಕಾ ತಂಡದ ಸ್ಥಿತಿ ಮತ್ತಷ್ಟು ಶೋಚನೀಯವೆನಿಸಿತ್ತು. ಗಯಾನಾ ಬೌಲರ್‌ಗಳ ಎಸೆತಗಳಿಗೆ ಪ್ರತ್ಯುತ್ತರವನ್ನು ನೀಡುವುದೇ ಜಮೈಕಾ ದಾಂಡಿಗರಿಗೆ ಸವಾಲೆನಿಸಿತ್ತು. ಒಬ್ಬರ ಹಿಂದೊಬ್ಬರು ವಿಕೆಟ್ ಒಪ್ಪಿಸುತ್ತಾ ಫೆವಿಲಿಯನ್ ಸೇರಿಕೊಳ್ಳತೊಡಗಿದ್ದರು.

ರಸೆಲ್ ಅಬ್ಬರಿಸಿದ್ರೂ ಸೋಲು
ನಾಯಕ ರೋಮನ್ ಪೋವೆಲ್ ಆಸಿಫ್ ಅಲಿ ಜೊತೆಗೆ ಸೇರಿಕೊಂಡು ನಿಧಾನವಾಗಿ ತಂಡವನ್ನು ಮೇಲಕ್ಕೆತ್ತುವ ಪ್ರಯತ್ನವನ್ನು ಮಾಡಿದರಾದರೂ ಉಪಯೋಗವಾಗಲಿಲ್ಲ. ಆದರೆ ಅಂತಿಮವಾಗಿ ಆಂಡ್ರೆ ರಸೆಲ್ ಕಣಕ್ಕಿಳಿದು ಅಬ್ಬರದ ಪ್ರದರ್ಶನವನ್ನು ನೀಡಿದರು. ರಸೆಲ್ 37 ಎಸೆತಗಳಲ್ಲಿ 52 ರನ್ ಗಳಿಸಿದರು. ಹಾಗಿದ್ದರೂ ಜಮೈಕಾಗೆ ಗೆಲುವು ಸಾಧ್ಯವಾಗಲೇ ಇಲ್ಲ.

ಗೆದ್ದ ಗಯಾನ
ನಿಗದಿತ 20 ಓವರ್‌ಗಳನ್ನು ಆಡಿದ ಜಮೈಕಾ ತಂಡ ರಸೆಲ್ ಸ್ಪೋಟಕ ಆಟದ ಹೊರತಾಗಿಯೂ 14 ರನ್‌ಗಳ ಸೋಲನ್ನು ಕಂಡಿತ್ತು. ಗಯಾನಾ ತಂಡದ ಎಲ್ಲಾ ಆರು ಬೌಲರ್‌ಗಳು ಕನಿಷ್ಠ 1 ವಿಕೆಟ್ ಪಡೆಯುವ ಮೂಲಕ ವಿಶೇಷ ಸಾಧನೆಯನ್ನು ಮಾಡಿದರು. ಬೌಲರ್‌ಗಳ ಈ ಸಾಹಸದಿಂದಾಗಿ ಗಯಾನ ತಂಡ ಸಿಪಿಎಲ್ ಇತಿಹಾಸದಲ್ಲಿ ಕನಿಷ್ಠ ಮೊತ್ತವನ್ನು ರಕ್ಷಣೆ ಮಾಡಿದ ತಂಡವೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications