ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಎಂಎಸ್ ಧೋನಿ ಬಗ್ಗೆ ಮಾತನಾಡೋರಿಗೆ ಶೂ ಲೇಸ್ ಕಟ್ಟಲೂ ಬರೋಲ್ಲ'

Half the people commenting on MS Dhoni cant even tie their their shoelaces: Ravi Shastri

ನವದೆಹಲಿ, ಅಕ್ಟೋಬರ್ 26: ಐಸಿಸಿ ಕ್ರಿಕೆಟ್‌ ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ನಿಜಕ್ಕೂ ಕಡೆಗಣಿಸಲ್ಪಟ್ಟಿದ್ದಾರೆ. ಹೀಗಾಗಿ ಧೋನಿ ನಿವೃತ್ತಿ ಬಗ್ಗೆ ಮಾತುಗಳೂ ಕೇಳಿಬರುತ್ತಿವೆ. ಆದರೆ ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ, ದೋನಿ ಟೀಕಾಕಾರರತ್ತ ಚಾಟಿ ಬೀಸಿದ್ದಾರೆ.

ಕಣ್ಸನ್ನೆ ಹುಡುಗೀನೇ ಸರಿಗಟ್ಟೋ ಕ್ರಿಕೆಟ್‌ ಸುಂದರಿ ಪ್ರಿಯಾ ಪೂನಿಯಾ!ಕಣ್ಸನ್ನೆ ಹುಡುಗೀನೇ ಸರಿಗಟ್ಟೋ ಕ್ರಿಕೆಟ್‌ ಸುಂದರಿ ಪ್ರಿಯಾ ಪೂನಿಯಾ!

ಧೋನಿ ನಿವೃತ್ತಿ ಬಗ್ಗೆ ಬಹಳ ಮಾತುಗಳು ಕೇಳಿಬರುತ್ತಿವೆಯಲ್ಲ? ಎಂಬ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿರುವ ರವಿ ಶಾಸ್ತ್ರಿ, 'ಧೋನಿ ಬಗ್ಗೆ ಕಾಮೆಂಟ್ ಮಾಡುತ್ತಿರುವವರಲ್ಲಿ ಅರ್ಧದಷ್ಟು ಮಂದಿಗೆ ಸರಿಯಾಗಿ ಶೂ ಲೇಸ್ ಕೂಡ ಕಟ್ಟಲು ಬರೋಲ್ಲ. ಧೋನಿ ದೇಶಕ್ಕಾಗಿ ಮಾಡಿರುವ ಸಾಧನೆಗಳನ್ನು ನೋಡಿ. ಯಾಕೆ ಜನ ಧೋನಿ ನಿವೃತ್ತಿಯಾಗುವುದನ್ನು ಬಯಸುತ್ತಿದ್ದಾರೋ?,' ಎಂದರು.

ಶ್ರೀಲಂಕಾ ವಿರುದ್ಧದ ಟಿ20ಐನಿಂದ ಆಸೀಸ್ ವೇಗಿ ಆ್ಯಂಡ್ರ್ಯೂ ಟೈ ಹೊರಕ್ಕೆಶ್ರೀಲಂಕಾ ವಿರುದ್ಧದ ಟಿ20ಐನಿಂದ ಆಸೀಸ್ ವೇಗಿ ಆ್ಯಂಡ್ರ್ಯೂ ಟೈ ಹೊರಕ್ಕೆ

'ಆತ (ಧೋನಿ) ಮತ್ತು ಆತನನ್ನು ಬಲ್ಲ ಎಲ್ಲರಿಗೂ ಅವನು ಬೇಗನೆ ದೂರ ಸರಿಯಲಿದ್ದಾನೆ ಎಂಬುದು ಗೊತ್ತಿದೆ. ಅದು ಯಾವಾಗ ನಡೆಯಲಿದೆಯೋ ಆವತ್ತು ಅದನ್ನು ನಡೆಯಲು ಬಿಡೋಣ. ಭಾರತ ತಂಡಕ್ಕೆ 15 ವರ್ಷಗಳ ಕಾಲ ಆಡಿರುವುದರಿಂದ ತಾನು ಏನು ಮಾಡಬೇಕನ್ನೋದು ಅವರಿಗೆ ಗೊತ್ತಿದೆ,' ಎಂದು ಶಾಸ್ತ್ರಿ ಹೇಳಿದ್ದಾರೆ.

'ಟೆಸ್ಟ್‌ ಕ್ರಿಕೆಟ್‌ನಿಂದ ದೋನಿ ನಿವೃತ್ತಿ ಹೊಂದುವಾಗ ಏನು ಹೇಳಿದ್ದರು? ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್‌ಗೆ ಸಾಕಷ್ಟು ಸಮರ್ಥರಿದ್ದಾರೆ ಎಂದು. ಅವರ ಮಾತು ನಿಜವೆ. ಸಹಾ ತಂಡಕ್ಕೆ ಬಂದಾಗ ಇದನ್ನು ಸಾಭೀತುಪಡಿಸಿದ್ದಾರೆ. ಹೀಗೆ ಧೋನಿ ಯಾವಾಗಲೂ ತನ್ನ ಮನಸ್ಸಿನಲ್ಲಿದ್ದ ಉತ್ತಮ ಆಲೋಚನೆಗಳನ್ನು ತಂಡದ ಜೊತೆ ಹಂಚಿಕೊಳ್ಳುತ್ತಿದ್ದವರು ಅನ್ನೋದನ್ನು ನಾವು ಮರೆಯಬಾರದು,' ಎಂದು ಶಾಸ್ತ್ರಿ ವಿವರಿಸಿದರು.

ಬಿಸಿಸಿಐ ಅಧ್ಯಕ್ಷರಾದ ಬೆನ್ನಲ್ಲೇ ಮಹತ್ವದ ಹೆಜ್ಜೆಯನ್ನಿಟ್ಟ ಸೌರವ್ ಗಂಗೂಲಿಬಿಸಿಸಿಐ ಅಧ್ಯಕ್ಷರಾದ ಬೆನ್ನಲ್ಲೇ ಮಹತ್ವದ ಹೆಜ್ಜೆಯನ್ನಿಟ್ಟ ಸೌರವ್ ಗಂಗೂಲಿ

ವಿಶ್ವಕಪ್‌ ಬಳಿಕ ತಾನು ವೆಸ್ಟ್‌ ಇಂಡೀಸ್ ಸರಣಿ ಆಡದೆ ಭಾರತೀಯ ಸೇನೆಗೆ ಸೇವೆ ಸಲ್ಲಿಸುವುದಾಗಿ ತಿಳಿಸಿದ್ದ ಧೋನಿ ಅವರನ್ನು ಆ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ, ಮುಂಬರಲಿರುವ ಬಾಂಗ್ಲಾ ವಿರುದ್ಧದ ಸರಣಿಯಿಂದಲೂ ಹೊರಗಿಡಲಾಗಿದೆ. ಧೋನಿಯ ಕ್ರಿಕೆಟ್ ವೃತ್ತಿ ಬದುಕೇ ಈಗ ಮಂಕಾಗಿರುವುದಂತೂ ನಿಜ.

Story first published: Saturday, October 26, 2019, 12:46 [IST]
Other articles published on Oct 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X