ಭಾರತ vs ಆಸೀಸ್: ಗಾಯ ಗುಣವಾಗುತ್ತಿದೆ, ಹೋರಾಟಕ್ಕೆ ಸಿದ್ಧ-ರೋಹಿತ್

ಸಿಡ್ನಿ: ಗಾಯ ಗುಣವಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ನಾನು ಸಿದ್ಧವಾಗಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಹ್ಯಾಮ್‌ಸ್ಟ್ರಿಂಗ್‌ಗೆ ಒಳಗಾಗಿದ್ದ ರೋಹಿತ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20ಐ ಸರಣಿಯಲ್ಲಿ ಆಡುತ್ತಿಲ್ಲ. ಬರೀ ಟೆಸ್ಟ್ ಸರಣಿಯಲ್ಲಿ ಮಾತ್ರ ಆಡಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ರೋಹಿತ್ ಗಾಯಕ್ಕೀಡಾಗಿದ್ದರು. ಹೀಗಾಗಿ ಒಂದು ಪಂದ್ಯದಲ್ಲಿ ರೋಹಿತ್ ಆಡಿರಲಿಲ್ಲ. ಆದರೆ ಟೂರ್ನಿಯ ಕೊನೇ ಪಂದ್ಯಗಳಲ್ಲಿ ರೋಹಿತ್, ಮುಂಬೈ ಇಂಡಿಯನ್ಸ್ ಪರ ಮೈದಾನಕ್ಕಿಳಿದಿದ್ದರು. ಐಪಿಎಲ್ ವೇಳೆ ರೋಹಿತ್ ಎಡಗಾಲಿನ ಗಾಯಕ್ಕೀಡಾಗಿದ್ದರು.
'ಹ್ಯಾಮ್‌ಸ್ಟ್ರಿಂಗ್ ಈಗ ಗುಣವಾಗಿದೆ. ಫಿಟ್‌ನೆಸ್ ಕಾಯ್ದುಕೊಳ್ಳುವ, ಬಲಿಷ್ಠನಾಗುವತ್ತ ಪ್ರಯತ್ನ ನಡೆಸುತ್ತಿದ್ದೇನೆ. ದೀರ್ಘ ಮಾದರಿಯ ಕ್ರಿಕೆಟ್ ಆಡಲು ಆರಂಭಿಸುವುದಕ್ಕೂ ಮುನ್ನ ನಾನು ಮನಸ್ಸು ಶುಭ್ರ ಮಾಡಿಕೊಳ್ಳಬೇಕು. ಅಲ್ಲಿ ಒಂದೂ ಹುಳುಕು ಉಳಿಯಬಾರದು. ಇದೇ ಕಾರಣಕ್ಕೆ ನಾನು ಎನ್‌ಸಿಎ (ನ್ಯಾಷನಲ್ ಕ್ರಿಕೆಟ್ ಅಕಾಡೆಮಿ)ಯಲ್ಲಿದ್ದೇನೆ,' ಎಂದು ರೋಹಿತ್ ಹೇಳಿದ್ದಾರೆ.
ಸದ್ಯ ಬೆಂಗಳೂರಿನ ಎನ್‌ಸಿಎಯಲ್ಲಿ ಅಭ್ಯಾಸ ನಡೆಸುತ್ತಿರುವ ರೋಹಿತ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ. ಭಾರತ-ಆಸ್ಟ್ರೇಲಿಯಾ ಸರಣಿ 3 ಏಕದಿನ ಪಂದ್ಯಗಳು, 3 ಟಿ20ಐ ಪಂದ್ಯಗಳು, 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ನವೆಂಬರ್ 27ರಿಂದ ಪ್ರವಾಸ ಸರಣಿ ಆರಂಭಗೊಳ್ಳಲಿದ್ದು, ಟೆಸ್ಟ್ ಸರಣಿ ಡಿಸೆಂಬರ್ 17ರಿಂದ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications