For Quick Alerts
ALLOW NOTIFICATIONS  
For Daily Alerts
 

ಭಾರತ 'ಎ' ತಂಡಕ್ಕೆ ಹನುಮ ವಿಹಾರಿ ಸೇರ್ಪಡೆ: ಕಿವೀಸ್ ಸರಣಿಗೆ ಕಡೆಗಣನೆಗೆ ಅಭಿಮಾನಿಗಳಿಂದ ಟೀಕೆ

Hanuma Vihari added to India A squad for tour of South Africa after dropped from New Zealand Test series

ಭಾರತ ಕ್ರಿಕೆಟ್ ತಂಡದ ಆಟಗಾರ ಹನುಮ ವಿಹಾರಿ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಭಾರತ ಎ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಬಿಸಿಸಿಐ ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಎರಡು ದಿನಗಳ ಹಿಂದೆಯಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಎ ತಂಡವನ್ನು ಆಯ್ಕೆ ಮಾಡಲಾಗಿತ್ತು. ಈ ಪ್ರವಾಸದಲ್ಲಿ ಭಾರತ ಮೂರು ಪಂದ್ಯಗಳ ನಾಲ್ಕು ದಿನದ ಟೆಸ್ಟ್ ಸರಣಿಯಲ್ಲಿ ಆಡಲಿದೆ. ನವೆಂಬರ್ 23ರಿಂದ ಬ್ಲೂಮ್‌ಫಂಟೈನ್‌ನಲ್ಲಿ ಈ ಪಂದ್ಯಗಳು ನಡೆಯಲಿದೆ.

ಭಾರತ ಎ ತಂಡವನ್ನು ಪ್ರಿಯಾಂಕ್ ಪಾಂಚಾಲ್ ಮುನ್ನಡೆಸಲಿದ್ದು ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಕೆ ಗೌತಮ್, ಉಮ್ರಾನ್ ಮಲಿಕ್ ಮುಂತಾದವರು ಈ ತಂಡದಲ್ಲಿದ್ದಾರೆ. ಈ ತಂಡಕ್ಕೀಗ ಹನುಮ ವಿಹಾರಿ ಕೂಡ ಸೇರ್ಪಡೆಯಾಗಿದ್ದಾರೆ.

ನ್ಯೂಜಿಲೆಂಡ್ ಸರಣಿಗೆ ಹನುಮ ವಿಹಾರಿ ಕಡೆಗಣನೆ: ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಇಂದು ಭಾರತೀಯ ತಂಡವನ್ನು ಆಯ್ಕೆ ಮಾಡಲಾಗಿದೆ. ಆದರೆ ಈ ತಂಡದಲ್ಲಿ ಹನುಮ ವಿಹಾರಿಯನ್ನು ಕಡೆಗಣಿಸಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ. ಕ್ರಿಕೆಟ್ ವಿಶ್ಲೇಷಕರು ಹಾಗೂ ಅಭಿಮಾನಿಗಳು ಭಾರತೀಯ ಕ್ರಿಕೆಟ್ ತಂಡದ ಆಯ್ಕೆಗಾರರ ಈ ನಡೆಯ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹನುಮ ವಿಹಾರಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಆದರೆ ನಂತರ ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯಲ್ಲಿ ಆಡುವ ಬಳಗದಲ್ಲಿ ವಿಹಾರಿಗೆ ಸ್ಥಾನ ದೊರೆತಿರಲಿಲ್ಲ. ಈಗ ಟೀಮ್ ಇಂಡಿಯಾ ಸ್ಕ್ವಾಡ್‌ನಿಂದಲೇ ಹನುಮ ವಿಹಾರಿಯನ್ನು ಹೊರಗಿಟ್ಟಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಆಡಲು ಸಂಪೂರ್ಣವಾಗಿ ಫಿಟ್ ಆಗಿದ್ದರೂ ಹನುಮ ವಿಹಾರಿ ಭಾರತೀಯ ಟೆಸ್ಟ್ ತಂಡದಿಮದ ಹೊರಗುಳಿಯಲು ಕಾರಣ ಏನು ಎಂಬ ಬಗ್ಗೆ ಸಾಕಷ್ಟು ಪ್ರಶ್ನೆಗಳು ಈಗ ಅಭಿಮಾನಿಗಳಿಂದ ವ್ಯಕ್ತವಾಗುತ್ತಿದೆ. ಕ್ರಿಕೆಟ್ ವಿಶ್ಲೇಷಕ ಹಾಗೂ ಕಾಮೆಂಟೇಟರ್ ಹರ್ಷ ಭೋಗ್ಲೆ ಕೂಡ ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ 'ಎ' ತಂಡ: ಪ್ರಿಯಾಂಕ್ ಪಾಂಚಾಲ್ (ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್, ಸರ್ಫರಾಜ್ ಖಾನ್, ಬಾಬಾ ಅಪರಾಜಿತ್, ಉಪೇಂದ್ರ ಯಾದವ್ (ವಿಕೆಟ್-ಕೀಪರ್), ಕೆ ಗೌತಮ್, ರಾಹುಲ್ ಚಾಹರ್, ಸೌರಭ್ ಕುಮಾರ್, ನವದೀಪ್ ಸೈನಿ , ಉಮ್ರಾನ್ ಮಲಿಕ್, ಇಶಾನ್ ಪೊರೆಲ್, ಅರ್ಜನ್ ನಾಗ್ವಾಸ್ವಾಲ್ಲಾ, ಹನುಮ ವಿಹಾರಿ

ದಕ್ಷಿಣ ಆಫ್ರಿಕಾ ಎ ತಂಡ: ಪೀಟರ್ ಮಲನ್ (ನಾಯಕ), ಸರೆಲ್ ಎರ್ವೀ, ಡೊಮಿನಿಕ್ ಹೆಂಡ್ರಿಕ್ಸ್, ರೇನಾರ್ಡ್ ವ್ಯಾನ್ ಟೋಂಡರ್, ಸಿನೆತೆಂಬಾ ಕ್ವೆಶಿಲೆ, ಸೆನುರಾನ್ ಮುತ್ತುಸಮ್ಮಿ, ಮಾರ್ಕೊ ಜಾನ್ಸೆನ್, ಮಿಗೇಲ್ ಪ್ರಿಟೋರಿಯಸ್, ಬ್ಯೂರಾನ್ ಹೆಂಡ್ರಿಕ್ಸ್, ಲುಥೋ ಸಿಪಾಮ್ಲಾ, ಗ್ಲೆಂಟನ್ ಸ್ಟೌರ್‌ಮನ್, ಜಾನಿ ಜಾರ್ಜ್ ಸ್ಮಿಂಡೆ, ಜಾನಿ ಜಾರ್ಜ್ ಸ್ಮಿಂಡೆ.

Story first published: Saturday, November 13, 2021, 9:49 [IST]
Other articles published on Nov 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+