ಮುಂಬೈ ಇಂಡಿಯನ್ಸ್ ಪಾಲಿಗೆ ಈತನೇ ಭವಿಷ್ಯದ ಪೊಲಾರ್ಡ್ ಎಂದ ಹನುಮ ವಿಹಾರಿ

ಐಪಿಎಲ್‌ನ ಸ್ಟಾರ್ ಆಟಗಾರ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಅಸ್ತ್ರವಾಗಿದ್ದ ಕೀರನ್ ಪೊಲಾರ್ಡ್ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಕೂಡ ವಿದಾಯವನ್ನು ಘೋಷಣೆ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಪೊಲಾರ್ಡ್ ಕಳೆದ ಐಪಿಎಲ್ ಆವೃತ್ತಿಯಲ್ಲಿಯೂ ಕಳಪೆ ಪ್ರದರ್ಶನ ನೀಡಿದ್ದರು. ಈ ಬೆಳವಣಿಗೆಯ ಬಳಿಕ ಐಪಿಎಲ್‌ನಲ್ಲಿಯೂ ಆಟಗಾರನಾಗಿ ತಾನು ಮುಂದುವರಿಯುವುದಿಲ್ಲ ಎಂದು ಪೊಲಾರ್ಡ್ ಅಧಿಕೃತವಾಗಿ ಘೋಷಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರನ ನಿವೃತ್ತಿಗೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿದ್ದು ಮುಂಬೈ ಇಂಡಿಯನ್ಸ್ ಪಾಲಿಗೆ ಇದು ಎಷ್ಟು ಕಠಿಣವಾದ ನಿರ್ಧಾರವಾಗಬಹುದು ಎಂಬ ಚರ್ಚೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಭಾರತದ ಕ್ರಿಕೆಟಿಗ ಹನುಮ ವಿಹಾರಿ ಪ್ರತಿಕ್ರಿಯೆ ನೀಡಿದ್ದು ದಿಗ್ಗಜ ಆಟಗಾರ ಕೀರನ್ ಪೊಲಾರ್ಡ್ ಸ್ಥಾನ ತುಂಬಬಲ್ಲ ಆಟಗಾರನ್ನು ಹುಡುಕುವುದು ಕಠಿಣ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್‌ಗೆ ದೊಡ್ಡ ನಷ್ಟ
"ಮುಂಬೈ ಇಂಡಿಯನ್ಸ್ ಪಾಲಿಗೆ ಇದು ದೊಡ್ಡ ನಷ್ಟವಾಗಿದೆ. ಕೀರನ್ ಪೊಲಾರ್ಡ್ ಅವರಂತಾ ದೈತ್ಯ ಆಟಗಾರನ ಸ್ಥಾನವನ್ನು ತುಂಬುವುದು ಯಾವುದೇ ಆಟಗಾರನಿಗಾದರೂ ಬಹಳ ಕಠಿಣ. ಅದರಲ್ಲೂ ಟಿ20ಯಂತಾ ಮಾದರಿಯಲ್ಲಿ ಆತನಿಗೆ ಸರಿಯಾದ ಬದಲಿ ಆಟಗಾರನನ್ನು ಹುಡುಕುವುದು ಅಸಾಧ್ಯ. ಮುಂಬೈ ಇಂಡಿಯನ್ಸ್ ತಂಡಕ್ಕೆ ಅವರು ನೀಡಿರುವ ಕೊಡುಗೆ ಕೇವಲ ಪಿನಿಷರ್ ಆಗಿ ಮಾತ್ರವಲ್ಲ. ಫೀಲ್ಡರ್ ಆಗಿ ನಾಯಕನಾಗಿಯೂ ಕೊಡುಗೆ ಅಪಾರ. ತಮ್ಮ ವೃತ್ತಿಜೀವನದುದ್ದಕ್ಕೂ ಒಂದೇ ತಂಡದಲ್ಲಿದ್ದುಕೊಂಡು ಐದು ಟ್ರೋಫಿ ಗೆದ್ದಿದ್ದಾರೆ. ಇದು ಮುಂಬೈ ಇಂಡಿಯನ್ಸ್ ಮೇಲೆ ಅವರಿಗಿರುವ ಪ್ರೀತಿಯನ್ನು ತೋರಿಸುತ್ತದೆ. ಇಂಥಾ ಆಟಗಾರನಿಗೆ ಬದಲಿ ಆಟಗಾರನ್ನು ಹುಡುಕುವುದು ಮುಂಬೈ ಇಂಡಿಯನ್ಸ್ ಪಾಲಿಗೆ ಅತ್ಯಂತ ಕಠಿಣವಾಗಿರಲಿದೆ" ಎಂದಿದ್ದಾರೆ ಟೀಮ್ ಇಂಡಿಯಾದ ಆಟಗಾರ ಹನುಮ ವಿಹಾರಿ.

ಪೊಲಾರ್ಡ್ ಸ್ಥಾನ ತುಂಬುವ ಅರ್ಹತೆ ಟಿಮ್ ಡೇವಿಡ್‌ಗೆ ಇದೆ
ಇನ್ನು ಮುಂದುವರಿದು ಮಾತನಾಡಿದ ಹನುಮ ವಿಹಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಓರ್ವ ಆಟಗಾರ ಪೊಲಾರ್ಡ್ ಸ್ಥಾನವನ್ನು ತುಂಬುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದಿದ್ದಾರೆ. ಅದು ಬೇರೆ ಯಾರೂ ಅಲ್ಲ. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡ ಟಿಮ್ ಡೇವಿಡ್. ಆಸ್ಟ್ರೇಲಿಯಾದ ಈ ಆಲ್‌ರೌಂಡರ್ ಆಟಗಾರನ ಮುಂದಿನ ದಿನಗಳಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಮುಂಬೈ ಇಂಡಿಯನ್ಸ್ ಜಾಣತನದ ನಡೆ
"ಕಳೆದ ವರ್ಷ ಮುಂಬೈ ಇಂಡಿಯನ್ಸ್ ಒಂದು ಜಾಣತನದ ನಡೆಯನ್ನು ಇಟ್ಟಿತ್ತು. ಕೀರನ್ ಪೊಲಾರ್ಡ್ ಅವರಿಗೆ ಭವಿಷ್ಯದ ಬದಲಿ ಆಟಗಾರನಾಗಿ ಟಿಮ್ ಡೇವಿಡ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿತ್ತು. ನನ್ನ ಪ್ರಕಾರ ಈ ವರ್ಷ ಟಿಮ್ ಡೇವಿಡ ಮುಂಬೈ ಇಂಡಿಯನ್ಸ್ ತಂಡದ ಪಾಲಿಗೆ ಮುಂದೆ ಬಂದು ಕೀರನ್ ಪೊಲಾರ್ಡ್ ಅವರು ನಿರ್ವಹಿಸುತ್ತಿದ್ದ ಜವಾಬ್ಧಾರಿಯನ್ನು ವಹಿಸಿಕೊಳ್ಳಬಹುದು ಎನಿಸುತ್ತದೆ" ಎಂದಿದ್ದಾರೆ ಹನುಮ ವಿಹಾರಿ. 2021ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಟಿಮ್ ಡೇವಿಡ್ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಅವಕಾಶ ಪಡೆದುಕೊಂಡಿದ್ದರು. ಆದರೆ 2022ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪಾಲಾದ ಅವರು ಕೆಲ ಅದ್ಭುತ ಇನ್ನಿಂಗ್ಸ್‌ಗಳ ಮೂಲಕ ಭರವಸೆ ಮೂಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications