Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹನುಮ ವಿಹಾರಿ ಕೂಡ ಐಪಿಎಲ್‌ನ ಭಾಗವಾಗಬೇಕು: ಚೇತೇಶ್ವರ್ ಪೂಜಾರ

Hanuma Vihari should also be part of the IPL: Cheteshwar Pujara

ಸುದೀರ್ಘ ಕಾಲದ ಬಳಿಕ ಐಪಿಎಲ್‌ಗೆ ಚೇತೇಶ್ವರ್ ಪೂಜಾರ ಮರಳಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಚೆನ್ನೈ ತಂಡದ ಪಾಲಾಗಿರುವ ಚೇತೇಶ್ವರ್ ಪೂಜಾರ ಚುಟುಕು ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಕಷ್ಟು ಬೆವರಿಳಿಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಸಹ ಆಟಗಾರ ಹನುಮ ವಿಹಾರಿ ಕೂಡ ಐಪಿಎಲ್‌ನ ಭಾಗವಾಗಬೇಕು ಎಂದು ಹೇಳಿದ್ದಾರೆ.

ಚೇತೇಶ್ವರ್ ಪೂಜಾರ ಐಪಿಎಲ್‌ನಲ್ಲಿ ಭಾಗವಾಗಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕಳೆದ ಐಪಿಎಲ್ ಹರಾಜಿನಲ್ಲಿ ಭಾರತದ ಟೆಸ್ಟ್ ತಂಡದ ಖಾಯಂ ಸದಸ್ಯ ಹನುಮ ವಿಹಾರಿ ಹರಾಜಾಗದೆ ಉಳಿದುಕೊಂಡಿದ್ದರು.

ಹನುಮ ವಿಹಾರಿ ಇದಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯರಾಗಿದ್ದರು. ಕಳೆದ ಹರಾಜಿನಲ್ಲಿ ಒಂದು ಕೊಟಿ ಮೂಲ ಬೆಲೆ ಹರಾಜು ಪ್ರಕ್ರಿಯೆಯಲ್ಲಿ ಹನುಮವಿಹಾರಿ ಪಾಳ್ಗೊಂಡಿದ್ದರು. ಆದರೆ ಯಾವ ತಂಡ ಕೂಡ ಹರಾಜಿನಲ್ಲಿ ಕೊಳ್ಳುವ ಮನಸ್ಸು ಮಾಡದ ಕಾರಣ ಹರಾಜಾಗದೆ ಹನುಮ ವಿಹಾರಿ ಉಳಿದುಕೊಂಡಿದ್ದಾರೆ.

2019ರಲ್ಲಿ ಹನುಮ ವಿಹಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಬಿಡುಗಡೆಯಾದ ನಂತರ ಮುಣದಿನ ಎರಡು ಆವೃತ್ತಿಗಳಿಂದ ಹನುಮ ವಿಹಾರಿ ಹೊರಗುಳಿದಿದ್ದಾರೆ. ಆದರೆ ಚೇತೇಶ್ವರ್ ಪೂಜಾರ ಏಖು ವರ್ಷಗಳ ನಂತರ ಈ ಬಾರಿ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

"ಈ ಅವಕಾಶವನ್ನು ಕಳೆದುಕೊಂಡ ಏಕೈಕ ಆಟಗಾರ ಹನುಮವಿಹಾರಿ. ಆತನ ಬಗ್ಗೆ ನನಗೆ ಈ ಕಾರಣಕ್ಕೆ ಮರುಕವಿದೆ. ಆತ ಈ ಹಿಂದೆ ಐಪಿಎಲ್‌ನ ಭಾಗವಾಗಿದ್ದರು. ಮುಂದೆಯೂ ಆತ ಐಪಿಎಲ್‌ನ ಭಾಗವಾಗಿರಬೇಕೆಂದು ನಾನು ಭಾವಿಸುತ್ತೇನೆ" ಎಂದು ಪೂಜಾರ ಹೇಳಿದ್ದಾರೆ.

Story first published: Monday, April 5, 2021, 10:47 [IST]
Other articles published on Apr 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+