Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MS Dhoni Birthday: ಎಂಎಸ್‌ ಧೋನಿ ನಿರ್ಮಿಸಿದ ಐದು ಅಳಿಸಲಾಗದ ದಾಖಲೆಗಳು

ಟೀಮ್ ಇಂಡಿಯಾದ ಕೂಲ್‌ ಕ್ಯಾಪ್ಟನ್‌ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅವರು ಇಂದು ತಮ್ಮ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೂಪರ್ ಸ್ಟಾರ್ ಆಟಗಾರನಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ. ಅಲ್ಲದೆ ಮಾಜಿ ಆಟಗಾರರು ಸಹ ವಿಷ್ ಮಾಡಿದ್ದಾರೆ. ಈಗಾಗಲೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈಗ ಅವರು ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೀಮ್ ಇಂಡಿಯಾಕ್ಕೆ ಹಲವು ಪ್ರತಿಷ್ಠಿತ ಟ್ರೋಫಿ ತೊಡಿಸುವಲ್ಲಿ ಇವರ ಪಾತ್ರ ದೊಡ್ಡದು. ಮಾಹಿ ಸಂಕಷ್ಟದಲ್ಲಿದ್ದಾಗ ತಂಡಕ್ಕೆ ತಮ್ಮ ಬ್ಯಾಟಿಂಗ್ ಮೂಲಕ ನೆರವಾಗಿದ್ದ ಪ್ಲೇಯರ್. ಧೋನಿ ಹ್ಯಾಲಿಕ್ಯಾಪ್ಟರ್ ಶಾಟ್‌ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಮಹೇಂದ್ರ ಸಿಂಗ್‌ ಬರ್ತಡೆ ವೇಳೆ ಅವರು ನಿರ್ಮಿಸಿದ ಐದು ವಿಶೇಷ ದಾಖಲೆಗಳ ಪಟ್ಟಿ ಇಲ್ಲಿದೆ. ಈ ದಾಖಲೆಯನ್ನು ಬೇರೆ ಆಟಗಾರರು ಮುರಿಯುವುದು ಕೊಂಚ ಕಷ್ಟ.

Happy 44th Birthday MS Dhoni A Look at Thala s Unbreakable Records

ಧೋನಿ ದೊಡ್ಡ ದಾಖಲೆ

ಕ್ರಿಕೆಟ್‌ ವಲಯದಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ಸ್ವಭಾವದಿಂದಲೇ ಭಾರೀ ಫೇಮಸ್. ಇವರು ಭಾರತಕ್ಕೆ ಏಕದಿನ ವಿಶ್ವಕಪ್‌, ಟಿ20 ವಿಶ್ವಕಪ್, ಚಾಂಪಿಯನ್ಸ್‌ ಟ್ರೋಫಿ ಗೆಲ್ಲಿಸಿದ ನಾಯಕ. ಐಸಿಸಿಯ ಎಲ್ಲ ಟ್ರೋಫಿಗಳನ್ನು ಗೆದ್ದ ನಾಯಕ ಎಂಬ ಶ್ರೇಯ ಇವರ ಪಾಲಾಗಿದೆ. ಈ ದಾಖಲೆಯನ್ನು ಮುರಿಯುವುದು ಯಾವುದೇ ನಾಯಕನಿಗೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ.

ಧೋನಿ ಅವರ ಸ್ಕಿಲ್‌ಗೆ ವಿಶ್ವವೇ ಫಿದಾ ಆಗಿದೆ. ಇವರು ವೇಗವಾಗಿ ಸ್ಟಂಪಿಂಗ್‌ ಮಾಡುವಲ್ಲಿ ಹೆಸರುವಾಸಿ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿ ಸ್ಟಂಪಿಂಗ್‌ನಲ್ಲಿ ದಾಖಲೆ ಹೊಂದಿದ್ದಾರೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 192 ಸ್ಟಂಪಿಂಗ್‌ ಮಡಿದ ಹಿರಿಮೆ ಹೊಂದಿದ್ದಾರೆ. ಇನ್ನು ಟೆಸ್ಟ್‌ನಲ್ಲಿ 38, ಏಕದಿನ ಕ್ರಿಕೆಟ್‌ನಲ್ಲಿ 120, ಟಿ20 ಕ್ರಿಕೆಟ್‌ನಲ್ಲಿ 34 ಸ್ಟಂಪಿಂಗ್‌ ಮಾಡಿದ ಸಾಧನೆ ಮಾಡಿದ್ದಾರೆ.

ಭಾರತದ ಪರ ಮಾಹಿ ಅತಿ ಹೆಚ್ಚು ಪಂದ್ಯಗಳಲ್ಲಿ ನಾಯಕನಾಗಿ ಕಣಕ್ಕೆ ಇಳಿದ ಹಿರಿಮೆ ಹೊಂದಿದ್ದಾರೆ. ಇವರು ಟೆಸ್ಟ್‌ನಲ್ಲಿ 27, ಏಕದಿನ ಕ್ರಿಕೆಟ್‌ನಲ್ಲಿ 110, ಟಿ20 ಕ್ರಿಕೆಟ್‌ನಲ್ಲಿ 41 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಮಾಹಿ ಐಪಿಎಲ್‌ನಲ್ಲಿ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇವರು ಸಿಎಸ್‌ಕೆ ತಂಡಕ್ಕೆ ಐದು ಬಾರಿ ಚಾಂಪಿಯನ್‌ ಪಟ್ಟ ತೊಡಿಸಿದ ಹಿರಿಮೆ ಹೊಂದಿದ್ದಾರೆ.

ವಿಕೆಟ್‌ ಕೀಪರ್ ಬ್ಯಾಟರ್ ಆಗಿ ಮಹೇಂದ್ರ ಸಿಂಗ್ ಧೋನಿ ಅತಿ ಹೆಚ್ಚು ಸ್ಕೊರ್‌ ದಾಖಲಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇವರು 31 ಅಕ್ಟೋಬರ್‌ 2005ರಂದು ಶ್ರೀಲಂಕಾ ವಿರುದ್ದ ಜೈಪುರ್‌ನಲ್ಲಿ ನಡೆದ ಪಂದ್ಯದಲ್ಲಿ 183 ರನ್‌ಗಳ ಇನಿಂಗ್ಸ್‌ ಕಟ್ಟಿದ್ದರು. ಇದಕ್ಕೂ ಮೊದಲು ವಿಕೆಟ್‌ ಕೀಪರ್ ಬ್ಯಾಟರ್ ಆಗಿ ಅತಿ ಹೆಚ್ಚು ರನ್‌ ದಾಖಲಿಸಿದ ಕೀರ್ತಿ ಆಡಂ ಗಿಲ್‌ಕ್ರಿಸ್ಟ್‌ (172 ರನ್) ಅವರದ್ದಾಗಿತ್ತು.

ಮಹೇಂದ್ರ ಸಿಗ್ ಧೋನಿ ನಾಯಕನಾಗಿ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಶತಕ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇವರು 2012ರಲ್ಲಿ ಪಾಕ್‌ ವಿರುದ್ಧ 113 ರನ್‌ ಸಿಡಿಸಿದ್ದರು.

Story first published: Monday, July 7, 2025, 10:13 [IST]
Other articles published on Jul 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+