For Quick Alerts
ALLOW NOTIFICATIONS  
For Daily Alerts
 

Kapil Dev Birthday Special: ಚಲಿಸುವ ರೈಲಿನಲ್ಲೇ ಪ್ರೇಮನಿವೇದನೆ ಮಾಡಿದ್ದ ವಿಶ್ವ ಕಪ್ ವಿಜೇತ ನಾಯಕ

1983 ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ನಾಯಕ ಮತ್ತು ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಕಪಿಲ್ ದೇವ್ ಅವರು ಇಂದು ತಮ್ಮ 65 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಜನವರಿ 6, 1959 ರಂದು ಚಂಡೀಗಢದಲ್ಲಿ ಜನಿಸಿದರು. ಕಪಿಲ್ ದೇವ್ ಅವರನ್ನು ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರು ಟೀಂ ಇಂಡಿಯಾಕ್ಕೆ ಮೊದಲ ಬಾರಿ ವಿಶ್ವಕಪ್‌ ತೊಡಿಸಿದ ನಾಯಕ.

ಭಾರತದಲ್ಲಿ ಇಂದು ಕ್ರಿಕೆಟ್‌ ಇಷ್ಟು ಜನಪ್ರೀಯ ವಾಗಿರುವುದರಲ್ಲಿ ಇವರ ಪಾತ್ರವೂ ಮುಖ್ಯ. ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳುವಂತೆ, ಲಾರ್ಡ್ಸ್‌ ಅಂಗಳದಲ್ಲಿ ಕಪಿಲ್ ದೇವ್ ವಿಶ್ವಕಪ್‌ ಎತ್ತಿ ಹಿಡಿದಾಗ ತಾನು ಅವರಂತೆ ಆಗಲು ಬಯಸಿದ್ದರು ಎಂದು ತಿಳಿಸಿದ್ದಾರೆ. ದೇಶದಲ್ಲಿ ಕ್ರಿಕೆಟ್‌ ಕ್ರಾಂತಿ ಮಾಡಿದವರಲ್ಲಿ ಇವರೂ ಒಬ್ಬರು. ಕ್ರಿಕೆಟ್‌ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿದ ಆಟಗಾರನ ಪ್ರೇಮ ಪ್ರಸಂಗವೂ ರೋಚಕತೆಯಿಂದ ಕೂಡಿದೆ.

Happy Birthday Kapil Dev: The World Cup winning captain who proposed on a moving train

ಕಪಿಲ್‌ ದೇವ್ ಕಪಿಲ್ ದೇವ್ ಬಾಲಿವುಡ್ ನಟಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು. ಆದರೆ ಕಾರಣಾಂತರದಲ್ಲಿ ಈ ಪ್ರೇಮಿಗಳು ಒಂದಾಗಲೇ ಇಲ್ಲ. ಆಗ ಪ್ರತಿ ಪತ್ರಿಕೆಯ ಗಾಸಿಪ್ ಕಾಲಂನಲ್ಲಿ ಕಪಿಲ್ ಸುದ್ದಿ ಇದ್ದೇ ಇರುತ್ತಿತ್ತು. ಈ ಸಂಬಂಧದ ಬಗ್ಗೆ ಯಾರೂ ಬಹಿರಂಗ ಪಡಿಸಲಿಲ್ಲ.

ಕಪಿಲ್ ಅವರ ಸ್ನೇಹಿತ ಸುನಿಲ್ ಭಾಟಿಯಾ ಒಂದು ದಿನ ರೋಮಿ ಭಾಟಿಯಾ ಅವರನ್ನು ಭೇಟಿ ಮಾಡಿಸಿದರು. ಆ ಸಮಯದಲ್ಲಿ ರೋಮಿ ಸೌಂದರ್ಯವನ್ನು ಕಂಡು ಕಪಿಲ್ ದೇವ್ ಬೆರಗಾದರು. ಕಪಿಲ್ ಮೊದಲ ಭೇಟಿಯಲ್ಲಿ ರೋಮಿರನ್ನು ಇಷ್ಟಪಟ್ಟರು. ಆದರೆ ರೋಮಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ವರ್ಷ ತೆಗೆದುಕೊಂಡರು.

Happy Birthday Kapil Dev: The World Cup winning captain who proposed on a moving train

ಕಪಿಲ್ ದೇವ್ ಮತ್ತು ರೋಮಿ ಭಾಟಿಯಾ ಇಬ್ಬರೂ ಒಬ್ಬರಿಗೊಬ್ಬರು ಹತ್ತಿರವಾಗಲು ಪ್ರಾರಂಭಿಸಿದರು. ಆದರೆ ಕಪಿಲ್ ರೋಮಿಗೆ ತಮ್ಮ ಪ್ರೇಮ ನಿವೇದನೆ ತಿಳಿಸಲು ಒಂದು ವರ್ಷ ತೆಗೆದುಕೊಂಡರು. ಕಪಿಲ್ ದೇವ್ ರೋಮಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಪೋಸ್ ಮಾಡಿದರು.

ಕಪಿಲ್ ರೋಮಿಗೆ ಪ್ರಪೋಸ್ ಮಾಡಿದ್ದು ವಿಭಿನ್ನ ಶೈಲಿಯಲ್ಲಿ. ನೀವು ಈ ಸುಂದರವಾದ ಸ್ಥಳದ ಚಿತ್ರವನ್ನು ತೆಗೆಯಲು ಬಯಸುವಿರಾ? ಈ ಚಿತ್ರವನ್ನು ಮುಂದೆ ನಮ್ಮ ಮಕ್ಕಳಿಗೆ ತೋರಿಸುವಿರಾ ಎಂದು ಹೇಳಿ ಪ್ರೇಮ ನಿವೇದನೆ ಮಾಡಿದ್ದರು. ರೋಮಿ ಆರಂಭದಲ್ಲಿ ನಾಚಿಕೆಪಡುತ್ತಿದ್ದರು, ಆದರೆ ನಂತರ ಕಪಿಲ್ ಅವರ ಪ್ರಸ್ತಾಪವನ್ನು ಒಪ್ಪಿಕೊಂಡರು. ಈ ಇಬ್ಬರ 1980ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Happy Birthday Kapil Dev: The World Cup winning captain who proposed on a moving train

ಕಪಿಲ್ ಮತ್ತು ರೋಮಿ ಈಗ ತಮ್ಮ ತಮ್ಮ ವ್ಯವಹಾರಗಳ ಮೇಲೆ ಕೇಂದ್ರೀಕರಿಸಿದ್ದಾರೆ ಮತ್ತು ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. '83' ಚಿತ್ರ ಮತ್ತೊಮ್ಮೆ ಇವರಿಬ್ಬರ ಪ್ರೇಮಕಥೆಯನ್ನು ಎಲ್ಲರ ಮುಂದೆ ತಂದಿದೆ.

ರೋಮಿ ಭಾಟಿಯಾ ಕಪಿಲ್ ದೇವ್ ಅವರ ಪತ್ನಿಯಲ್ಲದೆ, ವೃತ್ತಿಯಲ್ಲಿ ಉದ್ಯಮಿ. ಸ್ವಭಾವತಃ ಅವಳು ತುಂಬಾ ಸ್ನೇಹಪರ ಮತ್ತು ಸಭ್ಯ ಮಹಿಳೆ. ರೋಮಿ ಭಾಟಿಯಾ ಕುಟುಂಬದ ವ್ಯವಹಾರವನ್ನು ನಿರ್ವಹಿಸುತ್ತಾರೆ, ಅವರು ಕಪಿಲ್ ದೇವ್ ಒಡೆತನದ ಹೋಟೆಲ್‌ಗಳನ್ನು ನೋಡಿಕೊಳ್ಳುತ್ತಾರೆ.

ಕಪಿಲ್ 16 ವರ್ಷಗಳ ವೃತ್ತಿಜೀವನದಲ್ಲಿ ಕಪಿಲ್ ದೇವ್ 134 ಟೆಸ್ಟ್ ಪಂದ್ಯಗಳಲ್ಲಿ 434 ವಿಕೆಟ್ ಪಡೆದಿದ್ದಾರೆ. ಇದಲ್ಲದೇ 8 ಶತಕಗಳೊಂದಿಗೆ 5248 ರನ್ ಗಳಿಸಿದ್ದಾರೆ. ಕಪಿಲ್ ಅನ್ನು ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ಆಲ್ ರೌಂಡರ್ ಎಂದು ಪರಿಗಣಿಸಲಾಗಿದೆ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ 1983 ರ ವಿಶ್ವಕಪ್ ಗೆದ್ದಿದೆ.

ಕಪಿಲ್ ದೇವ್ ತಮ್ಮ ಕ್ರಿಕೆಟ್‌ ಜೀವನದಲ್ಲಿ ಹಲವು ದಾಖಲೆಗಳನ್ನು ಹೊಂದಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಎಂದರೆ, ಅವರು ಒಂದೇ ಒಂದು ನೋ ಬಾಲ್‌ ಮಾಡಿಲ್ಲ. ಈ ದಾಖಲೆಯನ್ನು ಮಾಡಿದ ವಿಶ್ವದ ಕೆಲವೇ ಕೆಲವು ಬೌಲರ್‌ಗಳಲ್ಲಿ ಇವರು ಒಬ್ಬರು. ಇನ್ನು ತಮ್ಮ ನಿವೃತ್ತಿಯವರೆಗೂ ಫಿಟ್ನೆಸ್‌ ಕಾಪಾಡಿಕೊಂಡು ಬಂದಿದ್ದರು. ಇವರು ಪದಾರ್ಪಣೆ ಮಾಡಿದ ಟೆಸ್ಟ್‌ನಿಂದ ನಿವೃತ್ತಿಯಾಗುವವರೆಗೆ ಗಾಯದ ಸಮಸ್ಯೆಯಿಂದ ಹೊರಗುಳಿದ ಉದಾಹರಣೆ ಇಲ್ಲ.

Story first published: Friday, January 5, 2024, 7:01 [IST]
Other articles published on Jan 5, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+