ಸಿನಿಮಾ ಪರದೆಯಲ್ಲಿ ಮಿಂಚಲು ಹರ್ಭಜನ್ ರೆಡಿ: ಚಿತ್ರದ ಟೀಸರ್ ಬಿಡುಗಡೆ

ಭಾರತದ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮಿಳು ಸಿನಿಮಾ ಮೂಲಕ ನಟನಾ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವ ಸುದ್ದಿ ಈಗ ಹಳೆಯದು. ಹೊಸ ಸುದ್ದಿ ಏನ್ ಗೊತ್ತಾ, ಹರ್ಭಜನ್ ಸಿಂಗ್ ನಟನೆಯ 'ಫ್ರೆಂಡ್ಶಿಪ್' ಚಿತ್ರದ ಟೀಸರ್ ಇಂದು ಫ್ರೆಂಡ್ಶಿಪ್ ಡೇ ಅಂಗವಾಗಿ(ಜುಲೈ 30) ಬಿಡುಗಡೆಯಾಗಿದೆ.
ಹರ್ಭಜನ್ ಸಿಂಗ್ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿರುವ ಈ ಚಿತ್ರದಲ್ಲಿ ಹರ್ಭಜನ್ ಸಿಂಗ್ ಜೊತೆಗೆ ಮುಖ್ಯಭೂಮಿಕೆಯಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಆ್ಯಕ್ಷನ್ ಹೀರೋ ಅರ್ಜುನ್ ಸರ್ಜಾ ಇದ್ದಾರೆ. ಚಿತ್ರವನ್ನು ಜಾನ್ ಪಾಲ್ ರಾಜ್ ಮತ್ತು ಶ್ಯಾಮ್ ಸೂರ್ಯ ನಿರ್ದೇಶಿಸಿದ್ದಾರೆ.
56 ಸೆಕೆಂಡ್‌ಗಳ ಈ ಟೀಸರ್‌ನಲ್ಲಿ ಹರ್ಭಜನ್ ಸಿಂಗ್ ಹೆಚ್ಚಿನ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಈ ಸಿನಿಮಾ ಹಿಂದಿ ಮತ್ತು ಪಂಜಾಬಿ ಬಾಷೆಗಳಿಗೂ ಡಬ್ಬಿಂಗ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಹರ್ಭಜನ್ ಸಿಂಗ್ ಈ ಹಿಂದೆ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರೆ ನಟನಾಗಿ ಪೂರ್ಣಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದು ಭಜ್ಜಿಯ ನಟನೆ ಹೇಗಿರಲಿದೆ ಎಂದು ನೋಡಲು ಕ್ರಿಕೆಟ್ ಅಭಿಮಾನಿಗಳು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ.
ಟೀಮ್ ಇಂಡಿಯಾದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ಥಾನವನ್ನು ಪಡೆಯಲು ಹರ್ಭಜನ್ ಸಿಂಗ್ ವಿಫಲರಾಗಿದ್ದರಾದರೂ ಐಪಿಎಲ್‌ನಲ್ಲಿ ಚೆನ್ನೈ ತಂಡದಲ್ಲೇ ಕಣಕ್ಕಿಳಿಯುತ್ತಿದ್ದು ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಇಂದು ಬಿಡುಗಡೆಯಾದ ಟಿಸರ್ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications