ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟೆಸ್ಟ್ ಮುಂಬೈನಲ್ಲಿ ಮುಗಿದಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿ ಸೋಲು ಕಂಡಿದೆ. ಪ್ರವಾಸಿ ತಂಡದ ಬೌಲರ್‌ಗಳ ರಣ ತಂತ್ರವನ್ನು ಅರಿಯುವಲ್ಲಿ ವಿಫಲರಾದ ಟೀಮ್ ಇಂಡಿಯಾ ತವರಿನಲ್ಲಿ ಕ್ಲೀನ್ ಸ್ವೀಪ್ ಸೋಲು ಕಂಡಿದೆ. ತವರಿನಲ್ಲಿ ಟೀಮ್ ಇಂಡಿಯಾದ ಕಿವಿ ಹಿಂಡಿದ ಕಿವೀಸ್ ಆರ್ಭಟ ನಡೆಸಿದೆ.
ಈ ಸರಣಿಗೂ ಮುನ್ನ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆ ಮಾಡುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅತಿಯಾದ ಆತ್ಮ ವಿಶ್ವಾಸ ಹಾಗೂ ಮೈದಾನದಲ್ಲಿ ತಾನು ಅಂದುಕೊಂಡಂತೆ ಆಡದೇ ಇರುವುದು ತಂಡಕ್ಕೆ ಮುಳುವಾಗಿದೆ. ಇದಕ್ಕೆ ಟೀಕೆಗಳು ಸಹ ಈಗ ಕೇಳಿ ಬರುತ್ತಿವೆ. ಈಗ ಈ ಅಖಾಡಕ್ಕೆ ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಎಂಟ್ರಿ ನೀಡಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಸೋಲಿಗೆ ಪ್ರಮುಖ ಕಾರಣವನ್ನು ತಿಳಿಸಿದ್ದಾರೆ. ಆಫ್ ಸ್ಪಿನ್ ಬೌಲರ್ ತವರಿನಲ್ಲಿ ಬಳಿಸಲಾದ ಪಿಚ್‌ಗಳ ಬಗ್ಗೆಯೇ ಪ್ರಶ್ನೆ ಎತ್ತಿದ್ದಾರೆ. ಭಾರತದ ಪಿಚ್‌ಗಳು ಸ್ಪಿನ್ ಬೌಲರ್‌ಗಳಿಗೆ ತುಂಬಾ ಅನುಕೂಲಕರವಾಗಿದ್ದವು. ಟೆಸ್ಟ್ ಪಂದ್ಯವು ಕೇವಲ ಎರಡೂವರೆ ಅಥವಾ ಮೂರು ದಿನಗಳಲ್ಲಿ ಕೊನೆಗೊಂಡರೆ ಅದು ಟೆಸ್ಟ್ ಕ್ರಿಕೆಟ್‌ಗೆ ಒಳ್ಳೆಯದಲ್ಲ ಎಂದು ಅವರು ಹೇಳಿದ್ದಾರೆ.
ಹರ್ಭಜನ್ ಸಿಂಗ್ ಎಎನ್‌ಐ ಜೊತೆ ಮಾತನಾಡಿದ್ದು, ಟೆಸ್ಟ್ ಪಂದ್ಯ ಐದು ಪೂರ್ಣ ದಿನಗಳ ಕಾಲ ನಡೆಯಬೇಕು. ಇದರಿಂದ ಎರಡೂ ತಂಡಗಳಿಗೂ ಉತ್ತಮವಾಗಿ ಆಡುವ ಅವಕಾಶ ಸಿಗುತ್ತದೆ. ಈ ರೀತಿಯ ಪಿಚ್ ತಯಾರಿಸಿದರೆ ಅದರಿಂದ ಒಂದು ತಂಡಕ್ಕೆ ಹೆಚ್ಚಿನ ಲಾಭ ಆಗುತ್ತದೆ. ಭಾರತದ ಪಿಚ್‌ಗಳು ಸ್ಪಿನ್ ಬೌಲರ್‌ಗಳಿಗೆ ತುಂಬಾ ಚೆನ್ನಾಗಿದ್ದವು. ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಉತ್ತಮ ಪಿಚ್‌ಗಳನ್ನು ನಿರ್ಮಿಸಿದ್ದರೆ, ನಮ್ಮ ಬ್ಯಾಟರ್‌ಗಳು ಸಹ ಸ್ಥಿರ ಪ್ರದರ್ಶನ ನೀಡುತ್ತಿದ್ದರು ಎಂದು ಹರ್ಭಜನ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಆಸ್ಟ್ರೇಲಿಯ ಪ್ರವಾಸವು ಟೀಂ ಇಂಡಿಯಾಗೆ ಹೆಚ್ಚು ಕಷ್ಟ. ಆದರೆ ಅಲ್ಲಿ ಒಳ್ಳೆಯ ಪಿಚ್‌ಗಳು ನಿರ್ಮಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹರ್ಭಜನ್ ತಿಳಿಸಿದ್ದಾರೆ. ಐದು ಟೆಸ್ಟ್ ಸರಣಿಯನ್ನು ಆಡಲು ಇದೇ ತಿಂಗಳು ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಳ್ಳಲಿದೆ.
ಸ್ಪಿನ್ನರ್‌ಗಳ ವಿರುದ್ಧ ಉತ್ತಮವಾಗಿ ಆಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಇದು ನಮ್ಮ ತಂಡದಿಂದ ಅತ್ಯಂತ ಕಳಪೆ ಪ್ರದರ್ಶನ. ಖಂಡಿತವಾಗಿಯೂ ಸ್ಪಿನ್ ಆಡುವ ಕೌಶಲ್ಯವನ್ನು ಸುಧಾರಿಸಬೇಕಾಗಿದೆ ಎಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಯೋಗಗಳನ್ನು ಯೋಚಿಸಿ ಮಾಡಿದರೆ ಒಳ್ಳೆಯದು ಎಂದು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮಾಹಿತಿ ನೀಡಿದ್ದಾರೆ.