ಹರ್ಭಜನ್ -ಗೀತಾ ಮದುವೆಗೆ ಸಾಕ್ಷಿಯಾದ ಸಚಿನ್
ಚಂದೀಗಢ, ಅ.29: ಪಂಜಾಬಿ ಸಾಂಪ್ರದಾಯಿಕ ಉಡುಗೆ ತೊಡುಗೆಯೊಂದಿಗೆ ಭಾರತದ ಪ್ರಮುಖ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಭವ್ಯ ಸಮಾರಂಭದಲ್ಲಿ ಬಹುಕಾಲದ ಗೆಳತಿ, ನಟಿ ಗೀತಾ ಬಾಸ್ರಾರನ್ನು ಮದುವೆಯಾಗಿದ್ದಾರೆ. ಈ ಶುಭ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದು, ದಂಪತಿಗಳನ್ನು ಹರಿಸಿದರು.
ಬುಧವಾರ ಸಂಜೆ ಉಂಗುರ ವಿನಿಮಯ ಸಂದರ್ಭದಲ್ಲಿ ಕ್ರಿಕೆಟರ್ಸ್ ಸೇರಿದಂತೆ ಸುಮಾರು 500ಕ್ಕೂ ಬಂಧು ಮಿತ್ರರು ಹಾಗೂ ಕುಟುಂಬ ವರ್ಗದ ಸದಸ್ಯರು ಉಪಸ್ಥಿತರಿದ್ದರು. ಹರ್ಭಜನ್ ಹಾಗೂ ಗೀತಾ ಅವರ ವಿವಾಹ ಆರತಕ್ಷತೆ ಐಷಾರಾಮಿ ಹೋಟೆಲ್ ನಲ್ಲಿ ನ.1 ರಂದು ನಡೆಯಲಿದೆ. [ಹರ್ಭಜನ್ ಮದ್ವೆಯಲ್ಲಿ ಗಲಾಟೆ, ಸ್ಸಾರಿ ಕೇಳಿದ ಭಜ್ಜಿ]
ಆರತಕ್ಷತೆ ಕಾರ್ಯಕ್ರಮಕ್ಕೆ ಯುವರಾಜ್ ಸಿಂಗ್ ಹಾಗೂ ವಿರಾಟ್ ಕೊಹ್ಲಿ, ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಶಾರೂಖ್ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾ ಭಾಗವಹಿಸುವ ನಿರೀಕ್ಷೆಯಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನವಜೋಡಿಗೆ ಶುಭ ಹಾರೈಸುವ ಸಾಧ್ಯತೆಯೂ ಇದೆ.
ಗೀತಾ ಹಾಗೂ ಹರ್ಭಜನ್ ಅವರು ಜಲಂಧರ್ ನಿಂದ 20 ಕಿ.ಮೀ ದೂರದಲ್ಲಿರುವ ಫಗ್ವಾರ ರಸ್ತೆಯಲ್ಲಿನ ಹೋಟೆಲ್ ಕ್ಲಬ್ ಕಬಾನಾದಲ್ಲಿ ಇಬ್ಬರು ವಿವಾಹ ಬಂಧನಕ್ಕೊಳಪಟ್ಟಿದ್ದಾರೆ.

ಲೆಹೆಂಗಾದಲ್ಲಿ ಗೀತಾ ಬಾಸ್ರಾ
1984ರಲ್ಲಿ ಇಂಗ್ಲೆಂಡ್‌ನಲ್ಲಿ ಜನಿಸಿರುವ ಗೀತಾ ಬಾಸ್ರಾ 2006ರಲ್ಲಿ ದಿಲ್ ದಿಯಾ ಹೈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಬಾಲಿವುಡ್‌ಗೆ ಪ್ರವೇಶಿಸಿದ್ದರು. ಬಹುಕಾಲದ ಗೆಳೆತನ, ಪ್ರೇಮಪರ್ವದ ನಂತರ ಹರ್ಭಜನ್-ಗೀತಾ ಇದೀಗ ಪಂಜಾಬಿ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ವಸ್ತ್ರವಿನ್ಯಾಸ ಅರ್ಚನಾ ಕೋಚಾರ್.

ಶೇರ್ವಾನಿಯಲ್ಲಿ ಹರ್ಭಜನ್ ಸಿಂಗ್
ಬಿಳಿ ಬಣ್ಣದ ಶೇರ್ವಾನಿ ಹಾಗೂ ಕೆಂಪು ಬಣ್ಣದ ಪೇಟಧಾರಿ ಹರ್ಭಜನ್ ಸಿಂಗ್

ಆರತಕ್ಷತೆ ಕಾರ್ಯಕ್ರಮಕ್ಕೆ ಗಣ್ಯರು
ಆರತಕ್ಷತೆ ಕಾರ್ಯಕ್ರಮಕ್ಕೆ ಯುವರಾಜ್ ಸಿಂಗ್ ಹಾಗೂ ವಿರಾಟ್ ಕೊಹ್ಲಿ, ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಶಾರೂಖ್ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾ ಭಾಗವಹಿಸುವ ನಿರೀಕ್ಷೆಯಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನವಜೋಡಿಗೆ ಶುಭ ಹಾರೈಸುವ ಸಾಧ್ಯತೆಯೂ ಇದೆ.

ಆಕರ್ಷಕ ವಿನ್ಯಾಸದ ವಸ್ತ್ರ ವಿನ್ಯಾದ ದಿರಿಸು
ರಾಘವೇಂದ್ರ ರಾಥೋಡ್ ಹಾಗೂ ಅರ್ಚನಾ ಕೋಚಾರ್ ಅವರು ವಸ್ತ್ರ ವಿನ್ಯಾಸ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಕುಟುಂಬ ಹಾಗೂ ಯುವರಾಜ್ ಸಿಂಗ್ ಅವರ ಕುಟುಂಬ ಹೆಚ್ಚಿನ ಆಕರ್ಷಣೆ ಪಡೆದುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications