ಸಂಗೀತ್ ಪ್ರೋಗ್ರಾಂಗೆ ಸೈಕಲೇರಿ ಬಂದ ಗೀತಾ -ಹರ್ಭಜನ್
ಚಂದೀಗಢ, ಅ.28: ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಬಾಲಿವುಡ್ ನಟಿ ಗೀತಾ ಬಾಸ್ರಾ ಅವರ ಮದುವೆ ಮೆಹಂದಿ ಸಂಭ್ರಮದ ನಂತರ ಸಂಗೀತ್ ಸಮಾರಂಭ ಭರ್ಜರಿಯಾಗಿ ನೆರವೇರಿದೆ. ವಧು-ವರರು ಹೂಗಳಿಂದ ಅಲಂಕಾರಗೊಂಡಿದ್ದ ಸೈಕಲ್ ಏರಿ ಸಮಾರಂಭಕ್ಕೆ ಬಂದಿದ್ದರು.
ಐದು ದಿನಗಳ ಕಾಲ ಸಾಂಪ್ರದಾಯಿಕ ಪಂಜಾಬಿ ಶೈಲಿ ಮದುವೆ ನಡೆಯಲಿದ್ದು, ಹರ್ಭಜನ್ ಸಿಂಗ್ ಅವರ ಆಪ್ತ ಮಿತ್ರರು ಸೇರಿದಂತೆ ಹಲವಾರು ಗಣ್ಯರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಮದುವೆಯ ಮೆಹಂದಿ ಕಾರ್ಯಕ್ರಮಕ್ಕೂ ಜೀನ್ಸ್ ಹಾಗೂ ಟೀಶರ್ಟ್ ಹಾಕಿಕೊಂಡು ಬಂದಿದ್ದ ಹರ್ಭಜನ್ ಸಿಂಗ್ ನಂತರ ಅಪ್ಪಟ ಪಂಜಾಬಿ ಯುವಕನಂತೆ ಡ್ರೆಸ್ ಧರಿಸಿ ಕಂಗೊಳಿಸುತ್ತಿದ್ದರು.[ಹರ್ಭಜನ್ ಸಿಂಗ್- ಗೀತಾ ಮೆಹಂದಿ ಸಂಭ್ರಮ]
ಅಕ್ಟೋಬರ್ 29ರಂದು ಜಲಂಧರ್ ನಿಂದ 20 ಕಿಲೋಮೀಟರ್ ದೂರದಲ್ಲಿರುವ ಹೋಟೆಲೊಂದರಲ್ಲಿ ಭಜ್ಜಿ ಮದುವೆ ನಡೆಯಲಿದೆ. ಅನೇಕ ಹಾಲಿ, ಮಾಜಿ ಕ್ರಿಕೆಟರ್ಸ್, ಉದ್ಯಮಿಗಳು, ಸಿನಿಮಾ ರಂಗದ ತಾರೆಯರು ಈ ಮದುವೆಗೆ ಆಗಮಿಸುತ್ತಿದ್ದಾರೆ. ಮದುವೆ ಆರತಕ್ಷತೆ ನವದೆಹಲಿಯಲ್ಲಿ ನಡೆಯಲಿದೆ.
ಅಕ್ಟೋಬರ್ 27ರಿಂದ ನವೆಂಬರ್ 1 ರ ತನಕ ನಡೆಯುವ ಸಮಾರಂಭದಲ್ಲಿ ಸೋಮವಾರದಂದು ಕ್ರಿಕೆಟರ್ ಯುವರಾಜ್ ಸಿಂಗ್, ಗಾಯಕ ಮಿಕಾ ಸಿಂಗ್ ಸೇರಿದಂತೆ ದೇಶದ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಸಂಗೀತ್ ಕಾರ್ಯಕ್ರಮದ ಕೆಲ ಚಿತ್ರಗಳು ಇಲ್ಲಿವೆ...

ವಿವಾಹ ಮಹೋತ್ಸವದಲ್ಲಿ ಗೀತಾ ಹಾಗೂ ಭಜ್ಜಿ
ಸಂಗೀತ್ ಸಮಾರಂಭಕ್ಕೆ ಸೈಕಲ್ ಏರಿ ಬಂದ ಗೀತಾ -ಹರ್ಭಜನ್ ಸಿಂಗ್

ಆಕರ್ಷಕ ವಿನ್ಯಾಸದ ವಸ್ತ್ರ ವಿನ್ಯಾದ ದಿರಿಸು
ರಾಘವೇಂದ್ರ ರಾಥೋಡ್ ಹಾಗೂ ಅರ್ಚನಾ ಕೋಚಾರ್ ಅವರು ವಸ್ತ್ರ ವಿನ್ಯಾಸ ಮಾಡಿರುವ ವಸ್ತ್ರ ಧರಿಸಿರುವ ವಧು ವರ.

ಸಂಗೀತ್ ಕಾರ್ಯಕ್ರಮದಲ್ಲಿ ಬಿಸಿಸಿಐ ಪ್ರತಿನಿಧಿಗಳು
ಸಂಗೀತ್ ಕಾರ್ಯಕ್ರಮದಲ್ಲಿ ಬಿಸಿಸಿಐ ಪ್ರತಿನಿಧಿಗಳಾದ ಮಾಧ್ಯಮ ವ್ಯವಸ್ಥಾಪಕ ನಿಶಾಂತ್ ಅರೋರಾ ಹಾಗೂ ಪಂಜಾಬ್ ಕ್ರಿಕೆಟ್ ಆಟಗಾರ ಗುರ್ ಕೀರತ್ ಮಾನ್ ಸಿಂಗ್

ಮಕ್ಕಳು ಹಾಗೂ ಕುಟುಂಬಸ್ಥರ ಜೊತೆ ಭಜ್ಜಿ
ಮಕ್ಕಳು ಹಾಗೂ ಕುಟುಂಬಸ್ಥರ ಜೊತೆ ಭಜ್ಜಿ, ಖುಷಿಯಿಂದ ಫೋಟೋಗಳಿಗೆ ಪೋಸ್ ಕೊಡುತ್ತಿದ್ದರು.

ಸಂಗೀತ್ ಪ್ರೋಗ್ರಾಂಗೆ ಆಕರ್ಷಕ ಸೈಕಲ್
ಸಂಗೀತ್ ಪ್ರೋಗ್ರಾಂಗೆ ತಯಾರಿಸಲಾದ ಆಕರ್ಷಕ ಸೈಕಲ್ ಜೊತೆ ಹರ್ಭಜನ್ ಸಿಂಗ್ ಮತ್ತೊಂದು ಭಂಗಿಯಲ್ಲಿ ಪೋಸ್.

ಹಾಡು, ನೃತ್ಯ ಎಲ್ಲೆಡೆ ಖುಷಿಯ ವಾತಾವರಣ
ಪಂಜಾಬಿ ಗಾಯಕರಾದ ಗುರ್ ದಾಸ್ ಮಾನ್ ಹಾಗೂ ಮಿಕಾ ಸಿಂಗ್ ಅವರ ಗಾಯನಕ್ಕೆ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಆರ್ ಪಿ ಸಿಂಗ್ ಸೇರಿದಂತೆ ಹಲವಾರು ಮಂದಿ ಹೆಜ್ಜೆ ಹಾಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications