ಹರ್ಭಜನ್-ಗೀತಾರನ್ನು ಹರಸಿದ ಮೋದಿ, ಧೋನಿ
ನವದೆಹಲಿ, ನ. 02: ಕ್ರಿಕೆಟರ್ ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ ಅವರ ಮದುವೆ ಆರತಕ್ಷತೆ ಸಮಾರಂಭ ಅದ್ದೂರಿಯಾಗಿ ನೆರವೇರಿದೆ.ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಗಣ್ಯಾತಿಗಣ್ಯರು ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಕ್ರಿಕೆಟ್, ಬಾಲಿವುಡ್ ಹಾಗೂ ರಾಜಕೀಯ ಹೀಗೆ ಹಲವಾರು ಕ್ಷೇತ್ರದ ಗಣ್ಯರು, ಸಮಾರಂಭಕ್ಕೆ ಆಗಮಿಸಿದ್ದರು. 9 ವರ್ಷಕ್ಕೂ ಅಧಿಕ ಗೆಳೆತನವನ್ನು ಮದುವೆ ಬಂಧನದಲ್ಲಿ ಸುಖಾಂತ್ಯಗೊಳಿಸಿಕೊಂಡ ಹರ್ಭಜನ್ ಹಾಗೂ ಗೀತಾ ಅವರು ಅಕ್ಟೋಬರ್ 29ರಂದು ಜಲಂಧರ್ ಬಳಿಯ ಸ್ವಗ್ರಾಮದಲ್ಲಿ ಪಂಜಾಬಿ ಶೈಲಿಯಲ್ಲಿ ಮದುವೆಯಾಗಿದ್ದರು. [ಹರ್ಭಜನ್ ಮದ್ವೆಯಲ್ಲಿ ಗಲಾಟೆ, ಸ್ಸಾರಿ ಕೇಳಿದ ಭಜ್ಜಿ]
ದೆಹಲಿಯ ಪಂಚತಾರ ಹೋಟೆಲ್ ನಲ್ಲಿ ನಡೆದ ಆರತಕ್ಷತೆ ಸಮಾರಂಭಕ್ಕೆ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ, ಯುವರಾಜ್ ಸಿಂಗ್, ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಭಾವಿ ಪತ್ನಿ ರಿತಿಕಾ ವಧು-ವರರೊಂದಿಗೆ ಸೆಲ್ಪಿ ತೆಗೆಸಿಕೊಂಡರು.
ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್, ಚಿತ್ರರಂಗದಿಂದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ವಿವಿಐಪಿಗಳು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಿ ಮೋದಿ ಅವರ ಜೊತೆ ನವದಂಪತಿ
ಪ್ರಧಾನಿ ಮೋದಿ ಅವರ ಜೊತೆ ನವದಂಪತಿಗಳಾದ ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ. ಹರ್ಭಜನ್ ಸಿಂಗ್ ಅವರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಖುದ್ದು ಮೋದಿ ಆವರಿಗೆ ನೀಡಿ ಆಹ್ವಾನಿಸಿದ್ದರು.

ಕ್ರೀಡಾಲೋಕದ ಗಣ್ಯರ ಜೊತೆ ಫೋಟೋ
ಕ್ರಿಕೆಟ್ ಅಲ್ಲದೆ, ಹಾಕಿ ಮುಂತಾದ ಕ್ರೀಡಾಲೋಕದ ಗಣ್ಯರು ಮದುವೆಗೆ ಆಗಮಿಸಿದ್ದರು.

ಮಾಜಿ ಪ್ರಧಾನಿ ಎಂಎಂ ಸಿಂಗ್ ಜೊತೆ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕುಟುಂಬದವರ ಜೊತೆ ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ.
ಗ್ರೂಪ್ ಫೋಟೋಗಳ ಕೊಲಾಜ್
ಹರ್ಭಜನ್ ಮದುವೆ ಆರತಕ್ಷತೆ ಗ್ರೂಪ್ ಫೋಟೋಗಳ ಕೊಲಾಜ್ ಪಂಜಾಬಿ ಗಾಯಕ ಸರ್ತಾಜ್ ರಿಂದ ಟ್ವೀಟ್.

ಧೋನಿ ಅಂಡ್ ಗ್ಯಾಂಗ್ ಜೊತೆ ಫೋಟೊ
ನಾಯಕ ಎಂಎಸ್ ಧೋನಿ ಅಂಡ್ ಗ್ಯಾಂಗ್ ಜೊತೆ ಫೋಟೊ.

ಮದುವೆ ಮನೆಯಲ್ಲಿ ವಿರಾಟ್ ಕೊಹ್ಲಿ
ಹರ್ಭಜನ್ ಸಿಂಗ್ ಮದುವೆ ಆರತಕ್ಷತೆಯಲ್ಲಿ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ.

ಕಪಿಲ್ ಜೊತೆ ಮುರಳಿ ವಿಜಯ್
ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಜೊತೆ ಆರಂಭಿಕ ಆಟಗಾರ ಮುರಳಿ ವಿಜಯ್ ಪೋಸ್.

ಭಜ್ಜಿ -ಗೀತಾ ಜೊತೆ ಅನುರಾಗ್ ಠಾಕೂರ್
ಹರ್ಭಜನ್ -ಗೀತಾ ಜೊತೆ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ದಂಪತಿ.
ವಿರಾಟ್ ಕೊಹ್ಲಿ ಹಾಗೂ ಹರ್ಭಜನ್ ಸೆಲ್ಫಿ ಟೈಂ
ವಿರಾಟ್ ಕೊಹ್ಲಿ ಹಾಗೂ ಹರ್ಭಜನ್ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications