ಹರ್ಭಜನ್ ಬಳಿ ನಿವೃತ್ತಿ ಬಗ್ಗೆ ಮಾತನಾಡ್ಬೇಡಿ ಹುಷಾರ್!
ಬೆಂಗಳೂರು, ನವೆಂಬರ್ 23: ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತೆ ಗರಂ ಆಗಿದ್ದಾರೆ. ಈ ಬಾರಿ ವ್ಯಕ್ತಿಯೊಬ್ಬನಿಗೆ ಟ್ವಿಟ್ಟರ್ ನಲ್ಲಿ ಹಳೆ ನಾಯಿ ರೀತಿ ಬೊಗಳಬೇಡಿ ಎಂದಿದ್ದಾರೆ.
ಟ್ವಿಟ್ಟರ್ನಲ್ಲಿ ವ್ಯಕ್ತಿಯೊಬ್ಬ(ನಿಯೋಲ್ ಸ್ಮಿತ್) ಅವರು ಟ್ವೀಟ್ ಮಾಡಿದ್ದು, ನೀವು ಸಂತೋಷದಿಂದ ನಿವೃತ್ತಿಯನ್ನು ತೆಗೆದುಕೊಳ್ಳಿ, ಯಾಕೆಂದರೆ ಹಳೆಯ ನಾಯಿ ಹೊಸ ತಂತ್ರಗಳನ್ನು ಕಲಿಸಲು ಸಾಧ್ಯವಿಲ್ಲ. ನಿಮ್ಮ ಕಾಲ ಮುಗಿದಿದೆ ಎಂದು ಭಜ್ಜಿಯನ್ನು ಕೆರಳಿಸುವ ರೀತಿಯಲ್ಲಿ ಭಾಷೆ ಬಳಸಿದ್ದರು. ಇದಕ್ಕೆ ಹರ್ಭಜನ್ ಸಿಂಗ್ ಕೂಡಾ ಖಾರವಾಗಿ ಪ್ರತಿಕ್ರಿಯಿಸಿದ್ದರು.
ನಿನ್ನ ರೀತಿಯ ಹಳೆಯ ನಾಯಿಗೆ ಕೇವಲ ಬೊಗಳುವುದು ಮಾತ್ರ ಗೊತ್ತು. ಅದನ್ನೆ ಮುಂದುವರೆಸು, ನಿನ್ನ ಜೀವನ ಪೂರ್ತಿ ನೀ ಕಲಿತಿದ್ದು ಇದನ್ನೆ ಅಂತಾ ನಾನು ತಿಳಿದುಕೊಂಡಿದ್ದೇನೆ. ಪ್ರತಿದಿನ ಕಲಿಯುವುದಕ್ಕೆ ಹೊಸ ವಿಷಯ ಇದ್ದೇ ಇದೆ. ಆದರೆ, ನಿನ್ನ ರೀತಿ ಯಾರಿಗೂ ಮಾರ್ಗದರ್ಶನ ಮಾಡಬೇಡ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಚರ್ಚೆ ಇನ್ನೂ ಜಾರಿಯಲ್ಲಿದೆ.

ಕ್ರಿಕೆಟ್ ದಿಗ್ಗಜ ಎನಿಸಿಕೊಂಡಿರುವ ಹರ್ಭಜನ್
ಹರ್ಭಜನ್ ಸಿಂಗ್ ಅವರು ಭಾರತದ ಪ್ರಮುಖ ಸ್ಪಿನ್ನರ್ ಆಗಿದ್ದು, ಸದ್ಯ ಪಂಜಾಬ್ ಪರ ರಣಜಿಯಲ್ಲಿ ಆಡುತ್ತಿದ್ದಾರೆ. ಭಾರತದ ಪರ 103 ಟೆಸ್ಟ್ ಪಂದ್ಯಗಳನ್ನಾಡಿ 417 ವಿಕೆಟ್ ಕಬಳಿಸಿದ್ದಾರೆ. 269 ಏಕದಿನ ಪಂದ್ಯಗಳಲ್ಲಿ 236 ವಿಕೆಟ್ ಉರುಳಿಸಿದ್ದಾರೆ.
ಹರ್ಭಜನ್ ಕೆರಳಿಸಿದ ಟ್ವೀಟ್
ನೆಮ್ಮದಿಯಿಂದ ನಿವೃತ್ತರಾಗಿ, ನಿಮಗಿಂತ ಮುಂಚೆ ನಿವೃತ್ತರಾದವರು ಕಷ್ಟಪಟ್ಟಂತೆ ನೀವು ಪಡಬೇಡಿ, ನಿಮ್ಮ ಕಾಲ ಮುಗಿದಿದೆ ಎಂದು ಟ್ವೀಟ್ ಮಾಡಲಾಗಿದೆ.
ಹರ್ಭಜನ್ ಸಿಂಗ್ ಕೊಟ್ಟ ಉತ್ತರ
ನಿನ್ನ ರೀತಿಯ ಹಳೆಯ ನಾಯಿಗೆ ಕೇವಲ ಬೊಗಳುವುದು ಮಾತ್ರ ಗೊತ್ತು. ಅದನ್ನೆ ಮುಂದುವರೆಸು, ನಿನ್ನ ಜೀವನ ಪೂರ್ತಿ ನೀ ಕಲಿತಿದ್ದು ಇದನ್ನೆ ಅಂತಾ ನಾನು ತಿಳಿದುಕೊಂಡಿದ್ದೇನೆ. ಪ್ರತಿದಿನ ಕಲಿಯುವುದಕ್ಕೆ ಹೊಸ ವಿಷಯ ಇದ್ದೇ ಇದೆ ಎಂದು ಉತ್ತರಿಸಿದ ಹರ್ಭಜನ್ ಸಿಂಗ್.
ಎಂಎಸ್ ಧೋನಿ ಬಗ್ಗೆ ಕೂಡಾ ಚರ್ಚೆ
ಭಾರತ ತಂಡದಲ್ಲಿ ಈಗ ಇರುವ ಹಿರಿಯ ಆಟಗಾರ ಎಂಎಸ್ ಧೋನಿ ಬಗ್ಗೆ ಕೂಡಾ ಚರ್ಚೆ ನಡೆದಿದೆ. ಹರ್ಭಜನ್ ಗೆ ಸಲಹೆ ನೀಡಿದ ವ್ಯಕ್ತಿಯನ್ನು ಅನೇಕರು ನಿಂದಿಸಿದ್ದಾರೆ.
ಹರ್ಭಜನ್ ಬಗ್ಗೆ ಮೆಚ್ಚುಗೆಯ ಮಾತು
ಹರ್ಭಜನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಅಭಿಮಾನಿಗಳು, ಹಾಲಿ ಸ್ಪಿನ್ನರ್ ಗಳಿಗೆ ಹೋಲಿಸಿದರೆ ಹರ್ಭಜನ್ ಅವರು ಯಾವುದೇ ಪಿಚ್ ಮೇಲೂ ಚೆಂಡನ್ನು ಬೇಕಾದ ರೀತಿಯಲ್ಲಿ ಟರ್ನ್ ಮಾಡಬಲ್ಲರು ಹಾಗೂ ಯಶಸ್ಸು ಗಳಿಸಬಲ್ಲರು ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications