ಭಾರತ ತಂಡದ ಸ್ಟಾರ್ ಬೌಲರ್ ಹರ್ಭಜನ್ ಸಿಂಗ್ ಅವರಿಗೆ ಶ್ರೀಶಾಂತ್ ಮಗಳು ಹೇಳಿದ ಆ ಒಂದು ಮಾತು ಬಹುವಾಗಿ ಕಾಡುತ್ತಿದೆ. ಈ ಮಾತಿನ ಬಗ್ಗೆ ಭಜ್ಜಿ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ. ಭಜ್ಜಿ ಅವರಿಗೆ ನಿಮ್ಮ ಜೀವನದಲ್ಲಿ ತೆಗೆದುಹಾಕಲು ಬಯಸುವ ಯಾವುದಾದರು ಘಟನೆ ಇದೆಯಾ ಎಂದು ಕೇಳಿದಾಗ ಈ ಬಗ್ಗೆ ಸ್ಪಿನ್ ಮಾಂತ್ರಿಕ ಪ್ರಸ್ತಾಪಿಸಿದ್ದಾರೆ.
ಹೌದು ನನ್ನ ಜೀವನದಲ್ಲಿ ನಾನು ಬದಲಿಸುವ ಒಂದು ಘಟನೆ ಇದೆ. ಅದುವೇ ಶ್ರೀಶಾಂತ್ ಜೊತೆಗಿನ ಘಟನೆ ಎಂದು ಹಳೆಯ ನೆನಪಿನ ಬುತ್ತಿಯನ್ನು ಓಪನ್ ಮಾಡಿದರು. ಆ ಜೀವನವನ್ನು ನಾನು ನನ್ನ ಜೀವನದಿಂದ ತೆಗೆದುಹಾಕಲಿ ಬಯಸುತ್ತಿರುವೆ ಎಂದು ಹೇಳಿದ್ದಾರೆ. ಶ್ರೀಶಾಂತ್ ಅವರಿಗೆ ಕಪಾಳ ಮೋಕ್ಷ ಮಾಡಿದ ಘಟನೆಯ ಬಗ್ಗೆ ಭಜ್ಜಿ ಮನಸ್ಸಿನಲ್ಲಿ ಈಗಲೂ ಅಳುಕಿದೆ. ಆ ಒಂದು ಘಟನೆ ನನಗೆ ಬಹಳ ಕುಗ್ಗಿಸಿದೆ. ನಾನು ಮಾಡಿದ ಆ ಒಂದು ತಪ್ಪನ್ನು ನಾನು ಮಾಡಬಾರದಿತ್ತು ಎಂದು ಭಜ್ಜಿ ಹೇಳಿದ್ದಾರೆ. ಅಲ್ಲದೆ ಶ್ರೀಶಾಂತ್ ಅವರಲ್ಲಿ ತಾನು 200ಕ್ಕೂ ಹೆಚ್ಚು ಬಾರಿ ಕ್ಷಮೆ ಕೇಳಿದ್ದಾಗಿ ತಿಳಿಸಿದ್ದಾರೆ.

ನಾನು ಮಾಡಿದ ತಪ್ಪಿಗೆ ನಾನು ಪಶ್ಚಾತಪ ಪಟ್ಟಿದ್ದೇನೆ. ನಾವೇಲ್ಲರೂ ತಪ್ಪುಗಳನ್ನು ಮಾಡುತ್ತೇವೆ ಮತ್ತು ಅಂತಹ ತಪ್ಪುಗಳನ್ನು ಪುನರಾವರ್ತಿಸಬಾರದು ಎಂದು ನಾವು ಭಾವಿಸುತ್ತೇವೆ ಮತ್ತು ಎಂದಿಗೂ ಪ್ರಯತ್ನಿಸುವುದಿಲ್ಲ. ಅವರು ನನ್ನ ಜೊತೆ ಹಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಂಡದ ಪರ ಆಡಿದ್ದಾರೆ. ಆದರೆ ಐಪಿಎಲ್‌ನಲ್ಲಿ ಆಡುವಾಗ ನಾವು ಪ್ರತಿಸ್ಪರ್ಧಿಗಳು. ನಾವು ಹಾಗೆ ವರ್ತಿಸುವ ಮಟ್ಟಕ್ಕೆ ಹೋಗಬಾರದಿತ್ತು. ಆ ಒಂದು ತಪ್ಪು ನನಗೆ ತುಂಬ ನೋವು ತಂದಿದೆ ಎಂದು ಭಜ್ಜಿ ಹೇಳಿದ್ದಾರೆ.
ಹರ್ಭಜನ್ ಸಿಂಗ್ ಮಾಡಿದ ಆ ಒಂದು ತಪ್ಪಿಗೆ ಅವರು ಹಲವು ಬಾರಿ ದೊಡ್ಡ ವೇದಿಕೆಯಲ್ಲಿ ಕ್ಷಮೆ ಕೇಳಿದ್ದಾರೆ. ಆದರೆ ಶ್ರೀಶಾಂತ್ ಮಗಳು ಹೇಳಿದ ಆ ಒಂದು ಮಾತು ಭಜ್ಜಿ ಅವರನ್ನು ಕುಗ್ಗಿಸಿದೆ. ಶ್ರೀಶಾಂತ್ ಮಗಳು, ನಾನು ನಿಮ್ಮೊಂದಿಗೆ ಮಾತನಾಡಲು ಬಯಸುವುದಿಲ್ಲ. ನೀನು ನನ್ನ ತಂದೆಗೆ ಹೊಡೆದಿದ್ದಿಯಾ ಎಂದು ಹೇಳಿದ್ದಾಳೆ. ಹೀಗಾಗಿ ಆ ಒಂದು ಮಾತು ಅವರಿಗೆ ಬಹಳ ಕಾಟ ನೀಡಿದ್ದಾಗಿ ತಿಳಿಸಿದ್ದಾರೆ. ನನ್ನ ಇಮೇಜ್ ಸುಧಾರಿಸಲು ನಾನು ಕಷ್ಟ ಪಡುತ್ತಿದ್ದ ಸಮಯದಲ್ಲಿ ಶ್ರೀಶಾಂತ್ ಮಗಳ ಹೇಳಿದ ಆ ಮಾತು ಭಜ್ಜಿ ಕಣ್ಣಲ್ಲಿ ನೀರು ತರಿಸಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಆ ಒಂದು ಘಟನೆ ಆ ಪುಟ್ಟ ಬಾಲಕಿಯ ಮೇಲೆ ಬೀರಿರುವ ಪರಿಣಾಮ ಮನಸ್ಸನ್ನು ಕೊರೆಯುತ್ತದೆ. ನಾನು ಇನ್ನೂ ಅವರ ಮಗಳಿಗೆ ಕ್ಷಮೆಯಾಚಿಸುತ್ತೇನೆ, ನಾನು ಏನನ್ನೂ ಮಾಡಲು ಸಾಧ್ಯವಿಲ್ಲ. ಅವಳು ದೊಡ್ಡವಳಾದಾಗ, ಅವಳು ನನ್ನನ್ನು ಆ ರೀತಿ ನೋಡಬಾರದು ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.