Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಂಗೆಯಲ್ಲಿ ಮಿಂದೆದ್ದ ಜಾಂಟಿ ರೋಡ್ಸ್: ಭಜ್ಜಿ ಮಾಡಿದ್ರು ವಿಶೇಷ ಮನವಿ

Harbhajan Singh Makes Special Request To Jonty Rhodes

ದಕ್ಷಿಣ ಆಫ್ರಿಕಾದ ಫೀಲ್ಡಿಂಗ್ ದಿಗ್ಗಜ ಜಾಂಟಿ ರೋಡ್ಸ್ ಭಾರತದಲ್ಲಿದ್ದಾರೆ. ಹೃರಿಕೇಶಕ್ಕೆ ತೆರಳಿದ್ದ ಜಾಂಟಿ ರೋಡ್ಸ್ ಗಂಗಾ ಸ್ನಾನ ಮಾಡಿದ್ದರು. ಇದರ ವೀಡಿಯೋವನ್ನು ಜಾಂಟ್‌ರೋಡ್ಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಜೊತೆಗೆ ಜಾಂಟಿರೋಡ್ಸ್ ಗಂಗಾಸ್ನಾನದ ಬಗ್ಗೆ ಬರೆದುಕೊಂಡಿದ್ದರು.

ದಕ್ಷಿಣ ಆಫ್ರಿಕಾ ದಿಗ್ಗಜನ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದೆ. ಇದೀಗ ಟೀಮ್ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕೂಡ ಈ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹರ್ಭಜನ್ ಸಿಂಗ್ ಈ ಫೋಟೋಗೆ ಪ್ರತಿಕ್ರಿಯೆ ನೀಡುವುದರ ಜೊತೆಗೆ ಜಾಂಟಿ ರೋಡ್ಸ್ ಬಳಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಹರ್ಭಜನ್ ಸಿಂಗ್ ತಮ್ಮ ಪೋಸ್ಟ್‌ನಲ್ಲಿ 'ನೀವು ನನಗಿಂತಲೂ ಹೆಚ್ಚು ಇಂಡಿಯಾವನ್ನು ಕಂಡಿರುವಿರಿ. ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿರುವುದು ನೋಡಲು ಖುಷಿಯಾತ್ತದೆ. ಮುಂದಿನ ಬಾರಿ ನನ್ನನ್ನೂ ಕರೆದುಕೊಂಡು ಹೋಗಿ ' ಎಂದು ಭಜ್ಜಿ ಮನವಿ ಮಾಡಿದ್ದಾರೆ.

ಜಾಂಟಿ ರೋಡ್ಸ್ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದು ಮಾರ್ಚ್ 7 ರಿಂದ ಆರಂಭವಾಗಲಿದೆ. ದಿಗ್ಗಜ ಕ್ರಿಕೆಟಿಗರು ಭಾಗಿಯಾಲಿರುವ ಈ ಟೂರ್ನಿಯಲ್ಲಿ ಐದು ತಂಡಗಳು ಭಾಗವಹಿಸುತ್ತಿದೆ.

ಇನ್ನು ಜಾಂಟಿ ರೋಡ್ಸ್ ಐಪಿಎಲ್‌ನಲ್ಲೂ ಭಾಗಿಯಾಗಲಿದ್ದಾರೆ. ಐಪಿಎಲ್ ಆರಂಭಿಕ ಟೂರ್ನಿಯಿಂದಲೂ ಐಪಿಎಲ್‌ನ ಭಾಗವಾಗಿದ್ದಾರೆ. ಆರಂಭದಲ್ಲಿ ಮುಂಬೈ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದ ಜಾಂಟಿ ಸದ್ಯ ಕಿಂಗ್ಸ್‌ ಇಲವೆನ್ ಪಂಜಾಬ್ ತಂಡದ ಕೋಚ್ ಆಗಿದ್ದಾರೆ.

Story first published: Thursday, March 5, 2020, 16:17 [IST]
Other articles published on Mar 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+