Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರಧಾನಿ ಮೋದಿಗೆ 'ಮದುವೆ ಆಮಂತ್ರಣ' ಪತ್ರಿಕೆ ಕೊಟ್ಟ ಹರ್ಭಜನ್

ನವದೆಹಲಿ, ಅ. 10: ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ.

ಅಕ್ಟೋಬರ್ ತಿಂಗಳ ಕೊನೆಯಲ್ಲಿ ಹರ್ಭಜನ್ ಸಿಂಗ್ ಅವರು ಬಾಲಿವುಡ್ ನಟಿ ಗೀತಾ ಬಾಸ್ರಾ ಅವರನ್ನು ವರಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಹರ್ಭಜನ್ ಲಗ್ನಪತ್ರಿಕೆ ನೀಡಿ ಆಹ್ವಾನಿಸಿದ ಫೋಟೊ ತೆಗೆಸಿಕೊಂಡಿದ್ದಾರೆ. ಇದೇ ಚಿತ್ರ ಪ್ರಧಾನಿ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಆಗಿದೆ.

Harbhajan Singh meets PM Modi

ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣ ಜೀನ್ಸ್ ಧರಿಸಿದ್ದ ಹರ್ಭಜನ್ ಅವರ ದಿರಿಸಿನ ಬಗ್ಗೆ ಕೂಡಾ ಟ್ವಿಟ್ಟರ್ ನಲ್ಲಿ ಚರ್ಚೆ ಆರಂಭವಾಗಿದೆ. ಮದುವೆ ಕರೆಯೋಲೆ ನೀಡಲು ಹೊರಡುವಾಗ ಒಳ್ಳೆ ಡ್ರೆಸ್ ಹಾಕಿಕೊಂಡು ಹೋಗಬಾರದಿತ್ತೇ? ಅದರಲ್ಲೂ ಪ್ರಧಾನಿ ಅವರನ್ನು ಆಹ್ವಾನಿಸುವಾಗ ಈ ರೀತಿ ಡ್ರೆಸ್ ಬೇಕಿತ್ತೇ? ಎಂದು ಕೆಲವರು ಪ್ರಶ್ನಿಸಿದ್ದಾರೆ.

ಅಕ್ಟೋಬರ್ 29ರಂದು ಜಲಂಧರ್ ನಿಂದ 20 ಕಿಲೋಮೀಟರ್ ದೂರದಲ್ಲಿರುವ ಹೊಟೇಲೊಂದರಲ್ಲಿ ಭಜ್ಜಿ ಮದುವೆ ನಡೆಯಲಿದೆ. ಅನೇಕ ಹಾಲಿ, ಮಾಜಿ ಕ್ರಿಕೆಟರ್ಸ್, ಉದ್ಯಮಿಗಳು, ಸಿನಿಮಾ ರಂಗದ ತಾರೆಯರು ಈ ಮದುವೆಗೆ ಆಗಮಿಸುತ್ತಿದ್ದಾರೆ. ಮದುವೆ ಆರತಕ್ಷತೆ ನವದೆಹಲಿಯಲ್ಲಿ ನಡೆಯಲಿದೆ.

ಇತ್ತೀಚೆಗೆ ಹರ್ಭಜನ್ ಹಾಗೂ ಗೀತಾ ಅವರ ಮದುವೆ ಆಮಂತ್ರಣ ಪತ್ರಿಕೆಯ ವಿನ್ಯಾಸ ಪ್ರಕಟವಾಗಿತ್ತು.ವಿವಾಹ ಮಹೋತ್ಸವದಲ್ಲಿ ಸಂಗೀತ್, ಮೆಹಂದಿ, ಮದುವೆ, ಆರತಕ್ಷತೆ ಸೇರಿದಂತೆ ಐದು ದಿನಗಳ ಸಂಭ್ರಮ ಇರುತ್ತದೆ.

ಅಕ್ಟೋಬರ್ 27ರಿಂದ ನವೆಂಬರ್ 1 ರ ತನಕ ದೇಶದ ಅನೇಕ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.ಸದ್ಯ ಹರ್ಭಜನ್ ಆವರು ಟೀಂ ಇಂಡಿಯಾ ಜೊತೆ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟಕ್ಕೆ ಮುಂದಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+