For Quick Alerts
ALLOW NOTIFICATIONS  
For Daily Alerts
 

ಪ್ರಸಕ್ತ ಕಾಲದ ಶ್ರೇಷ್ಠ ಸ್ಪಿನ್ನರ್ ಯಾರೆಂದು ಹೇಳಿದ ಹರ್ಭಜನ್ ಸಿಂಗ್

Harbhajan Singh Names ‘Best Off-spinner In World

ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಪ್ರಸಕ್ತ ಕಾಲದ ಶ್ರೇಷ್ಠ ಆಫ್ ಸ್ಪಿನ್ನರ್ ಯಾರೆಂದು ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಕಾಣಿಸಿಕೊಂಡಿದ್ದ ಭಜ್ಜಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಹಾಲಿ ಸ್ಪಿನ್ನರ್ ಆರ್ ಅಶ್ವಿನ್ ಕೂಡ ಜೊತೆಗಿದ್ದರು.

ಹರ್ಭಜನ್ ಸಿಂಗ್ ಪ್ರಶಕ್ತ ಶ್ರೇಷ್ಠ ಆಫ್ ಸ್ಪಿನ್ನರ್ ಎಂದು ಹೇಳಿದ್ದು ಬೇರೆ ಯಾರಗೂ ಅಲ್ಲ, ತಮ್ಮ ಜೊತೆಗೆ ಲೈವ್ ಸಂವಾದದಲ್ಲಿ ಭಾಗಿಯಾಗಿದ್ದ ಆರ್. ಅಶ್ವಿನ್‌ಗೆ. ಲಾಕ್‌ಡೌನ್ ಸಂದರ್ಭದಲ್ಲಿ ಸಂವಾದವನ್ನು ನಡೆಸಿದ ಈ ಇಬ್ಬರು ಲೆಗ್‌ ಸ್ಪಿನ್ನರ್‌ಗಳು ಹಲವಾರು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.

ಟೀಮ್ ಇಂಡಿಯಾಗೆ ಆರ್‌ ಅಶ್ವಿನ್ ಕಾಲಿಡುತ್ತಿದ್ದಂತೆಯೇ ಹರ್ಭಜನ್ ಸಿಂಗ್ ಅವಕಾಶಗಳು ಕಮರತೊಡಗಿತ್ತು. ಹರ್ಭಜನ್ ಬದಲಿಗೆ ಟೀಮ್ ಇಂಡಿಯಾದಲ್ಲಿ ಅಶ್ವಿನ್ ಅವಕಾಶವನ್ನು ಗಳಿಸಿಕೊಂಡು ಮಿಂಚಲು ಆರಂಭಿಸಿದ್ದರು. ಹೀಗಾಗಿ ಈ ಇಬ್ಬರ ಮಧ್ಯೆ ಸ್ನೇಹ ಉಳಿದಿರಲಾರದು ಎಂದು ಹೆಚ್ಚಿನ ಜನರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಇಬ್ಬರೂ ನೇರಸಂವಾದದಲ್ಲಿ ಪಾಲ್ಗೊಂಡು ಈ ಅನಿಸಿಕೆ ತಪ್ಪು ಎಂದು ಸಾರಿದ್ದಾರೆ.

ಲೈವ್ ಸಂವಾದದಲ್ಲಿ ಅಶ್ವಿನ್ ಕುರಿತು ಹರ್ಭಜನ್ ಸಿಂಗ್ ದಯವಿಟ್ಟು ಹುಶಾರಾಗಿರಿ, ಟೀಮ್ ಇಂಡಿಯಾಗೆ ನಿಮ್ಮ ಅಗತ್ಯ ಇನ್ನೂ ಬಹಳ ಕಾಲ ಇದೆ, ಮುಂದಿನ ದಿನಗಳಲ್ಲಿ ನೀವು ನನ್ನ ದಾಖಲೆಗಳನ್ನು ಮುರಿಯಬೇಕಿದೆ. ನಿಮ್ಮ ಮೇಲೆ ನನಗೆ ಹೊಟ್ಟಕಿಚ್ಚಿದೆ ಎಂದು ಬಹಳ ಜನರು ಅಂದುಕೊಂಡಿದ್ದಾರೆ. ಅವರಿಗೆ ಬೇಕಾದದ್ದು ಅಂದುಕೊಳ್ಳಲಿ ಆದರೆ ನಾನು ನಿಮಗೆ ಹೇಳುವುದೇನೆಂದರೆ ಪ್ರಸಕ್ತ ಆಡುತ್ತಿರುವವರಲ್ಲಿ ಶ್ರೇಷ್ಠ ಆಫ್ ಸ್ಪಿನ್ನರ್ ನೀವೆ ಎಂದು ಮನಬಿಚ್ಚಿ ಮಾತನಾಡಿದರು ಹರ್ಭಜನ್ ಸಿಂಗ್.

ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ನಥನ್ ಲಯನ್ ಬಗ್ಗೆಯೂ ಹರ್ಭಜನ್ ಸಿಂಗ್ ಹೊಗಳಿಕೆಯ ಮಾತುಗಳನ್ನಾಡಿದರು. ಆಸ್ಟ್ರೇಲಿಯಾ ನೆಲದಲ್ಲಿ ಸ್ಪಿನ್ ಬೌಲಿಂಗ್ ಮಾಡಿ ಗುರುತಿಸಿಕೊಳ್ಳುವುದು ಸುಲಭವಲ್ಲ ಎಂದು ಲಯನ್ ಗುಣಗಾನ ಮಾಡಿದರು ಹರ್ಭಜನ್ ಸಿಂಗ್.

Story first published: Tuesday, May 5, 2020, 21:23 [IST]
Other articles published on May 5, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+