Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕನ್ನಡಿಗ ಕ್ರಿಕೆಟರ್‌ನನ್ನು ದೇಶ ಕಂಡ ಅತಿ ಶ್ರೇಷ್ಠ ಮ್ಯಾಚ್ ವಿನ್ನರ್ ಎಂದ ಹರ್ಭಜನ್

Harbhajan Singh Names Greatest Match-winner India Has Ever Produced

ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ದೇಶ ಕಂಡ ಅತಿದೊಡ್ಡ ಮ್ಯಾಚ್ ವಿನ್ನರ್ ಯಾರು ಎಂಬುದನ್ನು ಹೇಳಿದ್ದಾರೆ. ವಿಶೇಷವೆಂದರೆ ಭಜ್ಜಿ ಹೇಳಿದ್ದು ಎಂಎಸ್ ಧೋನಿ ಹೆಸರು ಅಥವಾ ವಿರಾಟ್ ಕೊಹ್ಲಿಯನ್ನಲ್ಲ. ಕನ್ನಡಿಗ ದಿಗ್ಗಜ ಕ್ರಿಕೆಟಿಗನನ್ನು ಹರ್ಭಜನ್ ಭಾರತ ಕಂಡ ಅತಿ ಶ್ರೇಷ್ಠ ಮ್ಯಾಚ್ ವಿನ್ನರ್ ಎಂದಿದ್ದಾರೆ.

ತಾನು ಆತನ ಜೊತೆಗೆ ತನ್ನ ವೃತ್ತಿ ಜೀವನದಲ್ಲಿ ಬಹಳ ಕಾಲ ಜೊತೆಯಾಗಿ ಆಡಿದ್ದೇನೆ. ಈ ಅವಕಾಶ ನನ್ನ ಪಾಲಿಗೆ ದೊರೆತ ಅದೃಷ್ಟವೆಂದು ನಾನು ಭಾವಿಸುತ್ತೇನೆ ಎಂದು ಹರ್ಭಜನ್ ಹೇಳಿಕೆಯನ್ನು ನೀಡಿದ್ದಾರೆ. ಹಾಗಾದರೆ ಹರ್ಭಜನ್ ಹೇಳಿದ ಆ ಶ್ರೇಷ್ಠ ಕ್ರಿಕೆಟಿಗ ಯಾರು. ಯಾವ ಕನ್ನಡಿಗ ದಿಗ್ಗಜ ಕ್ರಿಕೆಟಿಗನನ್ನು ಭಜ್ಜಿ ಶ್ರೇಷ್ಠ ಮ್ಯಾಚ್ ವಿನ್ನರ್ ಎಂದಿದ್ದಾರೆ ಈ ಬಗ್ಗೆ ಮುಂದೆ ಓದಿ..

ಕನ್ನಡಿಗನ ಹೆಸರು ಹೇಳಿದ ಹರ್ಭಜನ್

ಕನ್ನಡಿಗನ ಹೆಸರು ಹೇಳಿದ ಹರ್ಭಜನ್

ಟೀಮ್ ಇಂಡಿಯಾದಲ್ಲಿ ಬಹಳ ಕಾಲ ಸ್ಪಿನ್ ಜೋಡಿಯಾಗಿ ಗುರುತಿಸಿಕೊಂಡ ಆಟಗಾರರು ಅಂದರೆ ಅದು ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆ. ಇಲ್ಲಿ ಹರ್ಭಜನ್ ಸಿಂಗ್ ಶ್ರೇಷ್ಠ ಮ್ಯಾಟ್ ವಿನ್ನರ್ ಅಂತ ಹೇಳಿದ್ದು ತನ್ನ ಜೊತೆಗಾರ ಬೌಲರ್ ವಿಶ್ವ ಶ್ರೇಷ್ಠ ಲೆಗ್ ಸ್ಪಿನ್ನರ್ ಎಂದೆಸಿಕೊಂಡಿರುವ ಕನ್ನಡಿಗ ಅನಿಲ್ ಕುಂಬ್ಳೆ ಬಗ್ಗೆ.

ಭಾರತದ ಪರ ಆಡಿದ ಶ್ರೇಷ್ಠ ಆಟಗಾರ

ಭಾರತದ ಪರ ಆಡಿದ ಶ್ರೇಷ್ಠ ಆಟಗಾರ

ಅನಿಲ್ ಕುಂಬ್ಳೆ ಬಗ್ಗೆ ಮಾತನಾಡುತ್ತಾ ಹರ್ಭಜನ್ ಸಿಂಗ್, ನನ್ನ ಪ್ರಕಾರ ಭಾರತ ಪರ ಕ್ರಿಕೆಟ್ ಆಡಿದ ಆಟಗಾರರ ಪೈಕಿ ಅನಿಲ್ ಕುಂಬ್ಳೆ ಶ್ರೇಷ್ಠ ಆಟಗಾರ ಎನಿಸಿಕೊಳ್ಳುತ್ತಾರೆ. ಅವರು ಭಾರತ ಕಂಡ ಶ್ರೇಷ್ಠ ಮ್ಯಾಚ್ ವಿನ್ನರ್ ಎಂಬುದು ನನ್ನ ಅನಿಸಿಕೆ ಎಂದು ಹರ್ಭಜನ್ ಹೇಳಿದ್ದಾರೆ. ಅವರ ಜೊತೆಗೆ ದೀರ್ಘ ಕಾಲ ಆಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಠ ಎಂದಿದ್ದಾರೆ ಹರ್ಭಜನ್ ಸಿಂಗ್

ಗಂಭೀರ್ ಕೂಡ ಹೇಳಿದ್ದರು ಇದೇ ಮಾತು

ಗಂಭೀರ್ ಕೂಡ ಹೇಳಿದ್ದರು ಇದೇ ಮಾತು

ಇನ್ನು ಅನಿಲ್ ಕುಂಬ್ಳೆ ಶ್ರೇಷ್ಠ ಮ್ಯಾಚ್ ವಿನ್ನರ್ ಎಂದು ಈ ಹಿಂದೆಯೂ ಟೀಮ್ ಇಂಡಿಯಾದ ಮಾಜಿ ಆಟಗಾರ ಹೇಳಿಕೆಯನ್ನು ನೀಡಿದ್ದರು. ಟೀಮ್ ಇಂಡಿಯಾದ ಮಾಜಿ ಆರಂಭಕ ಆಟಗಾರ ಗೌತಮ್ ಗಂಭೀರ್ ಅನಿಲ್ ಕುಂಬ್ಳೆ ಬಗ್ಗೆ ಇದೇ ಮಾತುಗಳನ್ನು ಹೇಳಿದ್ದರು. ಭಾರತದ ದೊಡ್ಡ ಮ್ಯಾಚ್ ವಿನ್ನರ್ ಅನಿಲ್ ಕುಂಬ್ಳೆ ಎಂದಿದ್ದರು ಗಂಭೀರ್.

ಗಂಗೂಲಿ ಬೆಂಬಲ ಅಪಾರ

ಗಂಗೂಲಿ ಬೆಂಬಲ ಅಪಾರ

ಇನ್ನು ಇದೇ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ತಮ್ಮ ವೃತ್ತಿ ಜೀವನದ ಆರಂಭದ ದಿನಗಳ ಬಗ್ಗೆ ಹೇಳಿದ್ದಾರೆ. ತಾನು ಉತ್ತಮ ಪ್ರದರ್ಶನವನ್ನು ನೀಡಲು ನಾಯಕ ಗಂಗೂಲಿ ಸಹಕಾರ ಅತಿ ದೊಡ್ಡದು ಎಂದಿದ್ದಾರೆ. ಗಂಗೂಲಿ ನನಗೆ ಬೆಂಬಲವನ್ನು ನೀಡದಿದ್ದರೆ ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ 400ಕ್ಕೂ ಅಧಿಕ ಟೆಸ್ಟ್ ವಿಕೆಟ್ ಪಡೆಯಲು ಸಾಧ್ಯವಿರುತ್ತಿರಲಿಲ್ಲ ಎಂದಿದ್ದಾರೆ.

Story first published: Monday, June 22, 2020, 9:52 [IST]
Other articles published on Jun 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+