ಆಗಸ್ಟ್ 12 ಸೋಮವಾರ, ಟಿ20 ವಿಶ್ವಕಪ್ ಗೆಲುವಿನ ಬಳಿಕ ಭಾರತ ತಂಡದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಮಾತ್ರ ಟೀಮ್ ಇಂಡಿಯಾ ಪರ ಆಡಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ರೋಹಿತ್ ಮತ್ತು ವಿರಾಟ್ ವೃತ್ತಿಜೀವನದ ಬಗ್ಗೆ ಚರ್ಚೆಗಳು ಶುರುವಾಗಿದೆ.
ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಸ್ಟಾರ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ರೋಹಿತ್ ಮತ್ತು ವಿರಾಟ್ ಅವರ ವೃತ್ತಿಜೀವನದ ಬಗ್ಗೆ ಭವಿಷ್ಯ ನುಡಿದ್ದಾರೆ. ಈ ಭವಿಷ್ಯ ಕೇಳಿದ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳು ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ.

ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಹರ್ಭಜನ್ ಸಿಂಗ್, 'ರೋಹಿತ್ ಇನ್ನೂ 2 ವರ್ಷಗಳ ಕಾಲ ಸುಲಭವಾಗಿ ಆಡಬಹುದು. ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಅನ್ನು ಬೇರೆಯವರೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಹೀಗಾಗಿ ಅವರು ಮುಂದಿನ 5 ವರ್ಷಗಳ ಕಾಲ ಆಡುವುದನ್ನು ನೋಡಬಹುದು. ಅವರು ಬಹುಶಃ ತಂಡದಲ್ಲಿ ಅತ್ಯಂತ ಫಿಟ್ ಅಗಿರುವ ಆಟಗಾರರಾಗಿದ್ದಾರೆ ಎಂದು ಹೇಳಿದ್ದಾರೆ.
ಫಿಟ್‌ನೆಸ್ ವಿಷಯದಲ್ಲಿ ವಿರಾಟ್‌ನೊಂದಿಗೆ ಸ್ಪರ್ಧಿಸಲು ಯಾವುದೇ 19 ವರ್ಷದ ಯುವಕರ ಇಳಿಸಿದರು. ವಿರಾಟ್ ಅವರನ್ನು ಸೋಲಿಸುತ್ತಾರೆ. ಅವರು ತುಂಬಾ ಫಿಟ್ ಆಗಿದ್ದಾರೆ. ವಿರಾಟ್ ಮತ್ತು ರೋಹಿತ್ ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂದು ನಾನು ನಂಬುತ್ತೇನೆ.
ಆದರೆ ಇಬ್ಬರು ಆಟಗಾರರು ಎಷ್ಟು ಸಮಯ ಆಡಲು ಬಯಸುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು. ಇಬ್ಬರೂ ಫಿಟ್ ಆಗಿ ಉಳಿದು ತಮ್ಮ ಪ್ರದರ್ಶನದ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿ ಆಟವನ್ನು ಮುಂದುವರೆಬೇಕು ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.
ಭಾರತ ಟೆಸ್ಟ್ ತಂಡಕ್ಕೆ ರೋಹಿತ್ ಮತ್ತು ವಿರಾಟ್ ಅಗತ್ಯವಿದೆ. ಏಕೆಂದರೆ ಆಟಗಾರರಿಗೆ ಮೂರು ಮಾದರಿ ಸ್ವರೂಪಗಳಲ್ಲಿ ಅನುಭವ ಬೇಕು. ಮುಂಬರುವ ಪ್ರತಿಭೆಗಳನ್ನು ರೂಪಿಸಲು ಅನುಭವಿ ಕ್ರಿಕೆಟಿಗರ ಅಗತ್ಯವಿದೆ. ಹೀಗಾಗಿ ಈ ಇಬ್ಬರು ಆಟಗಾರರು ರೆಡ್ ಬಾಲ್ ಕ್ರಿಕೆಟ್‌ಗೆ ಅನಿವಾರ್ಯವಾಗಿದ್ದಾರೆ.
ಆಟಗಾರ ಸ್ಥಿರ ಪ್ರದರ್ಶನ ನೀಡದಿದ್ದರೆ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಹರ್ಭಜನ್ ಹೇಳಿದ್ದಾರೆ . ಯಾವ ಆಟಗಾರ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂಬುದನ್ನು ಆಯ್ಕೆದಾರರು ನೋಡಬೇಕು. ಹಿರಿಯರಿರಲಿ, ಕಿರಿಯರಿರಲಿ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಬಿಸಿಸಿಐ ಆಯ್ಕೆಗೆ ಸಲಹೆ ನೀಡಿದ್ದಾರೆ.