Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹರ್ಭಜನ್ ಸಿಂಗ್ ನಿವೃತ್ತಿ: ದಿಗ್ಗಜ ಆಫ್‌ಸ್ಪಿನ್ನರ್‌ನ ಕ್ರಿಕೆಟ್ ವೃತ್ತಿ ಜೀವನದ ಪ್ರಮುಖ ಅಂಕಿಅಂಶಗಳು

Harbhajan Singh retired: Statistical achievements of legendary India off-spinners career

ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ವರ್ಣರಂಚಿತ ವೃತ್ತಿ ಜೀವನಕ್ಕೆ ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ತೆರೆ ಎಳೆದಿದ್ದಾರೆ. 2016ರಲ್ಲಿ ಅಂತಿಮ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದ ಹರ್ಭಜನ್ ಸಿಂಗ್ ವಿದಾಯದ ಪಂದ್ಯವನ್ನು ಆಡದೆಯೇ ನಿವತ್ತಿ ಹೇಳಿದ ಭಾರತೀಯ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

23 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಹರ್ಭಜನ್ ಸಿಂಗ್ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ. ಅನೇಕ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಆಗಿ ಮೆರೆದಿದ್ದಾರೆ. 103 ಟೆಸ್ಟ್ ಪಂದ್ಯಗಳನ್ನು ಆಡಿರುವ ಹರ್ಭಜನ್ ಸಿಂಗ್ 417 ವಿಕೆಟ್ ಪಡೆದುಕೊಂಡಿದ್ದು ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ 14ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭಾರತೀಯರ ಪೈಕಿ, ಅನಿಲ್ ಕುಂಬ್ಳೆ, ಕಪಿಲ್‌ದೇವ್, ಆರ್ ಅಶ್ವಿನ್ ಬಳಿಕ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಹರ್ಭಜನ್ ಸಿಂಗ್ ಅವರ ವೃತ್ತಿ ಜೀವನದ ಪ್ರಮುಖ ಅಂಕಿಅಂಶಗಳನ್ನು ನೋಡೋಣ
ಟೆಸ್ಟ್ ಪದಾರ್ಪಣೆ : 1998ರ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪದಾರ್ಪಣೆ

ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡಗಳ ವಿರುದ್ಧ ಭಜ್ಜಿ ಪಡೆದ ವಿಕೆಟ್‌ಗಳು
ಆಸ್ಟ್ರೇಲಿಯಾ ವಿರುದ್ಧ 18 ಪಂದ್ಯಗಳಲ್ಲಿ 95 ವಿಕೆಟ್
ದಕ್ಷಿಣ ಆಫ್ರಿಕಾ ವಿರುದ್ಧ 11 ಪಂದ್ಯಗಳಲ್ಲಿ 60 ವಿಕೆಟ್
ವೆಸ್ಟ್ ಇಂಡೀಸ್ ವಿರುದ್ಧ 11 ಪಂದ್ಯಗಳಲ್ಲಿ 56 ವಿಕೆಟ್
ಶ್ರೀಲಂಕಾ ವಿರುದ್ಧ 16 ಪಂದ್ಯಗಳಲ್ಲಿ 53 ವಿಕೆಟ್‌ಗಳು
ಇಂಗ್ಲೆಂಡ್ ವಿರುದ್ಧ 14 ಪಂದ್ಯಗಳಲ್ಲಿ 45 ವಿಕೆಟ್

ಹರ್ಭಜನ್ ಸಿಂಗ್ ಅವರ ಯಶಸ್ವಿ ಟೆಸ್ಟ್ ಋತು
2002: 13 ಪಂದ್ಯಗಳಲ್ಲಿ 63 ವಿಕೆಟ್‌ಗಳು (ಐದು ಬಾರಿ 5 ವಿಕೆಟ್ ಗೊಂಚಲು)
2001: 12 ಪಂದ್ಯಗಳಲ್ಲಿ 60 ವಿಕೆಟ್‌ಗಳು (ಆರು ಬಾರಿ 5 ವಿಕೆಟ್ ಗೊಂಚಲು, ಎರಡು 10 ವಿಕೆಟ್ ಗೊಂಚಲು)

ಟೆಸ್ಟ್ ಕ್ರಿಕೆಟ್ ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ ಶ್ರೇಷ್ಠ ಬೌಲಿಂಗ್ ಸಾಧನೆ:
2001 ರ ಮಾರ್ಚ್ 18ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಹರ್ಭಜನ್ ಸಿಂಗ್ 8/84 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಏಕದಿನ ಪದಾರ್ಪಣೆ: ಏಪ್ರಿಲ್ 17, 1998ರಂದು ಶಾರ್ಜಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ

ಏಕದಿನ ಕ್ರಿಕೆಟ್‌ನಲ್ಲಿ ತಂಡಗಳ ವಿರುದ್ಧ ಭಜ್ಜಿ ಪಡೆದ ವಿಕೆಟ್‌ಗಳು

ಶ್ರೀಲಂಕಾ ವಿರುದ್ಧ 47 ಪಂದ್ಯಗಳಲ್ಲಿ 61 ವಿಕೆಟ್
ಇಂಗ್ಲೆಂಡ್ ವಿರುದ್ಧ 23 ಪಂದ್ಯಗಳಲ್ಲಿ 36 ವಿಕೆಟ್
ವೆಸ್ಟ್ ಇಂಡೀಸ್ ವಿರುದ್ಧ 31 ಪಂದ್ಯಗಳಲ್ಲಿ 33 ವಿಕೆಟ್
ಆಸ್ಟ್ರೇಲಿಯಾ ವಿರುದ್ಧ 35 ಪಂದ್ಯಗಳಲ್ಲಿ 32 ವಿಕೆಟ್
ದಕ್ಷಿಣ ಆಫ್ರಿಕಾ ವಿರುದ್ಧ 24 ಪಂದ್ಯಗಳಲ್ಲಿ 31 ವಿಕೆಟ್‌ಗಳು

ಹರ್ಭಜನ್ 28 ಟಿ20 ಪಂದ್ಯಗಳಲ್ಲಿ 25 ವಿಕೆಟ್ ಕಬಳಿಸಿದ್ದಾರೆ.

Virat ಟೈಮ್ ಮುಗೀತು ಈಗ Ganguly ಟೈಮ್ ಅಂತಾ ರವಿ ಶಾಸ್ತ್ರಿ ಹೇಳಿದ್ಯಾಕೆ? | Oneindia Kannada

Story first published: Friday, December 24, 2021, 20:35 [IST]
Other articles published on Dec 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+