ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್‌ನಲ್ಲಿ ಆರ್‌ಸಿಬಿ, ಎಸ್‌ಆರ್‌ಎಚ್, ಸಿಎಸ್‌ಕೆ ತಂಡಗಳು ಶುಭಾರಂಭ ಮಾಡಿವೆ. ಈ ವೇಳೆ ಭಾನುವಾರ ಹೈದರಾಬಾದ್‌ನಲ್ಲಿ ಟೂರ್ನಿ ಎರಡನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಸನ್ ತಂಡ ರನ್ ಸುರಿ ಮಳೆ ಸುರಿಸಿತು. ಈ ವೇಳೆ ಹಲವು ದಾಖಲೆಗಳು ದಾಖಲಾದವು. ಇದೇ ಪಂದ್ಯದ ವೇಳೆ ವಿವಾದವೊಂದು ಹುಟ್ಟಿಕೊಂಡಿದೆ.
ಐಪಿಎಲ್ ಪ್ರಸಕ್ತ ಆವೃತ್ತಿಯ 2ನೇ ಪಂದ್ಯದಲ್ಲಿ ಸನ್ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 286 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 242 ರನ್ ಸೇರಿಸಿತು. ಈ ಪಂದ್ಯದ ವೇಳೆ ಜೋಫ್ರಾ ಆರ್ಚರ್ ಬಹು ದಂಡನೆಗೆ ಒಳಗಾದ್ರು. ಇವರು ಐಪಿಎಲ್‌ನಲ್ಲಿ ಬೇಡದ ದಾಖಲೆಯನ್ನು ಸಹ ನಿರ್ಮಿಸಿದರು. ಇದೇ ಪಂದ್ಯದ ಕಮೆಂಟರಿ ಮಾಡ್ತಾ ಇದ್ದ ಹರ್ಭಜನ್ ಸಿಂಗ್ ನೀಡಿದ ಆ ಒಂದು ಹೇಳಿಕೆ ಈಗ ವಿವಾದವನ್ನು ಸೃಷ್ಟಿಸಿದೆ.

ಸನ್ ರೈಸರ್ಸ್ ತಂಡ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಪಂದ್ಯದ 18ನೇ ಓವರ್‌ನ್ನು ಜೋಫ್ರಾ ಆರ್ಚರ್ ಬೌಲಿಂಗ್ ಮಾಡ್ತಾ ಇದ್ದರು. ಈ ವೇಳೆ ಹರ್ಭಜನ್ ಸಿಂಗ್ ಕಮೆಂಟರಿ ಮಾಡ್ತಾ ಇದ್ದರು. ಇದೇ ಓವರ್‌ನಲ್ಲಿ ಜೋಫ್ರಾ ಆರ್ಚರ್ ಹೆಚ್ಚು ರನ್ ನೀಡಿದ್ದಾರೆ ಎಂದು ಹೇಳಲು, ಭಜ್ಜಿ ಒಂದು ಉದಾಹರಣೆಯನ್ನು ನೀಡಿದರು. ಈಗ ಆ ಉದಾಹರಣೆ ಬಹಳ ಚರ್ಚೆಗೆ ಗ್ರಾಸವಾಗಿದೆ.
18ನೇ ಓವರ್‌ನಲ್ಲಿ ಹರ್ಭಜನ್ ಸಿಂಗ್ ಕಮೆಂಟರಿ ಮಾಡುತ್ತಾ, " ಲಂಡನ್‌ನಲ್ಲಿ ಕಪ್ಪು ಟ್ಯಾಕ್ಸಿಯ ಮೀಟರ್ ವೇಗವಾಗಿ ಓಡುತ್ತದೆ. ಹಾಗೇಯೆ ಈ ಪಂದ್ಯದಲ್ಲಿ ಆರ್ಚರ್ ಸಾಹೇಬ್‌ನ ಮೀಟರ್ ಓಡ್ತಾ ಇದೆ ಎಂದು ಹೇಳಿದ್ದರು. ಈ ಹೇಳಿಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಈ ವರೆಗೆ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಯಾವುದೇ ಪ್ರತಿಕ್ರಿಯೇ ನೀಡಿಲ್ಲ.
ಹರ್ಭಜನ್ ಸಿಂಗ್ ಕಮೆಂಟ್ ಮಾಡುತ್ತಲೇ ಇದು ಸಾಮಾಜಿಕ ತಾಣದಲ್ಲಿ ಚರ್ಚಾ ವಸ್ತುವಾಗಿದೆ. ಭಜ್ಜಿ ಹೀಗೆ ಹೇಳಿದ್ದು ತಪ್ಪು ಎಂದು ಬಹಳ ಜನರು ಹೇಳಿದ್ದಾರೆ. ಅಲ್ಲದೆ ಇವರನ್ನು ನಿಷೇಧಿಸುವಂತೆಯೂ ಕೂಗುಗಳು ಕೇಳಿ ಬರುತ್ತಿದೆ.
ಈ ಪಂದ್ಯದಲ್ಲಿ ಜೋಪ್ರಾ ಆರ್ಚರ್ 4 ಓವರ್ ಬೌಲಿಂಗ್ ನಡೆಸಿ 76 ರನ್ ನೀಡಿದ್ದರು. ಬೌಲರ್ ಒಬ್ಬ ಐಪಿಎಲ್ ಇತಿಹಾಸದಲ್ಲಿ ನೀಡಿದ ಗರಿಷ್ಠ ರನ್. ಈ ಮೂಲಕ ಜೋಫ್ರಾ ಆರ್ಚರ್ ಮೋಹಿತ್ ಶರ್ಮಾ ಅವರ ದಾಖಲೆಯನ್ನು ಅಳಿಸಿ ಹಾಕಿದ್ರು. ಈ ಪಂದ್ಯವನ್ ಸನ್ ರೈಸರ್ಸ್ ತಂಡ 44 ರನ್‌ಗಳಿಂದ ಗೆದ್ದು ಕೊಂಡಿದೆ.